ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಮೋಹನ್ ಭಾಗವತ್

ಕಾಶ್ಮೀರದಲ್ಲಿ ಉಗ್ರಗಾಮಿಗಳು ಟಾರ್ಗೆಟ್ ಹತ್ಯೆ ಮಾಡುತ್ತಿದ್ದಾರೆ. ಜನರನ್ನು ಹೆದರಿಸಲು ಟಾರ್ಗೆಟ್ ಹತ್ಯೆ ಮಾಡಲಾಗುತ್ತಿದೆ. ಹಿಂದೂಗಳು ‌ಸಂಘಟಿತರಾಗಬೇಕು. ಜಾಗೃತ, ಬಲಶಾಲಿ, ಸಂಘಟಿತ ಹಿಂದೂ ಸಮಾಜದಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

TV9kannada Web Team

| Edited By: Sushma Chakre

Oct 15, 2021 | 11:26 AM

ನವದೆಹಲಿ: ಚೀನಾ, ಪಾಕಿಸ್ತಾನ ಎರಡೂ ತಾಲಿಬಾನ್ ಜೊತೆ ಇವೆ. ತಾಲಿಬಾನ್ ಬದಲಾಗಬಹುದು, ಆದರೆ ಪಾಕಿಸ್ತಾನ ಬದಲಾಗಲ್ಲ. ತಾಲಿಬಾನ್ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಕಾಶ್ಮೀರದಲ್ಲಿ ಉಗ್ರಗಾಮಿಗಳು ಟಾರ್ಗೆಟ್ ಹತ್ಯೆ ಮಾಡುತ್ತಿದ್ದಾರೆ. ಜನರನ್ನು ಹೆದರಿಸಲು ಟಾರ್ಗೆಟ್ ಹತ್ಯೆ ಮಾಡಲಾಗುತ್ತಿದೆ. 370ನೇ ವಿಧಿ ರದ್ದಾದ ಬಳಿಕ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ. ಅ. 20ರಂದು ರಷ್ಯಾ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಮಾತುಕತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲದಕ್ಕೂ ನಾವು ಸಿದ್ಧವಾಗಿರಬೇಕಾಗಿದೆ  ಎಂದು ಮಹಾರಾಷ್ಟ್ರದ ನಾಗ್ಪುರ ಆರ್​ಎಸ್​ಎಸ್​ ಕಚೇರಿಯಲ್ಲಿ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ವಿಜಯದಶಮಿ ಪ್ರಯುಕ್ತ ನಾಗ್ಪುರದಲ್ಲಿ ಅವರು ಮಾತನಾಡಿದ್ದಾರೆ.

ಕಾಶ್ಮೀರದ ಜನರ ಮನಸ್ಸನ್ನು ಭಾರತದ ಜೊತೆಗೆ ಜೋಡಿಸಬೇಕು. ನಾವು ದುರ್ಬಲವಾದಾಗ ಬೇರೆಯವರಿಗೆ ಹೆದರಬೇಕಾಗುತ್ತದೆ. ನಾವು ಸದೃಢವಾಗಬೇಕು. ಕಾಶ್ಮೀರದಲ್ಲಿ ಮುಗ್ದರನ್ನು ಉಗ್ರರು ‌ಹತ್ಯೆ ಮಾಡುತ್ತಿದ್ದಾರೆ. ಮಾತುಕತೆಯ ಜೊತೆಗೆ ಸೇನೆ ಸಂಪೂರ್ಣ ಸನ್ನದ್ದ ಸ್ಥಿತಿಯಲ್ಲಿರಬೇಕು. ಹಿಂದೂಗಳು ‌ಸಂಘಟಿತರಾಗಬೇಕು. ಜಾಗೃತ, ಬಲಶಾಲಿ, ಸಂಘಟಿತ ಹಿಂದೂ ಸಮಾಜದಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

ದೇಶದ ಗಡಿಯಲ್ಲಿ ಉಗ್ರರ ನುಸುಳುವಿಕೆಯನ್ನು ಸಂಪೂರ್ಣ ತಡೆಗಟ್ಟಬೇಕು. ಭಾರತದ ಭಾಗ್ಯ ಬದಲಾಗುವುದು ವಿಶ್ವಕ್ಕೆ ಅಗತ್ಯ. ಜನಸಂಖ್ಯೆ ನೀತಿ ಬಗ್ಗೆ ಮತ್ತೆ ಚರ್ಚೆ ಆಗಬೇಕು. ಜನಸಂಖ್ಯೆಯ ಅಸಮತೋಲನ ದೊಡ್ಡ ಸಮಸ್ಯೆಯಾಗಿದೆ. ವಸುಧೈವ ಕುಟುಂಬಕ್ಕಂ ನಮ್ಮ ಮಂತ್ರ. ಮೂರನೇ ಕೊರೊನಾ ಅಲೆ ಬರುವ ಸಾಧ್ಯತೆ ಕಡಿಮೆಯಿದೆ. ಆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ದುರ್ಬಲರ ರಕ್ಷಣೆಗೆ ಬಳಸಬೇಕು. ಹಿಂದೂ ಸಮಾಜವನ್ನು ಸದೃಢವಾಗಿಸಬೇಕು. ನಮ್ಮ ಜೊತೆಗೆ ಮುಸ್ಲಿಮರು ಕೂಡ ಇರಬೇಕು ಎಂದಿದ್ದಾರೆ.

ಹಿಂದೂ ಸಮಾಜದಲ್ಲಿ ದೇವಸ್ಥಾನಗಳ‌ ಸ್ಥಿತಿ ಚೆನ್ನಾಗಿಲ್ಲ. ದಕ್ಷಿಣ ಭಾರತದಲ್ಲಿ ದೇವಾಲಯಗಳು ಸರ್ಕಾರದ ಅಧೀನದಲ್ಲಿವೆ, ಕೆಲವೇ ದೇವಾಲಯಗಳು ಭಕ್ತರ ಅಧೀನದಲ್ಲಿವೆ. ಕೆಲವೆಡೆ ದೇವಾಲಯಗಳ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ದೇವರೇ ಮಂದಿರಗಳ ಮಾಲೀಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರ ಕೆಲವು ವರ್ಷ ಮಾತ್ರ ದೇವಾಲಯ ತನ್ನ ಸ್ವಾಧೀನಕ್ಕೆ ಪಡೆಯಬಹುದು. ಬಳಿಕ ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ: Jamboo Savari 2021: ಮೈಸೂರು ಅರಮನೆಯಲ್ಲಿ ವಿಜಯದಶಮಿ ಸಂಭ್ರಮ; ಇಂದು ಸಂಜೆ ಐತಿಹಾಸಿಕ ದಸರಾ ಜಂಬೂಸವಾರಿ

Poonch Terror Attack: ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಉಗ್ರರ ಗುಂಡೇಟಿಗೆ ಸೇನಾಧಿಕಾರಿ, ಯೋಧ ಸಾವು

Follow us on

Related Stories

Most Read Stories

Click on your DTH Provider to Add TV9 Kannada