Rahul Vaidya: ಹಾಡಿನಲ್ಲಿ ದೇವಿಗೆ ಅಪಮಾನದ ಆರೋಪ; ಖ್ಯಾತ ಗಾಯಕನಿಗೆ ಜೀವ ಬೆದರಿಕೆ

Rahul Vaidya: ಹಾಡಿನಲ್ಲಿ ದೇವಿಗೆ ಅಪಮಾನದ ಆರೋಪ; ಖ್ಯಾತ ಗಾಯಕನಿಗೆ ಜೀವ ಬೆದರಿಕೆ
‘ಗಾರ್ಬೆ ಕೀ ರಾತ್’ ಹಾಡಿನ ದೃಶ್ಯ

Garbe Ki Raat: ಖ್ಯಾತ ಗಾಯಕ ರಾಹುಲ್ ವೈದ್ಯ ತಮ್ಮ ನೂತನ ಹಾಡಿನಲ್ಲಿ ದೇವಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಎಫ್​​ಐಆರ್​ ದಾಖಲಾಗಿದೆ.

TV9kannada Web Team

| Edited By: shivaprasad.hs

Oct 15, 2021 | 11:52 AM

ಖ್ಯಾತ ಗಾಯಕ ಹಾಗೂ ಮಾಜಿ ಬಿಗ್​ ಬಾಸ್ 14 ಸ್ಪರ್ಧಿ ರಾಹುಲ್ ವೈದ್ಯಗೆ (Rahul Vaidya) ಜೀವ ಬೆದರಿಕೆ ಎದುರಾಗಿದೆ. ಅವರ ಹೊಸ ಹಾಡು ‘ಗಾರ್ಬೆ ಕಿ ರಾತ್’ನಲ್ಲಿ (Gaarbe Ki Raat) ‘ಶ್ರೀ ಮೊಗಲ್ ಮಾ’ ದೇವಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ದೇವಿಯ ಆರಾಧಕರು ತಿರುಗಿಬಿದ್ದಿದ್ದು, ರಾಹುಲ್​ಗೆ ಜೀವ ಬೆದರಿಕೆ ಎದುರಾಗಿದೆ. ಈ ಹಾಡನ್ನು ನವರಾತ್ರಿಯ ಎರಡನೇ ದಿನದಂದು ಬಿಡುಗಡೆ ಮಾಡಲಾಗಿತ್ತು. ಯೂಟ್ಯೂಬ್​ನಲ್ಲಿ ಸುಮಾರು 5 ಮಿಲಿಯನ್ ವೀಕ್ಷಣೆಯನ್ನು ಈ ಹಾಡು ಕಂಡಿದೆ.

‘ಗಾರ್ಬೆ ಕೀ ರಾತ್’ ಹಾಡಿನಲ್ಲಿ ರಾಹುಲ್ ವೈದ್ಯ ಅವರೊಂದಿಗೆ, ಖ್ಯಾತ ಕಿರುತೆರೆ ನಿರೂಪಕಿ ನಿಯಾ ಶರ್ಮಾ(Nia Sharma) ಕೂಡ ಕಾಣಿಸಿಕೊಂಡಿದ್ದಾರೆ. ಈ ಹಾಡು ಗುಜರಾತಿ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪದ ನಂತರ ಇದೇ ವಿಷಯಕ್ಕೆ ಕುರಿತಂತೆ ರಾಹುಲ್ ವೈದ್ಯ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.

ಈ ಕುರಿತು ಭಕ್ತರು ರಾಹುಲ್ ವೈದ್ಯರಿಗೆ, ದೇವಿಯ ಹೆಸರನ್ನು ತೆಗೆಯುವಂತೆ ತಿಳಿಸಿದ್ದು, ಒಂದು ವೇಳೆ ತೆಗೆಯದಿದ್ದರೆ ಗಂಭೀರ ಕ್ರಮ ಎದುರಿಸಲು ಸಿದ್ಧರಾಗಿ ಎಂದು ತಿಳಿಸಿದ್ದಾರೆ. ಮತ್ತಷ್ಟು ಜನ ಆ ಹಾಡನ್ನೇ ಎಲ್ಲಾ ಮಾಧ್ಯಮಗಳಿಂದ ತೆಗೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಾಡಿನಲ್ಲಿ ನಿಯಾ ಶರ್ಮಾ ಅವರು ದೇವಿಯ ಕುರಿತು ಅವಹೇಳನಕಾರಿಯಾಗಿ ಪದ ಬಳಸಿದ್ದಾರೆ ಎಂಬುದು ಜನರ ಆರೋಪವಾಗಿದೆ.

ಈ ಕುರಿತು ರಾಹುಲ್ ವೈದ್ಯರ ವಕ್ತಾರ ಮಾಹಿತಿ ನೀಡಿದ್ದು, ಅವರಿಗೆ ಜೀವ ಬೆದರಿಕೆ ಬರುತ್ತಿರುವುದು ನಿಜ ಎಂದು ತಿಳಿಸಿದ್ದಾರೆ. ಸದ್ಯದಲ್ಲಿಯೇ ಹಾಡನ್ನು ಸರಿಪಡಿಸಲಾಗುವುದು ಎಂದೂ ಅವರು ತಿಳಿಸಿದ್ಧಾರೆ. ಹಾಡಿನಲ್ಲಿ ದೇವಿಯನ್ನು ಅಪಮಾನಿಸುವ ಯಾವ ಉದ್ದೇಶಗಳೂ ತಂಡಕ್ಕಿರಲಿಲ್ಲ ಎಂದು ಇದೇ ವೇಳೆ ಸ್ಪಷ್ಟನೆಯನ್ನೂ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಹುಲ್ ವೈದ್ಯ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಈಗ ಆಗಿರುವ ಸಮಸ್ಯೆಯನ್ನು ಸರಿಪಡಿಸಲು ಕೆಲವು ಸಮಯ ಬೇಕು. ಅದಕ್ಕಾಗಿ ಈಗ ಕೆಲಸವನ್ನು ಆರಂಭಿಸಿದ್ದೇವೆ ಎಂದು ರಾಹುಲ್ ವಕ್ತಾರ ಮಾಹಿತಿ ನೀಡಿದ್ದಾರೆ. ಸದ್ಯ ‘ಗಾರ್ಬೆ ಕೀ ರಾತ್’ ಹಾಡನ್ನು ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ಲಭ್ಯವಿಲ್ಲ.

ಇದನ್ನೂ ಓದಿ:

G. K. Govind Rao : ‘ಪ್ರೊಫೆಸರ್, ಇನ್ನ್ಯಾರೊಂದಿಗೆ ನಾನು ಜಗಳವಾಡಲಿ’ ನಿರ್ದೇಶಕ ಟಿ.ಎನ್. ಸೀತಾರಾಮ್

ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

Follow us on

Related Stories

Most Read Stories

Click on your DTH Provider to Add TV9 Kannada