50ನೇ ವಯಸ್ಸಿನಲ್ಲಿ ಖುಷ್ಬೂಗೆ ಇನ್ನೊಂದು ಮದುವೆ ಪ್ರಪೋಸಲ್​; ಗಂಡನನ್ನು ಕೇಳಿ ಉತ್ತರ ತಿಳಿಸಿದ ನಟಿ

50ನೇ ವಯಸ್ಸಿನಲ್ಲಿ ಖುಷ್ಬೂಗೆ ಇನ್ನೊಂದು ಮದುವೆ ಪ್ರಪೋಸಲ್​; ಗಂಡನನ್ನು ಕೇಳಿ ಉತ್ತರ ತಿಳಿಸಿದ ನಟಿ
50ನೇ ವಯಸ್ಸಿನಲ್ಲಿ ಖುಷ್ಬೂಗೆ ಇನ್ನೊಂದು ಮದುವೆ ಪ್ರಪೋಸಲ್

ಪಡ್ಡೆ ಹುಡುಗರಿಂದ ನಟಿ ಖುಷ್ಬೂಗೆ ಮದುವೆ ಪ್ರಪೋಸಲ್​ ಬಂದಿದೆ. ಅದಕ್ಕೆ ಉತ್ತರಿಸಿರುವ ಅವರು, ‘ನನ್ನ ಪತಿಗೆ ಇರುವುದು ನಾನೊಬ್ಬಳೇ ಹೆಂಡತಿ. ಹಾಗಾಗಿ ನನ್ನನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ’ ಎಂದು ಕಮೆಂಟ್​ ಮಾಡಿದ್ದಾರೆ.

TV9kannada Web Team

| Edited By: Madan Kumar

Aug 25, 2021 | 4:34 PM

ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅವರು ಹೆಚ್ಚಾಗಿ ಸಕ್ರಿಯರಾಗಿಲ್ಲ. ಈ ನಡುವೆ ಅವರು ಫಿಟ್ನೆಸ್​ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಪರಿಣಾಮವಾಗಿ ಸಿಕ್ಕಾಪಟ್ಟೆ ಸ್ಲಿಮ್​ ಆಗಿದ್ದಾರೆ. ಇತ್ತೀಚೆಗೆ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದರೆ ಒಮ್ಮೆಲೇ ಅವರ ಗುರುತು ಸಿಗುವುದು ಕೂಡ ಕಷ್ಟವಾಗುವಂತಿತ್ತು. ಈ ಬದಲಾವಣೆಯ ಬೆನ್ನಲ್ಲೇ ಅವರಿಗೆ ಮದುವೆ ಪ್ರಪೋಸಲ್​ ಬಂದಿದೆ! ಅದಕ್ಕೆ ಖುಷ್ಬೂ ಪ್ರತಿಕ್ರಿಯಿಸಿದ್ದಾರೆ. ಗಂಡನನ್ನು ಒಂದು ಮಾತು ಕೇಳಿ, ನಂತರ ತಮ್ಮ ನಿರ್ಧಾರ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಸದ್ಯ ಈ ವಿಚಾರ ವೈರಲ್​ ಆಗುತ್ತಿದೆ.

ರಣಧೀರ, ಅಂಜದ ಗಂಡು, ಯುಗಪುರುಷ, ಶಾಂತಿ ಕ್ರಾಂತಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಆದರೆ ಇತ್ತೀಚೆಗಿನ ಅವರ ಫೋಟೋಗಳನ್ನು ನೋಡಿದರೆ ಅವರು ಮತ್ತೆ 25 ವರ್ಷ ಹಿಂದಕ್ಕೆ ಹೋದಂತೆ ಕಾಣುತ್ತಿದ್ದಾರೆ! ಅಷ್ಟು ಸ್ಲಿಮ್​ ಆಗಿರುವ ಅವರ ಫೋಟೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವು ಪಡ್ಡೆ ಹುಡುಗರು ಪ್ರಪೋಸ್​ ಕೂಡ ಮಾಡಿದ್ದಾರೆ!

‘ಪರಿಶ್ರಮಕ್ಕೆ ಫಲ ಸಿಕ್ಕಾಗ, ಖುಷಿಯನ್ನು ವಿವರಿಸಲು ಆಗದು’ ಎಂಬ ಕ್ಯಾಪ್ಷನ್​ನೊಂದಿಗೆ ಖುಷ್ಬೂ ಈ ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ಕಮೆಂಟ್​ ಮಾಡಿದ ಯುವಕನೊಬ್ಬ, ‘ನಾನು ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ ಮೇಡಂ’ ಎಂದು ನೇರವಾಗಿ ಮದುವೆ ಪ್ರಪೋಸ್​ ಮಾಡಿದ್ದಾನೆ. ಅದಕ್ಕೆ ಉತ್ತರಿಸಿರುವ ಖುಷ್ಬೂ, ‘ಓಹ್​ ಕ್ಷಮಿಸಿ, ನೀವು ತಡವಾಗಿ ಕೇಳುತ್ತಿದ್ದೀರಿ. ಆದರೂ ಒಮ್ಮೆ ನನ್ನ ಗಂಡನನ್ನು ವಿಚಾರಿಸಿ ಹೇಳುತ್ತೇನೆ’ ಎಂದು ಕಮೆಂಟ್​ ಮಾಡಿದ್ದಾರೆ.

ಖುಷ್ಬೂ ಹೇಳಿದ ಈ ಮಾತನ್ನು ಕೇಳಿಕೊಂಡು ಪಡ್ಡೆಗಳು ಸುಮ್ಮನಾಗಿಲ್ಲ. ‘ನಿಮ್ಮ ಗಂಡನಿಂದ ಏನಾದರೂ ಉತ್ತರ ಬಂತಾ’ ಎಂದು ಮತ್ತೆ ವಿಚಾರಿಸಿದ್ದಾರೆ. ‘ಅವರಿಗೆ ಇರುವುದು ನಾನೊಬ್ಬಳೇ ಹೆಂಡತಿ. ಹಾಗಾಗಿ ಅವರು ಒಪ್ಪಿಲ್ಲ. ನನ್ನನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ’ ಎಂದು ಖುಷ್ಬೂ ಉತ್ತರಿಸಿದ್ದಾರೆ. 2000ನೇ ಇಸವಿಯಲ್ಲಿ ನಟ-ನಿರ್ದೇಶಕ ಸುಂದರ್​ ಜೊತೆ ಖುಷ್ಬೂ ಮದುವೆ ನೆರವೇರಿತ್ತು. ಸದ್ಯ ಅವರಿಬ್ಬರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಬಾಲನಟಿ ಆಗಿಯೇ ಖುಷ್ಬೂ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗಲೂ ಅವರು ಬಣ್ಣದ ಲೋಕದ ನಂಟು ತೊರೆದಿಲ್ಲ. ಅತಿಥಿ ಪಾತ್ರಗಳ ಮೂಲಕ ಅಪರೂಪಕ್ಕೆ ನಟಿಸುತ್ತಿದ್ದಾರೆ. ರಜನಿಕಾಂತ್​ ನಟನೆಯ ‘ಅಣ್ಣಾತೆ’ ಸಿನಿಮಾದಲ್ಲಿ ಅವರಿಗೊಂದು ಪಾತ್ರವಿದೆ. ಆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ:

Prakash Raj: ಮಕ್ಕಳ ಎದುರಲ್ಲೇ ಪ್ರಕಾಶ್​ ರೈ ಮತ್ತೊಮ್ಮೆ ಮದುವೆ; ಇಲ್ಲಿವೆ ಖುಷಿಯ ಕ್ಷಣದ ಫೋಟೋಗಳು

‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

Follow us on

Related Stories

Most Read Stories

Click on your DTH Provider to Add TV9 Kannada