AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ಕೆಜಿ ದೇಹ ತೂಕ ಇಳಿಸಿಕೊಂಡ ಖುಷ್ಬೂ; ಈಗ ಅವರು ಹೇಗಾಗಿದ್ದಾರೆ ನೋಡಿ

ರಣಧೀರ, ಅಂಜದ ಗಂಡು, ಯುಗಪುರುಷ, ಶಾಂತಿ ಕ್ರಾಂತಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

15 ಕೆಜಿ ದೇಹ ತೂಕ ಇಳಿಸಿಕೊಂಡ ಖುಷ್ಬೂ; ಈಗ ಅವರು ಹೇಗಾಗಿದ್ದಾರೆ ನೋಡಿ
ಖುಷ್ಬೂ ಸುಂದರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 14, 2021 | 5:08 PM

Share

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅವರು ಹೆಚ್ಚಾಗಿ ಸಕ್ರಿಯರಾಗಿಲ್ಲ. ಈ ನಡುವೆ ಅವರು ಫಿಟ್ನೆಸ್​ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಪರಿಣಾಮವಾಗಿ ಸಿಕ್ಕಾಪಟ್ಟೆ ಸ್ಲಿಮ್​ ಆಗಿದ್ದಾರೆ. ಇತ್ತೀಚೆಗೆ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದರೆ ಒಮ್ಮೆಲೇ ಅವರ ಗುರುತು ಸಿಗುವುದು ಕೂಡ ಕಷ್ಟವಾಗುವಂತಿತ್ತು. ಈಗ ಅವರು ಮತ್ತೊಂದು ಫೋಟೋ ಹಾಕಿದ್ದಾರೆ. ಅಚ್ಚರಿ ಎಂದರೆ ಅವರು 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ರಣಧೀರ, ಅಂಜದ ಗಂಡು, ಯುಗಪುರುಷ, ಶಾಂತಿ ಕ್ರಾಂತಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈಗ ಅವರು ಈ ಮೊದಲಿನ ಹಾಗೂ ಈಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬರೋಬ್ಬರಿ 15 ಕೆಜಿ ದೇಹತೂಕ ಇಳಿಸಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಅವರಿಗೆ ಮದುವೆ ಪ್ರಪೋಸಲ್​ ಬಂದಿತ್ತು. ‘ಪರಿಶ್ರಮಕ್ಕೆ ಫಲ ಸಿಕ್ಕಾಗ, ಖುಷಿಯನ್ನು ವಿವರಿಸಲು ಆಗದು’ ಎಂಬ ಕ್ಯಾಪ್ಷನ್​ನೊಂದಿಗೆ ಖುಷ್ಬೂ ಫೋಟೋಗಳನ್ನು ಈ ಮೊದಲು ಹಂಚಿಕೊಂಡಿದ್ದರು. ಅದಕ್ಕೆ ಕಮೆಂಟ್​ ಮಾಡಿದ ಯುವಕನೊಬ್ಬ, ‘ನಾನು ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ ಮೇಡಂ’ ಎಂದು ನೇರವಾಗಿ ಮದುವೆ ಪ್ರಪೋಸ್​ ಮಾಡಿದ್ದ. ಅದಕ್ಕೆ ಉತ್ತರಿಸಿದ್ದ ಖುಷ್ಬೂ, ‘ಓಹ್​ ಕ್ಷಮಿಸಿ, ನೀವು ತಡವಾಗಿ ಕೇಳುತ್ತಿದ್ದೀರಿ. ಆದರೂ ಒಮ್ಮೆ ನನ್ನ ಗಂಡನನ್ನು ವಿಚಾರಿಸಿ ಹೇಳುತ್ತೇನೆ’ ಎಂದು ಕಮೆಂಟ್​ ಮಾಡಿದ್ದರು.

ಬಾಲನಟಿ ಆಗಿಯೇ ಖುಷ್ಬೂ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗಲೂ ಅವರು ಬಣ್ಣದ ಲೋಕದ ನಂಟು ತೊರೆದಿಲ್ಲ. ಅತಿಥಿ ಪಾತ್ರಗಳ ಮೂಲಕ ಅಪರೂಪಕ್ಕೆ ನಟಿಸುತ್ತಿದ್ದಾರೆ. ರಜನಿಕಾಂತ್​ ನಟನೆಯ ‘ಅಣ್ಣಾತೆ’ ಸಿನಿಮಾದಲ್ಲಿ ಅವರಿಗೊಂದು ಪಾತ್ರವಿದೆ. ಆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: 50ನೇ ವಯಸ್ಸಿನಲ್ಲಿ ಖುಷ್ಬೂಗೆ ಇನ್ನೊಂದು ಮದುವೆ ಪ್ರಪೋಸಲ್​; ಗಂಡನನ್ನು ಕೇಳಿ ಉತ್ತರ ತಿಳಿಸಿದ ನಟಿ

ರವಿಚಂದ್ರನ್​ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’​ ಹೇಳ್ತಾರೆ ಕೇಳಿ..