AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prem: ಪ್ರೇಮ್ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಟ್ರೈಲರ್ ರಿಲೀಸ್; ಭರ್ಜರಿ ಕಮ್​ಬ್ಯಾಕ್ ಮುನ್ಸೂಚನೆ ನೀಡಿದ ಲವ್ಲಿ ಸ್ಟಾರ್ 

Premam Poojyam: ಸ್ಯಾಂಡಲ್​ವುಡ್​ನಲ್ಲಿ ಲವ್ಲಿ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಪ್ರೇಮ್ ತಮ್ಮ 25ನೇ ಚಿತ್ರದ ಬಿಡುಗಡೆಯ ಸಂತಸದಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Prem: ಪ್ರೇಮ್ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಟ್ರೈಲರ್ ರಿಲೀಸ್; ಭರ್ಜರಿ ಕಮ್​ಬ್ಯಾಕ್ ಮುನ್ಸೂಚನೆ ನೀಡಿದ ಲವ್ಲಿ ಸ್ಟಾರ್ 
‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್, ಬೃಂದಾ ಆಚಾರ್ಯ
TV9 Web
| Updated By: shivaprasad.hs|

Updated on: Oct 15, 2021 | 4:33 PM

Share

ಕೊರೊನಾ ಎರಡನೇ ಅಲೆ ಕಡಿಮೆಯಾದ ಬಳಿಕ ಕನ್ನಡದಲ್ಲಿ ಹಲವಾರು ಚಿತ್ರಗಳು ಬಿಡುಗಡೆಯ ದಿನಾಂಕ‌ ಘೋಷಿಸಿವೆ. ಅವುಗಳಲ್ಲಿ ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ (Premam Poojyam) ಕೂಡ ಒಂದು. ಈಗಾಗಲೇ ಚಿತ್ರದ ಹಾಡುಗಳಿಂದ ಕನ್ನಡ ಸಿನಿ‌ ಪ್ರೇಮಿಗಳ ಗಮನ ಸೆಳೆದಿರುವ ಚಿತ್ರವು, ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ. ಇದರಿಂದಾಗಿ ಚಿತ್ರದ ಕುರಿತು‌ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕಾಯುವಂತೆ‌ ಮಾಡಿದೆ.

ಲವ್ಲಿ ಸ್ಟಾರ್ ಪ್ರೇಮ್ (Prem) ನಟನೆಯ 25ನೇ ಚಿತ್ರವಾಗಿರುವ ಕಾರಣ ‘ಪ್ರೇಮಂ ಪೂಜ್ಯಂ’ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇದೆ. ಜೊತೆಗೆ ಚಿತ್ರತಂಡವು ಈಗಾಗಲೇ ಹಲವು ಪ್ರೋಮೋ ಹಾಗೂ ಹಾಡುಗಳ ಮೂಲಕ ವೀಕ್ಷಕರನ್ನು ಸೆಳೆಯುವ ಯತ್ನ ನಡೆಸಿದ್ದು, ಅದರಲ್ಲಿ ಯಶಸ್ವಿಯೂ ಆಗಿದೆ. ಆದ್ದರಿಂದಲೇ ಚಿತ್ರದ ಟ್ರೈಲರ್ ಕುರಿತೂ ಅಭಿಮಾನಿಗಳಿಗೆ ನಿರೀಕ್ಷೆ‌ ಇತ್ತು. ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಹೇಗಿರಲಿದೆ‌ ಎಂಬ ಸುಳಿವನ್ನು ಟ್ರೈಲರ್ ಬಿಟ್ಟುಕೊಟ್ಟಿದೆ.

ಪ್ರೇಮಂ ಪೂಜ್ಯಂ ಟ್ರೈಲರ್ ಇಲ್ಲಿದೆ:

ಟ್ರೈಲರ್ ನಲ್ಲಿ ಪ್ರೇಮ್ ಕಾವ್ಯಮಯ ಸಂಭಾಷಣೆಯ ಮುಖಾಂತರ ತಮ್ಮ ಪಾತ್ರದ ಪರಿಚಯದೊಂದಿಗೆ ಇತರ ಪಾತ್ರಗಳ ಪರಿಚಯವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಬೃಂದಾ ಆಚಾರ್ಯ (Brunda Acharya) ನಾಯಕಿಯಾಗಿ ಕಾಣಿಸಿಕೊಂಡಿದ್ದು, ಐಂದ್ರಿತಾ ರೇ (Aindrita Ray) ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು ಮಾಸ್ಟರ್ ಆನಂದ್, ಟಿ.ಎಸ್.ನಾಗಾಭರಣ, ಅನು ಪ್ರಭಾಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಸಂಪೂರ್ಣವಾಗಿ ಮ್ಯೂಸಿಕಲ್ ರೊಮ್ಯಾಂಟಿಕ್ ಚಿತ್ರ ಇದಾಗಿದ್ದು, ಟ್ರೈಲರ್ ಕೂಡ ಅದಕ್ಕೆ ತಕ್ಕಂತೆ ಸೊಗಸಾಗಿ‌ ಮೂಡಿಬಂದಿದೆ.

ಸೂಪರ್ ಹಿಟ್ ಆಗಿರುವ ‘ಪ್ರೇಮಂ ಪೂಜ್ಯಂ’ ಟೈಟಲ್ ಟ್ರಾಕ್:

ಡಾ.ರಾಘವೇಂದ್ರ.ಬಿ.ಎಸ್ (Dr Raghavendra BS) ಈ ಚಿತ್ರದ ಕತೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷವೆಂದರೆ ನಿರ್ದೇಶಕರೇ ಸಾಹಿತ್ಯ ಹಾಗೂ ಸಂಗೀತವನ್ನೂ ಸಂಯೋಜಿಸಿದ್ದು,. ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿವೆ. ಟ್ರೈಲರ್ ನಲ್ಲಿ ಬಹಳ ಗಮನ ಸೆಳೆಯುವುದು ನವೀನ್ ಕುಮಾರ್.ಐ ಅವರ ಛಾಯಾಗ್ರಹಣ. ಪೇಂಟಿಂಗ್ ಮಾದರಿಯಲ್ಲಿ ಅವರು ಒಂದು ಪಕ್ಕಾ ರೊಮ್ಯಾಂಟಿಕ್ ಚಿತ್ರಕ್ಕೆ ಬೇಕಾಗುವಂತೆ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ‘ಪ್ರೇಮಂ ಪೂಜ್ಯಂ’ ಚಿತ್ರವು ಅಕ್ಟೋಬರ್ 29ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:

‘ಸಾಯಿ ಧರಮ್​ ತೇಜ್​ಗೆ ಪುನರ್​ಜನ್ಮ’: ಅಪಘಾತದಲ್ಲಿ ಬದುಕಿಬಂದ ಅಳಿಯನ ಬಗ್ಗೆ ಚಿರಂಜೀವಿ ಮಾತು

ಆರ್ಯನ್‌ ಖಾನ್‌ ಈಗ ಖೈದಿ ನಂಬರ್ 956; ಕೋಟ್ಯಧಿಪತಿ ಖಾನ್ ಕುಟುಂಬ ಆರ್ಯನ್​ಗೆ ನೀಡಿರೋ ಮನಿ ಆರ್ಡರ್ ಎಷ್ಟು ಸಾವಿರ?

ಸುದೀಪ್​ ವಿರುದ್ಧ ಕುತಂತ್ರ ರೂಪಿಸಿದ ದುಷ್ಟಶಕ್ತಿಗಳು ಯಾರು? ಎಲ್ಲವನ್ನೂ ವಿವರಿಸಿದ ಜಾಕ್​ ಮಂಜು

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ