‘ಸಾಯಿ ಧರಮ್​ ತೇಜ್​ಗೆ ಪುನರ್​ಜನ್ಮ’: ಅಪಘಾತದಲ್ಲಿ ಬದುಕಿಬಂದ ಅಳಿಯನ ಬಗ್ಗೆ ಚಿರಂಜೀವಿ ಮಾತು

ವಿಶೇಷವೆಂದರೆ ಇಂದು (ಅ.15) ಸಾಯಿ ಧರಮ್​ ತೇಜ್​ ಜನ್ಮದಿನ. ಹಾಗಾಗಿ ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಚಿರಂಜೀವಿ ಕೂಡ ಬರ್ತ್​ಡೇ ವಿಶ್​ ಮಾಡಿದ್ದಾರೆ.

‘ಸಾಯಿ ಧರಮ್​ ತೇಜ್​ಗೆ ಪುನರ್​ಜನ್ಮ’: ಅಪಘಾತದಲ್ಲಿ ಬದುಕಿಬಂದ ಅಳಿಯನ ಬಗ್ಗೆ ಚಿರಂಜೀವಿ ಮಾತು
ಚಿರಂಜೀವಿ, ಸಾಯಿ ಧರಮ್​ ತೇಜ್​

ನಟ ಸಾಯಿ ಧರಮ್​ ತೇಜ್​ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಸೆ.10ರಂದು ಭೀಕರ ಬೈಕ್​ ಅಪಘಾತಕ್ಕೆ ಒಳಗಾಗಿದ್ದ ಸಾಯಿ ಧರಮ್​ ತೇಜ್​ ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಆದರೆ ಈಗ ಅವರು ಆಸ್ಪತ್ರೆಯಿಂದ ಡಿಸ್​ಜಾರ್ಜ್​ ಆಗಿದ್ದಾರೆ. ವಿಜಯ ದಶಮಿ ಹಬ್ಬದ ಪ್ರಯುಕ್ತ ಅವರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಬಗ್ಗೆ ಅವರ ಮಾವ, ‘ಮೆಗಾ ಸ್ಟಾರ್​’ ಚಿರಂಜೀವಿ ಅವರು ಟ್ವೀಟ್​ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

‘ಈ ಬಾರಿ ವಿಜಯ ದಶಮಿಯ ವಿಶೇಷ ಏನೆಂದರೆ, ಸಾಯಿ ಧರಮ್​ ತೇಜ್​ ಸಂಪೂರ್ಣ ಗುಣಮುಖರಾಗಿ ಮನೆಗೆ ಬರುತ್ತಿದ್ದಾರೆ. ಭೀಕರ ಬೈಕ್​ ಅಪಘಾತದಲ್ಲಿ ಅವರು ಬದುಕಿ ಬಂದಿದ್ದಾರೆ. ಇದು ನಮ್ಮೆಲ್ಲರಿಗೂ ಖುಷಿ ನೀಡಿದೆ. ಅವರಿಗೆ ಇದು ಪುನರ್ಜನ್ಮ’ ಎಂದು ಚಿರಂಜೀವಿ ಟ್ವೀಟ್​ ಮಾಡಿದ್ದಾರೆ.

ವಿಶೇಷವೆಂದರೆ ಇಂದು (ಅ.15) ಸಾಯಿ ಧರಮ್​ ತೇಜ್​ ಜನ್ಮದಿನ. ಹಾಗಾಗಿ ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಚಿರಂಜೀವಿ ಕೂಡ ಬರ್ತ್​ಡೇ ವಿಶ್​ ಮಾಡಿದ್ದಾರೆ. ಬೈಕ್​ ಅಪಘಾತದ ಬಳಿಕ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಸಾಯಿ ಧರಮ್​ ತೇಜ್​ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಹಲವು ದಿನಗಳ ಕಾಲ ಅವರು ಕೋಮಾದಲ್ಲಿದ್ದರು.

ಸಾಯಿ ಧರಮ್​ ತೇಜ್​ ನಟಿಸಿದ್ದ ‘ರಿಪಬ್ಲಿಕ್​’ ಚಿತ್ರ ಅ.1ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆಗಲೂ ಅವರು ಕೋಮಾದಲ್ಲೇ ಇದ್ದರು. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಬಂದಿದ್ದ ಪವನ್​ ಕಲ್ಯಾಣ್​ ಅವರು ಅಳಿಯನ ಹೆಲ್ತ್​ ಬಗ್ಗೆ ಅಪ್​ಡೇಟ್​ ನೀಡಿದ್ದರು. ಸಾಯಿ ಧರಮ್​ ತೇಜ್​ ಇನ್ನೂ ಕಣ್ಣು ಬಿಟ್ಟಿಲ್ಲ ಎಂದು ಅವರು ಹೇಳಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ಆ ಆತಂಕ ನಿವಾರಣೆ ಆಗಿದೆ.

ಅತಿಯಾದ ಸ್ಪೀಡ್​ನಲ್ಲಿ ಸ್ಪೋರ್ಟ್ಸ್​ ಬೈಕ್​ ಓಡಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ವರದಿ ಆಗಿತ್ತು. ಆದರೆ ಸಾಯಿ ಧರಮ್​ ತೇಜ್​ ಕುಟುಂಬದವರು ಈ ಮಾತನ್ನು ಒಪ್ಪುತ್ತಿಲ್ಲ.

ಇದನ್ನೂ ಓದಿ:

ಭೀಕರ ಬೈಕ್​ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್​ ತೇಜ್​ ಹೀಗೆ ಮಾಡಬಾರದಿತ್ತು

ಸಾಯಿ ಧರಮ್​ ತೇಜ್​ ಬೈಕ್​ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ

Click on your DTH Provider to Add TV9 Kannada