Kotigobba 3: ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದು; ಕೆರಳಿದ ಅಭಿಮಾನಿಗಳಿಂದ ವಿಜಯಪುರದಲ್ಲಿ ದಾಂಧಲೆ

Kichcha Sudeep: ರಾಜ್ಯದೆಲ್ಲೆಡೆ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಬಿಡುಗಡೆ ರದ್ದಾಗಿದೆ. ಇಂದು ಮುಂಜಾನೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು ಕೆಲವೆಡೆ ದಾಂಧಲೆ ನಡೆಸಿದ ಪ್ರಕರಣಗಳು ವರದಿಯಾಗಿವೆ.

Kotigobba 3: ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದು; ಕೆರಳಿದ ಅಭಿಮಾನಿಗಳಿಂದ ವಿಜಯಪುರದಲ್ಲಿ ದಾಂಧಲೆ
ಚಿತ್ರಮಂದಿರಕ್ಕೆ ನುಗ್ಗಲು ಯತ್ನಿಸುತ್ತಿರುವ ಅಭಿಮಾನಿಗಳು
Follow us
TV9 Web
| Updated By: shivaprasad.hs

Updated on:Oct 14, 2021 | 1:43 PM

ವಿಜಯಪುರ: ‘ಕೋಟಿಗೊಬ್ಬ 3’ ಚಿತ್ರದ ಪ್ರದರ್ಶನ ರದ್ದಾಗಿರುವುದಕ್ಕೆ ವಿಜಯಪುರದ ಡ್ರೀಂಲ್ಯಾಂಡ್​ ಥಿಯೇಟರ್ ಬಳಿ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ. ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಥಿಯೇಟರ್ ಬಾಗಿಲು ಮುರಿಯಲು ಯತ್ನಿಸಲಾಗಿದೆ. ಥಿಯೇಟರ್ ಎದುರಿದ್ದ ಲೈಟ್​ಗಳನ್ನು ಒಡೆದು ಹಾಕಲಾಗಿದೆ. ಬೆಳಗ್ಗೆಯಿಂದ ಕಾದು ಕುಳಿತಿದ್ದ ಅಭಿಮಾನಿಗಳು, ಪ್ರದರ್ಶನ ರದ್ದಾದ ನಂತರ ತಾಳ್ಮೆ ಕಳೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ. ನಟ ಕಿಚ್ಚ ಸುದೀಪ್, ನಿರ್ಮಾಪಕ ಸೂರಪ್ಪ ಬಾಬು ಸೇರಿದಂತೆ ಚಿತ್ರತಂಡದವರು ಅಭಿಮಾನಿಗಳಿಗೆ ಶಾಂತ ರೀತಿಯಿಂದ ಇರುವಂತೆ ಕೇಳಿಕೊಂಡಿದ್ದರೂ ಕೂಡ, ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಲ್ಲಿ ಚಿತ್ರಮಂದಿರದ ತಪ್ಪಿಲ್ಲ ಎಂದು ತಿಳಿಸಲಾಗಿದ್ದರೂ, ಉದ್ರಿಕ್ತ ಅಭಿಮಾನಿಗಳು ಹಾನಿ ಎಸಗಿದ್ದಾರೆ.

ಬೆಳಗಾವಿ: ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಅಭಿಮಾನಿಗಳನ್ನ ಪ್ರಚೋದಿಸುತ್ತಿದ್ದ ಯುವಕನಿಗೆ ಸಿಪಿಐ ಕಪಾಳಮೋಕ್ಷ ಮಾಡಿದ್ಧಾರೆ. ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಹೇಳಿದರೂ ಕೇಳದೇ ಅಭಿಮಾನಿಗಳನ್ನ ಕೆಲವರು ಪ್ರಚೋದಿಸುತ್ತಿದ್ದರು. ನಾಳೆ ಕೋಟಿಗೊಬ್ಬ 3 ರಿಲೀಸ್ ಆಗುತ್ತೆ ಎಂದು ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಿರುವಾಗ, ಅದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳನ್ನು ಪಾನಮತ್ತ ಯುವಕನೊಬ್ಬ ಪ್ರಚೋದಿಸಿದಾಗ, ಸಿಪಿಐ ಕಪಾಳಮೋಕ್ಷ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಭಿಮಾನಿಗಳ ಗುಂಪನ್ನು ಪೊಲೀಸರು ಚದುರಿಸಿದ್ದಾರೆ. ಚಿತ್ರಮಂದಿರದಲ್ಲಿ ಟಿಕೆಟ್ ವಾಪಸ್ ನೀಡಿ ಹಣ ಪಡೆದು ಅಭಿಮಾನಿಗಳು ಮರಳುತ್ತಿದ್ದಾರೆ.

ಪ್ರಚೋದಿಸಿದ ಅಭಿಮಾನಿಗೆ ಸಿಪಿಐ ಕಪಾಳಮೋಕ್ಷ ಮಾಡಿದ ವಿಡಿಯೋ ವರದಿ ಇಲ್ಲಿದೆ:

ಯಾದಗಿರಿ, ಹುಬ್ಬಳ್ಳಿಯಲ್ಲೂ ಅಭಿಮಾನಿಗಳ ಆಕ್ರೋಶ: ಯಾದಗಿರಿ: ಇಂದು ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಶಹಾಪುರ‌ದ ಜಯಶ್ರೀ ಚಿತ್ರಮಂದಿರದ ಬಳಿ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

ಹುಬ್ಬಳ್ಳಿಯಲ್ಲೂ ಕಿಚ್ಚ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಬೆಳಗ್ಗೆಯೇ ಬಂದು ಟಿಕೆಟ್ ಪಡೆದಿದ್ವಿ ಎಂದು ಅಲವತ್ತುಕೊಂಡಿದ್ದಾರೆ. ಪೊಲೀಸರ ಮಧ್ಯೆ ಪ್ರವೇಶದಿಂದ ಪರಸ್ಥಿತಿ ತಿಳಿಯಾಗಿದ್ದು, ನಾಳೆ ಈಗಾಗಲೇ ಟಿಕೆಟ್ ಪಡೆದವರಿಗೆ ಅವಕಾಶ ನೀಡುವುದಾಗಿ ಚಿತ್ರಮಂದಿರ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:

Kichcha Sudeep: ‘ಕೋಟಿಗೊಬ್ಬ 3’ ಬಿಡುಗಡೆಯಾಗದ ಹಿನ್ನೆಲೆ; ಫ್ಯಾನ್ಸ್ ಬಳಿ ಕ್ಷಮೆ ಕೋರಿದ ಕಿಚ್ಚ ಸುದೀಪ್

‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ

Published On - 1:30 pm, Thu, 14 October 21