Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್ನಿಂದ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್; ಅಂಥ ವಿಶೇಷ ಇದರಲ್ಲೇನಿದೆ?
Kichcha Sudeep: ‘ಕೋಟಿಗೊಬ್ಬ 3’ ತಂಡ ಈವರೆಗೂ ಬಿಡುಗಡೆ ಮಾಡದೇ ಇರುವ ಒಂದು ಹೊಸ ಪೋಸ್ಟರ್ ಅನ್ನು ಈಗ ಸುದೀಪ್ ಹಂಚಿಕೊಂಡಿದ್ದಾರೆ. ಬಿಳಿ ಕೂದಲು, ಉದ್ದ ಗಡ್ಡ ಬಿಟ್ಟುಕೊಂಡು ವೃದ್ಧನ ಗೆಟಪ್ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ.
ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರಕ್ಕೆ ಎದುರಾಗಿದ್ದ ಎಲ್ಲ ಅಡ್ಡಿ ಆತಂಕಗಳು ಈಗ ನಿವಾರಣೆ ಆಗಿವೆ. ಶುಕ್ರವಾರ (ಅ.15) ಮುಂಜಾನೆಯೇ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ. ಫಸ್ಟ್ ಡೇ ಫಸ್ಟ್ ಶೋಗಾಗಿ ಕಾಯುತ್ತಿದ್ದ ಅಭಿಮಾನಿಗಳ ಸಂಭ್ರಮ ಕಂಡು ಸುದೀಪ್ ಫಿದಾ ಆಗಿದ್ದಾರೆ. ಥಿಯೇಟರ್ಗಳ ಮುಂಭಾಗದಲ್ಲಿ ನಿರ್ಮಾಣ ಆಗಿರುವ ಹಬ್ಬದ ವಾತಾವರಣದಿಂದ ಕಿಚ್ಚನ ಮನಸ್ಸು ತುಂಬಿಬಂದಿದೆ. ಬೆಳ್ಳಂಬೆಳಿಗ್ಗೆಯೇ ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಒಂದು ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ಸಿನಿಮಾದ ಮೇಲಿನ ಕ್ರೇಜ್ ಡಬಲ್ ಆಗುವಂತೆ ಮಾಡಿದ್ದಾರೆ.
‘ಕೋಟಿಗೊಬ್ಬ 3’ ಟ್ರೇಲರ್ ನೋಡಿದ ಅಭಿಮಾನಿಗಳಿಗೆ ಸುದೀಪ್ ಅವರ ಹಲವು ಗೆಟಪ್ಗಳು ಕಾಣಿಸಿದ್ದವು. ಆದರೆ ಈವರೆಗೂ ಚಿತ್ರತಂಡ ಬಿಡುಗಡೆ ಮಾಡದೇ ಇರುವ ಒಂದು ಹೊಸ ಪೋಸ್ಟರ್ ಅನ್ನು ಈಗ ಸುದೀಪ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಳಿ ಕೂದಲು, ಉದ್ದ ಗಡ್ಡ ಬಿಟ್ಟುಕೊಂಡು ವೃದ್ಧನ ಗೆಟಪ್ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿದ ಫ್ಯಾನ್ಸ್ಗೆ ‘ಕೋಟಿಗೊಬ್ಬ 3’ ಬಗ್ಗೆ ಇದ್ದ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ.
‘ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಪ್ರದರ್ಶನ ಆರಂಭ ಆಗಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಮುಂಜಾನೆಯ ಶೋಗಳ ಸಂಭ್ರಮದ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಇಂಥ ಎಗ್ಸೈಟ್ಮೆಂಟ್ ನೋಡಲು ಖುಷಿ ಆಗುತ್ತಿದೆ. ನೀವೆಲ್ಲರೂ ನಮಗೆ ನೀಡಿದ ಬೆಂಬಲಕ್ಕೆ ಬೆಲೆ ಕಟ್ಟಲಾಗದು’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
#Kotigobba3inTheaters Thank you all for the luv ….
Been seeing the videos uploaded from the early morn shows,,, its a bliss to see the excitement at the theaters.
You all have stood by us,, and it’s priceless.
???❤ pic.twitter.com/a3tBWUXSeO
— Kichcha Sudeepa (@KicchaSudeep) October 15, 2021
ಥಿಯೇಟರ್ಗಳ ಎದುರು ಅಭಿಮಾನಿಗಳು ಸುದೀಪ್ಗೆ ಜೈಕಾರ ಹಾಕುತ್ತಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರದ ಒಳಗೆ ಸಖತ್ ಆಗಿ ಡ್ಯಾನ್ಸ್ ಮಾಡುತ್ತ, ಕೋಟಿಗೊಬ್ಬನಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುತ್ತಿದೆ. ಈ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ.
ಕೋಟಿಗೊಬ್ಬ ಗ್ರ್ಯಾಂಡ್ ಎಂಟ್ರಿ ನೀಡಿದ್ದಾನೆ. ರಾಜ್ಯದ ಹಲವು ಕಡೆಗಳಲ್ಲಿ ಮುಂಜಾನೆ 7 ಗಂಟೆಗೆ ಮೊದಲ ಪ್ರದರ್ಶನ ಶುರು ಆಗಿದೆ. ಚಿತ್ರಮಂದಿರಗಳ ಮುಂದೆ ಜಮಾಯಿಸಿರುವ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಿಚ್ಚ ಸುದೀಪ್ಗೆ ಜೈಕಾರ ಹಾಕಿ ಈ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಗಾಂಧಿನಗರದ ಭೂಮಿಕಾ ಥಿಯೇಟರ್, ಎಸ್.ಪಿ. ರಸ್ತೆಯಲ್ಲಿರುವ ಶಾರದಾ ಟಾಕೀಸ್ ಸೇರಿದಂತೆ ಹಲವು ಕಡೆಗಳಲ್ಲಿ ಫ್ಯಾನ್ಸ್ ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತಿದೆ.
ಇದನ್ನೂ ಓದಿ:
‘ಕೋಟಿಗೊಬ್ಬ’ನಿಗೆ ಅದ್ದೂರಿ ಸ್ವಾಗತ; ದಸರಾ ಹಬ್ಬದ ಸಡಗರ ಹೆಚ್ಚಿಸಿದ ಸುದೀಪ್ ಸಿನಿಮಾ
‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್ ವಿಡಿಯೋ ಸಂದೇಶ