‘ಕೋಟಿಗೊಬ್ಬ 3’ ವಿರುದ್ಧ ಷಡ್ಯಂತ್ರ ಆಗಿದೆ; ‘ಸಲಗ’ ತಂಡ ಇದರಲ್ಲಿ ಭಾಗಿ ಆಗಿಲ್ಲ: ಜಾಕ್​ ಮಂಜು ಸ್ಪಷ್ಟನೆ

‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಗೆ ಅಡ್ಡಿ ಉಂಟು ಮಾಡಿದವರು ಯಾರು ಎಂಬುದನ್ನು ಸುದೀಪ್​ ಆಪ್ತ ಜಾಕ್​ ಮಂಜು ವಿವರಿಸಿದ್ದಾರೆ. ಈಗ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಮಂಜು ಮತ್ತು ಅವರ ಸ್ನೇಹಿತರು ಹೊತ್ತುಕೊಂಡಿದ್ದಾರೆ. ಸರಾಗವಾಗಿ ಸಿನಿಮಾ ರಿಲೀಸ್​ ಆಗಿದೆ.

‘ಕೋಟಿಗೊಬ್ಬ 3’ ವಿರುದ್ಧ ಷಡ್ಯಂತ್ರ ಆಗಿದೆ; ‘ಸಲಗ’ ತಂಡ ಇದರಲ್ಲಿ ಭಾಗಿ ಆಗಿಲ್ಲ: ಜಾಕ್​ ಮಂಜು ಸ್ಪಷ್ಟನೆ
ಜಾಕ್​ ಮಂಜು, ಸುದೀಪ್​
Follow us
TV9 Web
| Updated By: ಮದನ್​ ಕುಮಾರ್​

Updated on:Oct 15, 2021 | 1:09 PM

ಅ.14ರಂದು ‘ಕೋಟಿಗೊಬ್ಬ 3’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ರಿಲೀಸ್​ ಒಂದು ದಿನ ತಡವಾಯಿತು. ಈ ಬಗ್ಗೆ ಸುದೀಪ್​ ಅವರ ಆಪ್ತರಾದ ಜಾಕ್​ ಮಂಜು ಮಾತನಾಡಿದ್ದಾರೆ. ‘ಈ ಸಂದರ್ಭದಲ್ಲಿ ರಿಲೀಸ್​ ಆಗಿರುವ ಬೇರೆ ಸಿನಿಮಾಗಳ ನಿರ್ಮಾಪಕರಿಂದ ಖಂಡಿತವಾಗಿಯೂ ‘ಕೋಟಿಗೊಬ್ಬ 3’ ಚಿತ್ರಕ್ಕೆ ತೊಂದರೆ ಆಗಿಲ್ಲ. ಕೆಪಿ ಶ್ರೀಕಾಂತ್​ (ಸಲಗ ನಿರ್ಮಾಪಕ) ಮತ್ತು ಸುದೀಪ್​ ಅವರು ಆತ್ಮೀಯ ಸ್ನೇಹಿತರು. ಶ್ರೀಕಾಂತ್​ ಭಾಮೈದ ವಾಸು ಕೂಡ ನಮಗೆ ಸಹಾಯ ಮಾಡಿದ್ದಾರೆ. ಒಂದು ವೇಳೆ ಅವರು ಸಲಗ ಚಿತ್ರಕ್ಕೋಸ್ಕರ ಕೋಟಿಗೊಬ್ಬ ರಿಲೀಸ್​ ಆಗಬಾರದು ಎಂಬ ಉದ್ದೇಶ ಇಟ್ಟುಕೊಂಡಿದ್ದರೆ ನಮಗೆ ಅವರು ಸಹಾಯವನ್ನೇ ಮಾಡುತ್ತಿರಲಿಲ್ಲ. ವಿಜಯ್​ ಮತ್ತು ಶ್ರೀಕಾಂತ್​ ಅವರಿಗೆ ಕೆಟ್ಟ ಉದ್ದೇಶ ಇಲ್ಲ’ ಎಂದು ಜಾಕ್​ ಮಂಜು ಹೇಳಿದ್ದಾರೆ.

‘10ರಿಂದ 13 ಜನರು ಒಟ್ಟುಗೂಡಿ ಷಡ್ಯಂತ್ರ ರೂಪಿಸಿದ್ದಾರೆ. ಅವರ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಯಾಕೆಂದರೆ ಅವರೂ ನಮ್ಮ ಜೊತೆ ಕುಳಿತು ಊಟ ಮಾಡಿ, ಕಾಫಿ ಕುಡಿದಿರುತ್ತಾರೆ. ಆ ಭಗವಂತನ ಲೀಲೆ ಮುಂದೆ ಯಾರೂ ಇಲ್ಲ. ನಮ್ಮ ಸಿನಿಮಾ ಚೆನ್ನಾಗಿದ್ದರೆ ಖಂಡಿತಾ ಜನರು ನೋಡುತ್ತಾರೆ. ಅಡಚಣೆ ಆಗುವುದಕ್ಕೆ ಮೂಲ ಕಾರಣ ನಮ್ಮ ನಿರ್ಮಾಪಕರು. ಬೇರೆ ಯಾರನ್ನೂ ನಾನು ದೂಷಣೆ ಮಾಡುವುದಿಲ್ಲ. ಆದರೆ ಅವರದ್ದೇ ತಪ್ಪು ಎಂದು ನಾನು ಹೇಳುತ್ತಿಲ್ಲ. ತಮಗೆ ಏನು ಸಮಸ್ಯೆ ಆಗಿದೆ, ಯಾರಿಂದ ತೊಂದರೆ ಆಗುತ್ತಿದೆ ಎಂದು ಸುದೀಪ್​ ಸರ್​ ಬಳಿ ಹೇಳಿಕೊಂಡಿದ್ದರೆ ಅದನ್ನು ಕ್ಷಣಮಾತ್ರಲ್ಲಿ ಪರಿಹರಿಸಬಹುದಾಗಿತ್ತು’ ಎಂದು ಜಾಕ್​ ಮಂಜು ಹೇಳಿದ್ದಾರೆ.

‘ಸೂರಪ್ಪ ಬಾಬು ಅನುಭವಿ ನಿರ್ಮಾಪಕರು. ವಿಷ್ಣುವರ್ಧನ್​ ಜೊತೆ ಸಿನಿಮಾ ಮಾಡಿದವರು ಅವರು. ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆ ಹಲವು ತಿಂಗಳುಗಳ ಕಾಲ ತಡವಾಯಿತು. ನಿರ್ಮಾಪಕ ಸೂರಪ್ಪ ಬಾಬು ಏಕಾಂಗಿ 70ರಿಂದ 80 ಕೋಟಿ ರೂ. ಬಜೆಟ್​ ಹಾಕಿ, ಫೈನಾನ್ಸ್​ ತೆಗೆದುಕೊಂಡು ಸಿನಿಮಾ ಮಾಡಿದ್ದಾರೆ. ಬಿಡುಗಡೆ ತಡವಾಗಿ, ಬಡ್ಡಿ ಬೆಳೆದಾಗ ಕಷ್ಟವಾಯಿತು. 7 ವಿಭಾಗಗಳಿಗೆ ಚಿತ್ರವನ್ನು ವಿತರಣೆ ಮಾಡಲು ಮಾತುಕತೆ ಆಗಿತ್ತು. ಮೈಸೂರು ಮತ್ತು ಚಿತ್ರದುರ್ಗದ ವಿತರಕರು ಶೇ.20ರಷ್ಟು ಮುಂಗಡ ಹಣ ನೀಡಿದ್ದರು. ಆದರೆ ಬಿಡುಗಡೆ ಹಿಂದಿನ ದಿನ ರಾತ್ರಿ 12 ಗಂಟೆವರೆಗೂ ಪೂರ್ತಿ ಹಣ ನೀಡಲಿಲ್ಲ. ಅದರಿಂದಾಗಿ ಸೂರಪ್ಪ ಬಾಬು ದಿಗ್ಭ್ರಮೆಗೆ ಒಳಗಾದರು’ ಎಂದು ಜಾಕ್​ ಮಂಜು ಹೇಳಿದ್ದಾರೆ.

‘ಆ ಕೊನೇ ಕ್ಷಣದಲ್ಲಿ ಸುದೀಪ್​ಗೆ ಸೂರಪ್ಪ ಬಾಬು ಫೋನ್​ ಮಾಡಿದ್ದರೂ ಕೂಡ ಏನಾದರೂ ಪರಿಹಾರ ಸೂಚಿಸಬಹುದಿತ್ತು. ಆದರೆ ಅವರೇ ಸ್ವಂತ ಬಲದಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ’ ಎಂದು ಅಸಲಿ ಕಾರಣವನ್ನು ಜಾಕ್​ ಮಂಜು ವಿವರಿಸಿದ್ದಾರೆ. ಈಗ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಮಂಜು ಮತ್ತು ಅವರ ಸ್ನೇಹಿತರು ಹೊತ್ತುಕೊಂಡಿದ್ದಾರೆ. ಸರಾಗವಾಗಿ ಸಿನಿಮಾ ಬಿಡುಗಡೆ ಆಗಿದೆ.

ಇದನ್ನೂ ಓದಿ:

‘ಕೋಟಿಗೊಬ್ಬ’ನಿಗೆ ಅದ್ದೂರಿ ಸ್ವಾಗತ; ದಸರಾ ಹಬ್ಬದ ಸಡಗರ ಹೆಚ್ಚಿಸಿದ ಸುದೀಪ್​ ಸಿನಿಮಾ

Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್​ನಿಂದ​ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್​; ಅಂಥ ವಿಶೇಷ ಇದರಲ್ಲೇನಿದೆ?

Published On - 1:02 pm, Fri, 15 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ