ಸುದೀಪ್ ವಿರುದ್ಧ ಕುತಂತ್ರ ರೂಪಿಸಿದ ದುಷ್ಟಶಕ್ತಿಗಳು ಯಾರು? ಎಲ್ಲವನ್ನೂ ವಿವರಿಸಿದ ಜಾಕ್ ಮಂಜು
‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಗೆ ಅಡ್ಡಿ ಮಾಡಿದವರು ಯಾರು? ಸುದೀಪ್ ಅವರನ್ನು ದುಷ್ಟ ಜನರು ಯಾಕೆ ಟಾರ್ಗೆಟ್ ಮಾಡ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ವಿತರಕ, ನಿರ್ಮಾಪಕ, ಸುದೀಪ್ ಆಪ್ತ ಜಾಕ್ ಮಂಜು ಉತ್ತರ ನೀಡಿದ್ದಾರೆ.
ಗಾಂಧಿನಗರದಲ್ಲಿ ಸುದೀಪ್ ಅವರನ್ನು ಕೆಲವರು ಟಾರ್ಗೆಟ್ ಮಾಡಿದ್ದಾರೆ. ಕಿಚ್ಚನ ಏಳಿಗೆಯನ್ನು ಸಹಿಸದವರು ‘ಕೋಟಿಗೊಬ್ಬ 3’ ಚಿತ್ರಕ್ಕೆ ತೊಂದರೆ ಮಾಡಿದ್ದಾರೆ. ಈ ಮೊದಲು ಕೂಡ ಸುದೀಪ್ ನಟನೆಯ ಸಿನಿಮಾಗಳಿಗೆ ಇಂಥವರಿಂದ ಅಡೆಚಣೆ ಉಂಟಾಗಿತ್ತು. ಅಂಥ ದುಷ್ಟ ಶಕ್ತಿಗಳು ಯಾರು ಎಂಬುದನ್ನು ಸುದೀಪ್ ಆಪ್ತ ಜಾಕ್ ಮಂಜು ವಿವರಿಸಿದ್ದಾರೆ. ‘ಕೆಲವರಿಗೆ ಸುದೀಪ್ ಕಾಲ್ಶೀಟ್ ಸಿಕ್ಕಿರುವುದಿಲ್ಲ. ಅದಕ್ಕಾಗಿ ದುಷ್ಟ ಶಕ್ತಿಗಳೆಲ್ಲ ಒಂದಾಗುತ್ತಾರೆ’ ಎಂದು ಜಾಕ್ ಮಂಜು ಹೇಳಿದ್ದಾರೆ.
‘ಒಬ್ಬ ನಿರ್ಮಾಪಕನಿಗೆ ಈ ಸಿನಿಮಾದ ಎದುರು ರಿಲೀಸ್ ಮಾಡಬೇಕೋ ಬೇಡವೋ ಅಂತ ಸೂಕ್ತ ಸಲಹೆ ನೀಡುವ ಬದಲು ದಾರಿ ತಪ್ಪಿಸುತ್ತಾರೆ. ಅಂಥವರು ತನ್ನ ಮಗನನ್ನು ಯಾವತ್ತೂ ಪಣಕ್ಕೆ ಇಟ್ಟಿಲ್ಲ. ಇದು ಅರ್ಥ ಆಗುವವರಿಗೆ ಗೊತ್ತಾಗುತ್ತದೆ. ಅವರು ನಿರ್ಮಾಣ ಮಾಡಿದ ಒಂದು ಚಿತ್ರವನ್ನೂ ಇನ್ನೊಂದು ಚಿತ್ರದ ಎದುರು ರಿಲೀಸ್ ಮಾಡಿಲ್ಲ. ಆದರೆ ಕಂಡವರ ಮಕ್ಕಳನ್ನು ಹಾಳು ಮಾಡಿದ್ದಾರೆ. ‘ಕಿಚ್ಚ ಹುಚ್ಚ’, ‘ಮುಕುಂದಾ ಮುರಾರಿ’ ಚಿತ್ರಗಳ ವಿರುದ್ಧ ಬೇರೆ ಸಿನಿಮಾಗಳನ್ನು ರಿಲೀಸ್ ಮಾಡಿಸಿದ್ರು. ಸುದೀಪ್ ಅವರನ್ನು ಹಾಳು ಮಾಡಬೇಕು ಅಂತ ಇಷ್ಟೆಲ್ಲ ಕುತಂತ್ರ ನಡೆಸುತ್ತಾರೆ’ ಎಂದು ಜಾಕ್ ಮಂಜು ಹೇಳಿದ್ದಾರೆ.
ಇದನ್ನೂ ಓದಿ:
‘ಕೋಟಿಗೊಬ್ಬ 3’ ವಿರುದ್ಧ ಷಡ್ಯಂತ್ರ ಆಗಿದೆ; ‘ಸಲಗ’ ತಂಡ ಇದರಲ್ಲಿ ಭಾಗಿ ಆಗಿಲ್ಲ: ಜಾಕ್ ಮಂಜು ಸ್ಪಷ್ಟನೆ
Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್ನಿಂದ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್; ಅಂಥ ವಿಶೇಷ ಇದರಲ್ಲೇನಿದೆ?
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

