Kichcha Sudeep: ‘ಕೋಟಿಗೊಬ್ಬ 3’ ಬಿಡುಗಡೆಯಾಗದ ಹಿನ್ನೆಲೆ; ಫ್ಯಾನ್ಸ್ ಬಳಿ ಕ್ಷಮೆ ಕೋರಿದ ಕಿಚ್ಚ ಸುದೀಪ್

Kotigobba 3: ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಬಿಡುಗಡೆಯ ಅಡಚಣೆಗೆ ನಟ ಸುದೀಪ್ ಕ್ಷಮೆ ಕೋರಿದ್ದಾರೆ.

Kichcha Sudeep: ‘ಕೋಟಿಗೊಬ್ಬ 3’ ಬಿಡುಗಡೆಯಾಗದ ಹಿನ್ನೆಲೆ; ಫ್ಯಾನ್ಸ್ ಬಳಿ ಕ್ಷಮೆ ಕೋರಿದ ಕಿಚ್ಚ ಸುದೀಪ್
ಸುದೀಪ್​
Follow us
TV9 Web
| Updated By: shivaprasad.hs

Updated on:Oct 14, 2021 | 12:57 PM

ಅಭಿಮಾನಿಗಳು ಎರಡು ವರ್ಷದಿಂದ ಕಿಚ್ಚ ಸುದೀಪ್ ಅವರನ್ನು ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು. ಆ ಕಾಯುವಿಕೆ ಇಂದು ಕೊನೆಯಾಗಬೇಕಿತ್ತು. ಆದರೆ ಹಲವಾರು ಸಮಸ್ಯೆಗಳಿಂದ ‘ಕೋಟಿಗೊಬ್ಬ 3’ ಮುಂದೂಡಲ್ಪಟ್ಟಿದೆ. ಬೆಳಗ್ಗೆ ಫ್ಯಾನ್ಸ್ ಶೋ ಕ್ಯಾನ್ಸಲ್ ಆಗಿತ್ತು. ಅಲ್ಲಿಂದ ಗೊಂದಲ ಆರಂಭವಾಗಿತ್ತು. ನಂತರ ಬೆಳಗ್ಗಿನ ಶೋ ನಡೆಸುವುದಾಗಿ ಚಿತ್ರತಂಡ ತಿಳಿಸಿತ್ತು. ಅದೂ ನಡೆಯಲಿಲ್ಲ. 12 ಗಂಟೆಯ ಶೋ ನಡೆಯುತ್ತದೆ ಎಂಬ ಮಾಹಿತಿ ಇತ್ತು. ಕೊನೆಗೆ ನಿರ್ಮಾಪಕ ಸೂರಪ್ಪ ಬಾಬು ವಿಡಿಯೋ ಮುಖಾಂತರ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿ, ಚಿತ್ರ ಮುಂದೂಡಲ್ಪಟ್ಟಿರುವುದನ್ನು ಘೋಷಿಸಿದ್ದಾರೆ.

ಈ ಕುರಿತು ಟ್ವಿಟರ್​ನಲ್ಲಿ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ತಾನು ಕ್ಷಮೆ ಕೇಳುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ. ಶೀಘ್ರದಲ್ಲಿಯೇ ಮುಂದಿನ ಪ್ರದರ್ಶನದ ಬಗ್ಗೆ ಮಾಹಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ. ಅಲ್ಲಿಯವರೆಗೆ ಅಭಿಮಾಣಿಗಳು ಶಾಂತ ರೀತಿಯಿಂದ ಇರಬೇಕೆಂದು ಅವರು ಕೋರಿಕೊಂಡಿದ್ದಾರೆ.

ಸುದೀಪ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸುದೀಪ್ ಪತ್ರ ಬರೆದಿದ್ದು, ಅಭಿಮಾನಿಗಳಲ್ಲಿ ತಾಳ್ಮೆ ಕಳೆದುಕೊಳ್ಳದಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಆಕ್ರೋಶದಿಂದ ಯಾವುದಕ್ಕೂ ಹಾನಿ ಮಾಡದಂತೆ(ಚಿತ್ರಮಂದಿರ), ಯಾರಿಗೂ ಧಕ್ಕೆ ತರದಂತೆ ಅವರು ಕೇಳಿಕೊಂಡಿದ್ದಾರೆ. ಬಿಡುಗಡೆಯಲ್ಲಿ ನಿಗಾವಹಿಸಬೇಕಾದವರ ನಿರ್ಲಕ್ಷ್ಯದಿಂದ ಈ ಅವ್ಯವಸ್ಥೆಯಾಗಿದ್ದು, ಇದಕ್ಕೆ ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಅವರು ಬರಹದಲ್ಲಿ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಈ ಕುರಿತ ವಿಡಿಯೊ ವರದಿ ಇಲ್ಲಿದೆ:

Published On - 12:36 pm, Thu, 14 October 21