Kichcha Sudeep: ‘ಕೋಟಿಗೊಬ್ಬ 3’ ರಿಲೀಸ್​: ಬೆಳ್ಳಂಬೆಳಗ್ಗೆಯೇ ಥಿಯೇಟರ್​ ಮುಂದೆ ಹೇಗಿದೆ ಕಿಚ್ಚನ ಫ್ಯಾನ್ಸ್​ ಸಂಭ್ರಮ?

Kotigobba 3: ‘ಕೋಟಿಗೊಬ್ಬ 3’ ಚಿತ್ರದ ರಿಲೀಸ್​ಗೆ ಗುರುವಾರ (ಅ.14) ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ವಾಪಸ್​ ತೆರಳಿದ್ದರು. ಆದರೆ ಇಂದು ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಆಗಿದ್ದು, ಫ್ಯಾನ್ಸ್​ ಸಡಗರ ಜೋರಾಗಿದೆ.

Kichcha Sudeep: ‘ಕೋಟಿಗೊಬ್ಬ 3’ ರಿಲೀಸ್​: ಬೆಳ್ಳಂಬೆಳಗ್ಗೆಯೇ ಥಿಯೇಟರ್​ ಮುಂದೆ ಹೇಗಿದೆ ಕಿಚ್ಚನ ಫ್ಯಾನ್ಸ್​ ಸಂಭ್ರಮ?
ಚಿತ್ರಮಂದಿರದ ಮುಂದೆ ಅಭಿಮಾನಿಗಳ ಸಂಭ್ರಮ
Follow us
| Updated By: ಮದನ್​ ಕುಮಾರ್​

Updated on:Oct 15, 2021 | 7:35 AM

ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಚಿತ್ರಕ್ಕೆ ಗುರುವಾರ (ಅ.14) ಅಡ್ಡಿ ಉಂಟಾಗಿತ್ತು. ವಿತರಕರಿಂದ ಎದುರಾಗಿದ್ದ ಸಮಸ್ಯೆಯ ಕಾರಣಕ್ಕೆ ಚಿತ್ರ ರಿಲೀಸ್​ ಆಗಿರಲಿಲ್ಲ. ಆದರೆ ಇಂದು (ಅ.15) ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು, ಕೋಟಿಗೊಬ್ಬ ಗ್ರ್ಯಾಂಡ್​ ಎಂಟ್ರಿ ನೀಡಿದ್ದಾನೆ. ರಾಜ್ಯದ ಹಲವು ಕಡೆಗಳಲ್ಲಿ ಮುಂಜಾನೆ 7 ಗಂಟೆಗೆ ಮೊದಲ ಪ್ರದರ್ಶನ ಶುರು ಆಗಿದೆ. ಚಿತ್ರಮಂದಿರಗಳ ಮುಂದೆ ಜಮಾಯಿಸಿರುವ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಿಚ್ಚ ಸುದೀಪ್​ಗೆ ಜೈಕಾರ ಹಾಕಿ ಈ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ.

ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಗಾಂಧಿನಗರದ ಭೂಮಿಕಾ ಥಿಯೇಟರ್​, ಎಸ್​.ಪಿ. ರಸ್ತೆಯಲ್ಲಿರುವ ಶಾರದಾ ಟಾಕೀಸ್​ ಸೇರಿದಂತೆ ಹಲವು ಕಡೆಗಳಲ್ಲಿ ಫ್ಯಾನ್ಸ್​ ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ. ನಿನ್ನೆಯಿಂದಲೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಅಭಿಮಾನಿಗಳೆಲ್ಲ ಇಂದು ಆದಷ್ಟು ಬೇಗ ಟಿಕೆಟ್​ ನೀಡುವಂತೆ ಚಿತ್ರಮಂದಿರದವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಸುದೀಪ್​ ಫ್ಯಾನ್ಸ್​ ಬೆಳ್ಳಂಬೆಳಗ್ಗೆಯೇ ಸಖತ್​ ಆಗಿ ಸೆಲೆಬ್ರೇಟ್​ ಮಾಡುತ್ತಿದ್ದಾರೆ.

‘ಕೋಟಿಗೊಬ್ಬ 3’ ಚಿತ್ರದ ರಿಲೀಸ್​ಗೆ ಗುರುವಾರ (ಅ.14) ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ವಾಪಸ್​ ತೆರಳಿದ್ದರು. ಆದರೆ ಇಂದು ಅದ್ದೂರಿಯಾಗಿ ಸಿನಿಮಾ ಬಿಡುಗಡೆ ಆಗಿದ್ದು, ಫ್ಯಾನ್ಸ್​ ಸಡಗರ ಜೋರಾಗಿದೆ.

ಶಿವ ಕಾರ್ತಿಕ್​ ನಿರ್ದೇಶನದ ಈ ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಸೂರಪ್ಪ ಬಾಬು ನಿರ್ಮಾಣ ಮಾಡಿದ್ದು, ನಿನ್ನೆ ರಿಲೀಸ್​ ಆಗದೇ ಇರುವುದಕ್ಕೆ ಅವರು ಕಿಚ್ಚನ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು. ಸೂರಪ್ಪ ಬಾಬು ಮಾತಿಗೆ ಪ್ರತಿಕ್ರಿಯಿ ನೀಡಿದ್ದ ಸುದೀಪ್, ‘ನೀವು ಯಾರಿಂದ ತೊಂದ್ರೆಗೆ ಸಿಲುಕಿದ್ರಿ ಅನ್ನೋದು ಗೊತ್ತು. ಅದಕ್ಕೆ ಕಾಲ ಉತ್ತರ ಕೊಡುತ್ತದೆ. ಸಿನಿಮಾ ನಾಳೆಯಿಂದ (ಅಕ್ಟೋಬರ್​ 15) ಭರ್ಜರಿ ಪ್ರದರ್ಶನ ಕಾಣುತ್ತದೆ. ನಾವೆಲ್ಲರೂ ಇದ್ದೇವೆ ಬಾಬು. ಅಭಿಮಾನಿಗಳೇ ಯಾವುದೇ ಚಿತ್ರಮಂದಿರಗಳಿಗೆ ಡ್ಯಾಮೇಜ್​ ಮಾಡಬೇಡಿ. ಚಿತ್ರಮಂದಿರಗಳಿಗೆ ಏನೂ ತೊಂದರೆ ಮಾಡಬೇಡಿ. ಅವರು ಪ್ರೀತಿಯಿಂದ ನಮಗೆ ಚಿತ್ರಮಂದಿರ ಕೊಟ್ಟಿದ್ದಾರೆ. ನಾಳೆಯಿಂದ ಒಳ್ಳೆ ಪ್ರದರ್ಶನ ಕಾಣುತ್ತದೆ. ನಿಮ್ಮ ಪ್ರೀತಿಗೆ ಧನ್ಯವಾದ. ಒಂದು ದಿನ ಆಗಿರುವ ಡ್ಯಾಮೇಜ್​ಗೆ ವಿಷಾದವಿರಲಿ’ ಎಂದಿದ್ದರು. ಆ ಮಾತಿಗೆ ತಕ್ಕಂತೆಯೇ ಇಂದು ಚಿತ್ರ ಬಿಡುಗಡೆ ಆಗಿದೆ.

ಗುರುವಾರ ಸಂಜೆಯೇ ವಿತರಕರು ಬದಲಾಗಿದ್ದಾರೆ. ಜಾಕ್​ ಮಂಜು, ಬಿಕೆ ಗಂಗಾಧರ್​ ಹಾಗೂ ಸಯ್ಯದ್​ ಸಲಾಂ ಅವರು ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದು, ‘ಕೋಟಿಗೊಬ್ಬ 3’ ಸರಾಗವಾಗಿ ತೆರೆಕಾಣುವಂತೆ ಮಾಡಿದ್ದಾರೆ.

ಇದನ್ನೂ ಓದಿ:

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ

ವಯಸ್ಸಿನ ಬಗ್ಗೆ ರಮ್ಯಾ ಆಡಿದ ಮಾತಿಗೆ ಕಿಚ್ಚನ ಪ್ರತಿಕ್ರಿಯೆ; ‘ಕೋಟಿಗೊಬ್ಬ 3’ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು?

Published On - 7:25 am, Fri, 15 October 21

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು