‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ

TV9 Digital Desk

| Edited By: Rajesh Duggumane

Updated on: Oct 14, 2021 | 1:58 PM

ಸಿನಿಮಾ ರಿಲೀಸ್​ ಆಗದ ಬಗ್ಗೆ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದರು. ಇದಕ್ಕೆ ಸುದೀಪ್​ ಉತ್ತರಿಸಿದ್ದಾರೆ.

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ
ಸುದೀಪ್
Follow us

ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಇಂದು (ಅಕ್ಟೋಬರ್​ 14) ರಿಲೀಸ್​ ಆಗಿಲ್ಲ. ಇದಕ್ಕೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಕೆಲವೆಡೆ ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ಮಾಡಿದ ಬಗ್ಗೆಯೂ ವರದಿ ಆಗಿದೆ. ಹಾಗಾದರೆ, ಇಂದು ಸಿನಿಮಾ ರಿಲೀಸ್​ ಆಗದೇ ಇರೋಕೆ ಕಾರಣವಾಗಿದ್ದು ಯಾರು? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಹೀಗಿರುವಾಗಲೇ ಸುದೀಪ್​ ಅವರು ವಿಶೇಷ ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ.

ಸಿನಿಮಾ ರಿಲೀಸ್​ ಆಗದ ಬಗ್ಗೆ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದರು. ‘ಕನ್ನಡ ಕಲಾಭಿಮಾನಿಗಳಲ್ಲಿ ಹಾಗೂ ಕಿಚ್ಚ ಸುದೀಪ್​ ಅಭಿಮಾನಿಗಳಲ್ಲಿ ಮನವಿ. ವಿತರಕರು ಮಾಡಿದ ಮೋಸದಿಂದ ‘ಕೋಟಿಗೊಬ್ಬ 3’ ರಿಲೀಸ್​ ಮಾಡೋಕೆ ಆಗ್ತಿಲ್ಲ. ಎಂದಿನಂತೆ ಶುಕ್ರವಾರದಿಂದ (ಅಕ್ಟೋಬರ್​ 15) ಬೆಳಗ್ಗೆ 6 ಗಂಟೆಯಿಂದ ಶೋ ಪ್ರಸಾರವಾಗಲಿದೆ. ತಾವು ಸಹಕರಿಸಿ. ಸುದೀಪ್​ ಅವರೇ ನಿಮ್ಮ ಬಳಿಯೂ ಕ್ಷಮೆ ಕೇಳುತ್ತೇನೆ. ಈ ಬಗ್ಗೆ ಟ್ವೀಟ್​ ಮಾಡಿ’ ಎಂದು ಕೋರಿದ್ದರು ಅವರು.

ಈ ವಿಡಿಯೋಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ‘ನೀವು ಯಾರಿಂದ ತೊಂದ್ರೆಗೆ ಸಿಲುಕಿದ್ರಿ ಅನ್ನೋದು ಗೊತ್ತು. ಅದಕ್ಕೆ ಕಾಲ ಉತ್ತರ ಕೊಡುತ್ತದೆ. ಸಿನಿಮಾ ನಾಳೆಯಿಂದ (ಅಕ್ಟೋಬರ್​ 15) ಭರ್ಜರಿ ಪ್ರದರ್ಶನ ಕಾಣುತ್ತದೆ. ನಾವೆಲ್ಲರೂ ಇದ್ದೇವೆ ಬಾಬು. ಅಭಿಮಾನಿಗಳೇ ಯಾವುದೇ ಚಿತ್ರಮಂದಿರಗಳಿಗೆ ಡ್ಯಾಮೇಜ್​ ಮಾಡಬೇಡಿ. ಚಿತ್ರಮಂದಿರಗಳಿಗೆ ಏನೂ ತೊಂದರೆ ಮಾಡಬೇಡಿ. ಅವರು ಪ್ರೀತಿಯಿಂದ ನಮಗೆ ಚಿತ್ರಮಂದಿರ ಕೊಟ್ಟಿದ್ದಾರೆ. ನಾಳೆಯಿಂದ ಒಳ್ಳೆ ಪ್ರದರ್ಶನ ಕಾಣುತ್ತದೆ. ನಿಮ್ಮ ಪ್ರೀತಿಗೆ ಧನ್ಯವಾದ. ಒಂದು ದಿನ ಆಗಿರುವ ಡ್ಯಾಮೇಜ್​ಗೆ ವಿಷಾದವಿರಲಿ’ ಎಂದಿದ್ದಾರೆ.

ಇದನ್ನೂ ಓದಿ: Kotigobba 3: ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದು; ಕೆರಳಿದ ಅಭಿಮಾನಿಗಳಿಂದ ವಿಜಯಪುರದಲ್ಲಿ ದಾಂಧಲೆ

Kichcha Sudeep: ‘ಕೋಟಿಗೊಬ್ಬ 3’ ಬಿಡುಗಡೆಯಾಗದ ಹಿನ್ನೆಲೆ; ಫ್ಯಾನ್ಸ್ ಬಳಿ ಕ್ಷಮೆ ಕೋರಿದ ಕಿಚ್ಚ ಸುದೀಪ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada