‘ಕೋಟಿಗೊಬ್ಬ 3’ ಪಬ್ಲಿಸಿಟಿ ಮಾಡದಿರುವ ಬಗ್ಗೆ ಸೂರಪ್ಪ ಬಾಬು ಪ್ರತಿಕ್ರಿಯೆ

‘ಕೋಟಿಗೊಬ್ಬ 3’ ಪಬ್ಲಿಸಿಟಿ ಮಾಡದಿರುವ ಬಗ್ಗೆ ಸೂರಪ್ಪ ಬಾಬು ಪ್ರತಿಕ್ರಿಯೆ
ಸೂರಪ್ಪ ಬಾಬು-ಸುದೀಪ್​

ಎಲ್ಲಾ ನನ್ನ ಕಿಚ್ಚನ ಅಭಿಮಾನಿಗಳಿಗೆ ಥ್ಯಾಂಕ್ಸ್​. ನಾಲ್ಕು ದಿನಗಳಲ್ಲಿ ನಡೆದ ಘಟನೆಯನ್ನು ನಾನು ವಿಡಿಯೋ ಮೂಲಕ ತಿಳಿಸಿದ್ದೇನೆ ಎಂದು ಮಾತು ಆರಂಭಿಸಿದ್ದಾರೆ ಅವರು.

TV9kannada Web Team

| Edited By: Rajesh Duggumane

Oct 15, 2021 | 5:43 PM

ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ರಿಲೀಸ್​ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಒಂದು ದಿನ ತಡವಾಗಿ ರಿಲೀಸ್ ಆದ ಹೊರತಾಗಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಸಿನಿಮಾಗೆ ಅಷ್ಟು ಪ್ರಚಾರ ನೀಡಿಲ್ಲ ಎನ್ನುವ ಮಾತಿದೆ. ಈ ವಿಚಾರಕ್ಕೆ ಸಂಬಂಧಿಸಿ ಸೂರಪ್ಪ ಬಾಬು ಉತ್ತರ ನೀಡಿದ್ದಾರೆ.

ಸಿನಿಮಾ ರಿಲೀಸ್​ ಆದ ಬೆನ್ನಲ್ಲೇ ಸೂರಪ್ಪ ಬಾಬು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ‘ಎಲ್ಲಾ ನನ್ನ ಕಿಚ್ಚನ ಅಭಿಮಾನಿಗಳಿಗೆ ಥ್ಯಾಂಕ್ಸ್​. ನಾಲ್ಕು ದಿನಗಳಲ್ಲಿ ನಡೆದ ಘಟನೆಯನ್ನು ನಾನು ವಿಡಿಯೋ ಮೂಲಕ ತಿಳಿಸಿದ್ದೇನೆ. ಸುದೀಪ್​ ಅವರೂ ಖಡಕ್​ ಉತ್ತರ ನೀಡಿದ್ದಾರೆ. ಸುದೀಪ್​ ಅವರು ನನ್ನ ಬೆಂಬಲಕ್ಕೆ ನಿಲ್ಲುತ್ತೇನೆ ಎಂದಿದ್ದರು. ಅದೇ ರೀತಿ ಇಂದು ಕೋಟಿಗೊಬ್ಬ 3 ರಿಲೀಸ್​ ಆಗಿ ಇಡೀ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಮರ್ಶೆಯೂ ಅದ್ಭುತವಾಗಿದೆ. ನೀವು ಚಿತ್ರವನ್ನು ಹರಸಿದ್ದೀರಿ’ ಎಂದರು ಅವರು.

‘ನನ್ನ ಕಡೆಯಿಂದಲೂ ತಪ್ಪುಗಳು ಆಗಿವೆ. ಆ ತಪ್ಪುಗಳು ಆಗೋಕೂ ಒಂದಷ್ಟು ಕಾರಣಗಳಿವೆ. ಇದಕ್ಕಾಗಿ ಪಬ್ಲಿಸಿಟಿ ಕೊಡೋಕೆ ಆಗಿಲ್ಲ. ಆ ಮಟ್ಟಕ್ಕೆ ತಲುಪಿಲ್ಲ. ಆದರೆ, ಈಗ ನೀವು ಅದ್ಭುತವಾಗಿ ಸಹಕಾರ ನೀಡಿದ್ದೀರಿ. ರಿಲೀಸ್​ಗೆ​ ತೊಂದರೆ ಆದ ವಿಚಾರವನ್ನು ಮಾಧ್ಯಮದವರು ಸವಿವರವಾಗಿ ವಿವರಿಸಿದ್ದಾರೆ. ಅವರಿಗೆ ಧನ್ಯವಾದ’ ಎಂದಿದ್ದಾರೆ ಸೂರಪ್ಪ ಬಾಬು.

ಈ ಬಗ್ಗೆ ಗುರುವಾರ (ಅಕ್ಟೋಬರ್​ 14) ಮಾತನಾಡಿದ್ದ ಸೂರಪ್ಪ ಬಾಬು, ‘ಕನ್ನಡ ಕಲಾಭಿಮಾನಿಗಳಲ್ಲಿ ಹಾಗೂ ಕಿಚ್ಚ ಸುದೀಪ್​ ಅಭಿಮಾನಿಗಳಲ್ಲಿ ಮನವಿ. ವಿತರಕರು ಮಾಡಿದ ಮೋಸದಿಂದ ‘ಕೋಟಿಗೊಬ್ಬ 3’ ರಿಲೀಸ್​ ಮಾಡೋಕೆ ಆಗ್ತಿಲ್ಲ. ಎಂದಿನಂತೆ ಶುಕ್ರವಾರದಿಂದ (ಅಕ್ಟೋಬರ್​ 15) ಬೆಳಗ್ಗೆ 6 ಗಂಟೆಯಿಂದ ಶೋ ಪ್ರಸಾರವಾಗಲಿದೆ. ತಾವು ಸಹಕರಿಸಿ. ಸುದೀಪ್​ ಅವರೇ ನಿಮ್ಮ ಬಳಿಯೂ ಕ್ಷಮೆ ಕೇಳುತ್ತೇನೆ. ಈ ಬಗ್ಗೆ ಟ್ವೀಟ್​ ಮಾಡಿ’ ಎಂದಿದ್ದರು.

ಇದನ್ನೂ ಓದಿ:  ‘ಕೋಟಿಗೊಬ್ಬ 3’ ರಿಲೀಸ್​ ಏಕಾಗಲಿಲ್ಲ? ಅಸಲಿಗೆ ಆಗಿದ್ದೇನು? ಇಲ್ಲಿದೆ ನಿಜವಾದ ಕಾರಣ

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ

Follow us on

Related Stories

Most Read Stories

Click on your DTH Provider to Add TV9 Kannada