‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ

‘ಕೋಟಿಗೊಬ್ಬ 3’ ಶೋ ಕ್ಯಾನ್ಸಲ್​ ಆಗೋಕೆ ಕಾರಣವೇನು? ಇದಕ್ಕೆ ನಿರ್ಮಾಪಕರು ಕೊಡುತ್ತಿರುವ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ
ಸೂರಪ್ಪ ಬಾಬು-ಸುದೀಪ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 14, 2021 | 1:43 PM

ಇಂದು ಗಾಂಧಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಿಚ್ಚ ಸುದೀಪ್​ ಅಭಿಮಾನಿಗಳು ‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್​ಗಾಗಿ ಕಾದು ಕೂತಿದ್ದರು. ದೊಡ್ಡದೊಡ್ಡ ಕಟೌಟ್​ ರೆಡಿ ಮಾಡಿಟ್ಟುಕೊಂಡಿದ್ದರು. ಹಾಲಿನ ಅಭಿಷೇಕಕ್ಕೂ ಸಿದ್ಧತೆ ನಡೆದಿತ್ತು. ಆದರೆ, ಒಂದೊಂದೇ ಶೋಗಳು ಕ್ಯಾನ್ಸಲ್​ ಆಗುತ್ತಾ ಬಂದವು.  ಇದು ಸುದೀಪ್​ ಅಭಿಮಾನಿಗಳಿಗೆ ಕೋಪ ತರಿಸಿದೆ. ನಾಳೆಯಿಂದ ಶೋ ಆರಂಭವಾಗುತ್ತದೆ ಎನ್ನುವ ಸ್ಪಷ್ಟನೆ ಸಿಕ್ಕಿದೆಯಾದರೂ ಅದು ಖಾತ್ರಿ ಇಲ್ಲ. ಹಾಗಾದರೆ, ‘ಕೋಟಿಗೊಬ್ಬ 3’ ಶೋ ಕ್ಯಾನ್ಸಲ್​ ಆಗೋಕೆ ಕಾರಣವೇನು? ಇದಕ್ಕೆ ನಿರ್ಮಾಪಕರು ಕೊಡುತ್ತಿರುವ ಕಾರಣ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಫ್ಯಾನ್ಸ್​​ ಶೋ ಇಲ್ಲ ಅಂದ್ರು

ಮುಂಜಾನೆ 7ಗಂಟೆಗೆ ಫ್ಯಾನ್ಸ್​ ಶೋ ಇತ್ತು. ಅಭಿಮಾನಿಗಳೆಲ್ಲರೂ ಸಿನಿಮಾಗಾಗಿ ಕಾದು ಕೂತಿದ್ದರು. ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡಿಕೊಂಡು ಚಿತ್ರಮಂದಿರದತ್ತ ತೆರಳಿದರು. ಆದರೆ, ಶೋ ನಡೆಯುತ್ತಿಲ್ಲ ಎನ್ನುವ ಉತ್ತರ ಚಿತ್ರಮಂದಿರದವರ ಕಡೆಯಿಂದ ಬಂತು. ಇದಕ್ಕೆ ಕಾರಣವೇನು ಎಂದು ಕೇಳಿದರೆ, ಸಿನಿಮಾಗೆ ಲೈಸೆನ್ಸ್​ ಸಮಸ್ಯೆ ಎಂಬಿತ್ಯಾದಿ ಉತ್ತರ ಬಂತು. ಆದರೆ, ಯಾವುದೇ ಸ್ಪಷ್ಟನೆ ಚಿತ್ರತಂಡದಿಂದ ಸರಿಯಾಗಿ ಸಿಗಲಿಲ್ಲ.

10ಗಂಟೆಯಿಂದ ಸಿನಿಮಾ ಪ್ರಸಾರ ಅಂದ್ರು

9 ಗಂಟೆ ಸುಮಾರಿಗೆ ನಿರ್ಮಾಪಕ ಸೂರಪ್ಪ ಬಾಬು ಕಡೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಬಂತು. ‘ನಾವು ಯಾವುದೇ ಫ್ಯಾನ್ಸ್​ ಶೋ ಇಟ್ಟಿಲ್ಲ. ಸಿನಿಮಾ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ. ಎಂದಿನಂತೆ 10 ಗಂಟೆಗೆ ಶೋ ಆರಂಭವಾಗಲಿದೆ’ ಎಂದು ಸೂರಪ್ಪ ಬಾಬು ತಿಳಿಸಿದರು. ಅಭಿಮಾನಿಗಳು 11 ಗಂಟೆಗೆ ಚಿತ್ರಮಂದಿರಕ್ಕೆ ತೆರಳಿದರೂ ಸಿನಿಮಾ ರಿಲೀಸ್​ ಆಗಲೇ ಇಲ್ಲ. ಇದು ಅವರಿಗೆ ಮತ್ತೂ ನಿರಾಸೆ ತರಿಸಿತು.

ಈಗ ಹೇಳ್ತಿರೋದೆ ಬೇರೆ

‘ಕನ್ನಡ ಕಲಾಭಿಮಾನಿಗಳಲ್ಲಿ ಹಾಗೂ ಕಿಚ್ಚ ಸುದೀಪ್​ ಅಭಿಮಾನಿಗಳಲ್ಲಿ ಮನವಿ. ವಿತರಕರು ಮಾಡಿದ ಮೋಸದಿಂದ ‘ಕೋಟಿಗೊಬ್ಬ 3’ ರಿಲೀಸ್​ ಮಾಡೋಕೆ ಆಗ್ತಿಲ್ಲ. ಎಂದಿನಂತೆ ಶುಕ್ರವಾರದಿಂದ (ಅಕ್ಟೋಬರ್​ 15) ಬೆಳಗ್ಗೆ 6 ಗಂಟೆಯಿಂದ ಶೋ ಪ್ರಸಾರವಾಗಲಿದೆ. ತಾವು ಸಹಕರಿಸಿ. ಸುದೀಪ್​ ಅವರೇ ನಿಮ್ಮ ಬಳಿಯೂ ಕ್ಷಮೆ ಕೇಳುತ್ತೇನೆ. ಈ ಬಗ್ಗೆ ಟ್ವೀಟ್​ ಮಾಡಿ’ ಎಂದಿದ್ದಾರೆ ಸೂರಪ್ಪ ಬಾಬು.

ಇದನ್ನೂ ಓದಿ: Salaga Movie: ‘ಸಲಗ’ ಚಿತ್ರದ ಫಸ್ಟ್​ ಹಾಫ್​ ರಿಪೋರ್ಟ್​; ದುನಿಯಾ ವಿಜಯ್​ ಸಿನಿಮಾದಲ್ಲಿ ಇಂಟರ್​ವಲ್​ ತನಕ ಏನುಂಟು ಏನಿಲ್ಲ?

Kotigobba 3: ಇಂದು ಬಿಡುಗಡೆಯಾಗುತ್ತಿಲ್ಲ ‘ಕೋಟಿಗೊಬ್ಬ 3’; ಇನ್ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ

Published On - 12:33 pm, Thu, 14 October 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ