ಅರವಿಂದ್ಗೆ ಸಿಕ್ತು ಯೂತ್ ಐಕಾನ್ ಅವಾರ್ಡ್; ಸಂತಸ ಪಟ್ಟ ದಿವ್ಯಾ ಉರುಡುಗ
ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ
ಅರವಿಂದ್ ಕೆ.ಪಿ. ಅವರು ಬಿಗ್ ಬಾಸ್ಗೆ ಬಂದ ನಂತರದಲ್ಲಿ ಅವರ ಖ್ಯಾತಿ ಹೆಚ್ಚಿತು. ಅವರು ಮಾಡಿರುವ ಸಾಧನೆ ಅನೇಕ ಜನರಿಗೆ ಸ್ಫೂರ್ತಿದಾಯಕವಾಗಿದೆ. ಅವರನ್ನು ಸಾಕಷ್ಟು ಜನರು ಮಾದರಿ ಆಗಿ ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಅನುಬಂಧ ಅವಾರ್ಡ್ಸ್ನಲ್ಲಿ ‘ಜನ ಮೆಚ್ಚಿದ ಯೂತ್ ಐಕಾನ್’ ಅವಾರ್ಡ್ ಸಿಕ್ಕಿದೆ. ಈ ಅವಾರ್ಡ್ ಸಿಗುತ್ತಿದ್ದಂತೆ ಅತಿ ಹೆಚ್ಚು ಸಂತೋಷ ಪಟ್ಟಿದ್ದು ದಿವ್ಯಾ ಉರುಡುಗ.
ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದರ ಜತೆಗೆ ವರ್ಷಕ್ಕೆ ಒಂದು ಬಾರಿ ಧಾರಾವಾಹಿ ಕಲಾವಿದರನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈಗ ಕಲರ್ಸ್ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್ನೊಂದಿಗೆ ಬಂದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ಇಟ್ಟುಕೊಂಡು ವಿವಿಧ ರೀತಿಯ ಅವಾರ್ಡ್ ನೀಡಲಾಗಿದೆ. ಕೊವಿಡ್ ಎರಡನೇ ಅಲೆ ಕಡಿಮೆ ಆಗಿದ್ದರಿಂದ ಈ ಬಾರಿಯ ಕಾರ್ಯಕ್ರಮ ಬಹಳ ಅದ್ದೂರಿಯಾಗಿತ್ತು. ಅಕ್ಟೋಬರ್ 15,16,17ರಂದು ಸಂಜೆ 7ಗಂಟೆಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಿದೆ.
ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ನಾಯಕ, ಜನ ಮೆಚ್ಚಿದ ಜೋಡಿ, ಜನ ಮೆಚ್ಚಿದ ಯೂತ್ ಐಕಾನ್ ಸೇರಿ ಸಾಕಷ್ಟು ಅವಾರ್ಡ್ಗಳನ್ನು ನೀಡಲಾಗುತ್ತದೆ. ಇದಕ್ಕೆ ವೀಕ್ಷಕರು ವೋಟ್ ಮಾಡಬೇಕು. ಯಾರು ಹೆಚ್ಚು ವೋಟ್ ಪಡೆಯುತ್ತಾರೋ ಅವರು ಅನುಬಂಧ ಅವಾರ್ಡ್ಸ್ಗೆ ಭಾಜನರಾಗುತ್ತಾರೆ. ಅದೇ ರೀತಿ ಜನ ಮೆಚ್ಚಿದ ಯೂತ್ ಐಕಾನ್ ಅವಾರ್ಡ್ಗೆ ಅರವಿಂದ್ ಕೆ.ಪಿ ಹೆಚ್ಚು ಮತ ಪಡೆದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
View this post on Instagram
ಅರವಿಂದ್ ಅವರಿಗೆ ಪ್ರಶಸ್ತಿ ನೀಡಿದ್ದು ಮತ್ತೊಂದು ಯೂತ್ ಐಕಾನ್ ಅನ್ನೋದು ವಿಶೇಷ. ಕರ್ನಾಟಕ ಮೂಲದ ಸಹಾಸ್ ಯತಿರಾಜ್ ಅವರು ಪ್ಯಾರಾ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದಾರೆ. ವೃತ್ತಿಯಲ್ಲಿ ಅವರು ಐಎಎಸ್ ಅಧಿಕಾರಿ. ಅವರು ಈ ಪ್ರಶಸ್ತಿಯನ್ನು ಅರವಿಂದ್ಗೆ ನೀಡಿದರು. ಈ ವೇಳೆ ದಿವ್ಯಾ ಉರುಡುಗ ಎದ್ದು ನಿಂತು ಅರವಿಂದ್ಗೆ ಚಪ್ಪಾಳೆ ಹೊಡೆದರು.
View this post on Instagram
ಇದನ್ನೂ ಓದಿ: ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ.; ಇಲ್ಲಿದೆ ವಿಡಿಯೋ