ಆರ್ಯನ್‌ ಖಾನ್‌ ಈಗ ಖೈದಿ ನಂಬರ್ 956; ಕೋಟ್ಯಧಿಪತಿ ಖಾನ್ ಕುಟುಂಬ ಆರ್ಯನ್​ಗೆ ನೀಡಿರೋ ಮನಿ ಆರ್ಡರ್ ಎಷ್ಟು ಸಾವಿರ?

Aryan Khan: ನ್ಯಾಯಾಲಯವು ಆರ್ಯನ್ ಖಾನ್​ಗೆ ಜಾಮೀನು ನಿರಾಕರಿಸಿರುವುದರಿಂದ ಅಕ್ಟೋಬರ್ 20ರವರೆಗೆ ಆರ್ಯನ್ ಜೈಲಿನಲ್ಲಿರಬೇಕಾದುದು ಅನಿವಾರ್ಯವಾಗಿದೆ. ಈ ನಡುವೆ ಜೈಲಿನಲ್ಲಿ ಆರ್ಯನ್ ದಿನಚರಿ ಕುರಿತ ಹಲವು ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ.

ಆರ್ಯನ್‌ ಖಾನ್‌ ಈಗ ಖೈದಿ ನಂಬರ್ 956; ಕೋಟ್ಯಧಿಪತಿ ಖಾನ್ ಕುಟುಂಬ ಆರ್ಯನ್​ಗೆ ನೀಡಿರೋ ಮನಿ ಆರ್ಡರ್ ಎಷ್ಟು ಸಾವಿರ?
ಆರ್ಯನ್ ಖಾನ್

ಮುಂಬೈನ ಕ್ರೂಸ್ ಶಿಪ್‌ ಒಂದರಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್​ರನ್ನು ಎನ್​ಸಿಬಿ ಪೊಲೀಸರು ಬಂಧಿಸಿದ್ದರು‌. ಮೊದಲು ಎನ್​ಸಿಬಿಯವರ ಕಸ್ಟಡಿಯಲ್ಲಿದ್ದ ಆರ್ಯನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದುವರೆಗೆ ಹಲವಾರು ಬಾರಿ ಜಾಮೀನು ಅರ್ಜಿಯ ವಿಚಾರಣೆ‌ನಡೆದರೂ ಕೂಡ ಆರ್ಯನ್​ಗೆ ಜಾಮೀನು ಲಭ್ಯವಾಗಿಲ್ಲ. ಗುರುವಾರದಂದು ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಮತ್ತೊಮ್ಮೆ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ವಕೀಲರನ್ನು ಬದಲಿಸಿ ಜಾಮೀನಿಗೆ ಪ್ರಯತ್ನಿಸಿದರೂ ಕೂಡ ಆರ್ಯನ್​ಗೆ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೇ ಅಕ್ಟೋಬರ್ 20ರವರೆಗೆ ಜೈಲಿನಲ್ಲಿರುವಂತೆ ಆದೇಶಿಸಿ, ಪ್ರಕರಣದ ವಿಚಾರಣೆ ಮುಂದೂಡಿದೆ.

ಆರ್ಯನ್ ಪ್ರಸ್ತುತ ಮುಂಬೈನ ಆರ್ಥರ್ ಜೈಲಿನಲ್ಲಿದ್ದಾರೆ. ಬುಧವಾರದವರೆಗೆ ಜೈಲಿನ‌ ನಿಯಮಾವಳಿಗಳಂತೆ ಕ್ವಾರಂಟೈನ್ ಸೆಲ್ ನಲ್ಲಿದ್ದರು. ಕೊವಿಡ್ ವರದಿಗಳು ನೆಗೆಟಿವ್ ಬಂದ ನಂತರ, ಬುಧವಾರದಂದು ಅವರನ್ನು ಸಾಮಾನ್ಯ ಸೆಲ್ ಗಳಿಗೆ ರವಾನಿಸಲಾಗಿದೆ. ಮೂಲಗಳ ಪ್ರಕಾರ ಆರ್ಯನ್ ಪ್ರಸ್ತುತ ಜೈಲಿನ ಖೈದಿ ನಂಬರ್ 956 ಆಗಿದ್ದು, ಆ ನಂಬರ್​ನ ಸೆಲ್ ನಲ್ಲಿದ್ದಾರೆ.

ನಿಯಮಾವಳಿಗಳ ಪ್ರಕಾರ, ಆರ್ಯನ್ ಜೈಲಿನ ಒಳಗೆ ಅದೇ‌ ನಂಬರ್​ನಿಂದ (ನಂಬರ್ 956) ಕರೆಯಲ್ಪಡುತ್ತಾರೆ. ಅಚ್ಚರಿಯ ವಿಷಯವೆಂದರೆ ಆರ್ಯನ್​ಗೆ ಅಕ್ಟೋಬರ್ 11ರಂದು ಒಂದು ಮನಿ ಆರ್ಡರ್ ನೀಡಲಾಗಿದೆ. ಆರ್ಯನ್ ಕುಟುಂಬದವರು ಜೈಲಿನಲ್ಲಿ ಆತನ ಕ್ಯಾಂಟೀನ್ ಖರ್ಚಿಗಾಗಿ ನೀಡಿರುವ ಮನಿ ಆರ್ಡರ್ ಇದಾಗಿದ್ದು, ₹ 4,500 ರೂಗಳಿವೆ. ಜೈಲಿನ ನಿಯಮದಂತೆ ಓರ್ವ ವ್ಯಕ್ತಿ ತಿಂಗಳಿಗೆ ಗರಿಷ್ಠ ₹ 4,500 ರೂಗಳನ್ನು ಮಾತ್ರ ಮನಿ ಆರ್ಡರ್ ಆಗಿ ಪಡೆಯಲು ಅವಕಾಶವಿದೆ. ಶಾರುಖ್ ಖಾನ್ ಕುಟುಂಬವು ಅದರಂತೆ ಆರ್ಯನ್​ಗೆ ಹಣವನ್ನು ಕಳುಹಿಸಿದೆ.

ಮೂಲಗಳ ಪ್ರಕಾರ, ಆರ್ಯನ್ ಜೈಲಿನಲ್ಲಿ ಆರಾಮವಾಗಿಲ್ಲ. ಭದ್ರತೆಯ ದೃಷ್ಟಿಯಿಂದ ಅವರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಉಳಿದ ಆರೋಪಿಗಳನ್ನು ಬೇರೆ ಸೆಲ್​ಗಳಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ನೀಡುವ ಊಟವನ್ನು ಆರ್ಯನ್ ತಿನ್ನುತ್ತಿದ್ದರೂ ಕೂಡ ಇಷ್ಟಪಡುತ್ತಿಲ್ಲ. ಜೈಲಿನ ವಾತಾವರಣ ಹೊಂದಾಣಿಕೆಯಾಗದೇ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ. ಆರ್ಯನ್ ಮನೆಯಿಂದ ಕಳುಹಿಸಿದ ಉಡುಪುಗಳನ್ನೇ ಧರಿಸುತ್ತಿದ್ದು, ಅನಿವಾರ್ಯವಾಗಿ ಜೈಲಿನ ದಿನಚರಿಯಾದ, ಮುಂಜಾನೆ 6ಕ್ಕೆ ಏಳುವುದು, 7ಕ್ಕೆ ತಿಂಡಿ, 11ಕ್ಕೆ ಊಟ ಹಾಗೂ ಸಂಜೆ 6ಕ್ಕೆ ರಾತ್ರಿ ಊಟದ ದಿನಚರಿ ಪಾಲಿಸುತ್ತಿದ್ದಾರೆ. ಸಂಜೆ 6ರ ನಂತರ ಜೈಲಿನಲ್ಲಿ ಚಟುವಟಿಕೆ ಬಂದ್ ಆಗುತ್ತದೆ. ಆರ್ಯನ್ ತಡರಾತ್ರಿ ಶಿಪ್​ನಲ್ಲಿ ಪಾರ್ಟಿ ಮಾಡುವಾಗ ಸಿಕ್ಕಿಬಿದ್ದಿದ್ದರು. ಇದೀಗ ಅವರ ದಿನಚರಿ ಸಂಜೆ 6ರೊಳಗೆ ಮುಕ್ತಾಯವಾಗುತ್ತಿದೆ.

ಇದನ್ನೂ ಓದಿ:

ಸುದೀಪ್​ ವಿರುದ್ಧ ಕುತಂತ್ರ ರೂಪಿಸಿದ ದುಷ್ಟಶಕ್ತಿಗಳು ಯಾರು? ಎಲ್ಲವನ್ನೂ ವಿವರಿಸಿದ ಜಾಕ್​ ಮಂಜು

Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್​, ಮತ್ತೊಂದಿಷ್ಟು ಮಿಸ್ಸಿಂಗ್​

Sooryavanshi: ಅಭಿಮಾನಿಗಳಲ್ಲಿ ಕೈ ಮುಗಿದು ಬೇಡಿಕೊಂಡ ಅಕ್ಷಯ್, ದನಿಗೂಡಿಸಿದ ರಣವೀರ್, ಅಜಯ್; ಕಾರಣವೇನು?

Click on your DTH Provider to Add TV9 Kannada