‘ಕೋಟಿಗೊಬ್ಬ’ನಿಗೆ ಅದ್ದೂರಿ ಸ್ವಾಗತ; ದಸರಾ ಹಬ್ಬದ ಸಡಗರ ಹೆಚ್ಚಿಸಿದ ಸುದೀಪ್​ ಸಿನಿಮಾ

‘ಕೋಟಿಗೊಬ್ಬ’ನಿಗೆ ಅದ್ದೂರಿ ಸ್ವಾಗತ; ದಸರಾ ಹಬ್ಬದ ಸಡಗರ ಹೆಚ್ಚಿಸಿದ ಸುದೀಪ್​ ಸಿನಿಮಾ

TV9 Web
| Updated By: ಮದನ್​ ಕುಮಾರ್​

Updated on: Oct 15, 2021 | 8:01 AM

‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್​ಗೆ ಜೋಡಿಯಾಗಿ ಮಡೊನ್ನಾ ನಟಿಸಿದ್ದಾರೆ. ಶಿವ ಕಾರ್ತಿಕ್​ ನಿರ್ದೇಶನ ಮಾಡಿದ್ದಾರೆ. ವಿತರಕರು ಬದಲಾದ ಹಿನ್ನೆಲೆಯಲ್ಲಿ ಎಲ್ಲ ವಿಘ್ನಗಳೂ ನಿವಾರಣೆ ಆಗಿವೆ.

ಕೋಟಿಗೊಬ್ಬ ಗ್ರ್ಯಾಂಡ್​ ಎಂಟ್ರಿ ನೀಡಿದ್ದಾನೆ. ಅನೇಕ ಚಿತ್ರಮಂದಿರಗಳಲ್ಲಿ ಇಂದು (ಅ.15) ಬೆಳಗ್ಗೆ 7 ಗಂಟೆಗೆ ಪ್ರದರ್ಶನ ಆರಂಭಗೊಂಡಿದೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಗಾಂಧಿನಗರದ ಭೂಮಿಕಾ ಥಿಯೇಟರ್​, ಎಸ್​.ಪಿ. ರಸ್ತೆಯಲ್ಲಿರುವ ಶಾರದಾ ಟಾಕೀಸ್​ ಸೇರಿದಂತೆ ಹಲವು ಕಡೆಗಳಲ್ಲಿ ಫ್ಯಾನ್ಸ್​ ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ನಿನ್ನೆಯಿಂದಲೇ (ಅ.14) ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಅಭಿಮಾನಿಗಳೆಲ್ಲ ಇಂದು ಆದಷ್ಟು ಬೇಗ ಟಿಕೆಟ್​ ನೀಡುವಂತೆ ಚಿತ್ರಮಂದಿರದವರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಒಟ್ಟಾರೆಯಾಗಿ ಸುದೀಪ್​ ಫ್ಯಾನ್ಸ್​ ಬೆಳ್ಳಂಬೆಳಗ್ಗೆಯೇ ಸಖತ್​ ಆಗಿ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ‘ಕೋಟಿಗೊಬ್ಬ 3’ ಚಿತ್ರದ ರಿಲೀಸ್​ಗೆ ಗುರುವಾರ ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ವಾಪಸ್​ ತೆರಳಿದ್ದರು. ಆದರೆ ಇಂದು ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಆಗಿದ್ದು, ಫ್ಯಾನ್ಸ್​ ಸಡಗರ ಜೋರಾಗಿದೆ.

ಇದನ್ನೂ ಓದಿ:

Kichcha Sudeep: ‘ಕೋಟಿಗೊಬ್ಬ 3’ ರಿಲೀಸ್​: ಬೆಳ್ಳಂಬೆಳಗ್ಗೆಯೇ ಥಿಯೇಟರ್​ ಮುಂದೆ ಹೇಗಿದೆ ಕಿಚ್ಚನ ಫ್ಯಾನ್ಸ್​ ಸಂಭ್ರಮ?

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ