ಕನ್ನಡ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆದ ನಂತರ ಮಂಜು ಪಾವಗಡ ಖ್ಯಾತಿ ಹೆಚ್ಚಿದೆ. ಹೋದಲ್ಲಿ ಬಂದಲ್ಲಿ ಅವರಿಗೆ ಆತಿಥ್ಯ ಸಿಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯ ಸಾಕಷ್ಟು ಕಾರ್ಯಕ್ರಮಗಳಿಗೆ ಮಂಜು ಅತಿಥಿಯಾಗಿ ತೆರಳುತ್ತಿದ್ದಾರೆ. ಅದೇ ರೀತಿ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಮಂಜು ತೆರಳಿದ್ದರು. ಈ ವೇಳೆ ಒಂದು ಹಾಸ್ಯದ ದೃಶ್ಯ ನಡೆದಿದೆ.
ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದರ ಜತೆಗೆ ವರ್ಷಕ್ಕೆ ಒಂದು ಬಾರಿ ಧಾರಾವಾಹಿ ಕಲಾವಿದರನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈಗ ಕಲರ್ಸ್ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್ನೊಂದಿಗೆ ವೀಕ್ಷಕರ ಎದುರು ಬಂದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಇಟ್ಟುಕೊಂಡು ವಿವಿಧ ರೀತಿಯ ಅವಾರ್ಡ್ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಂಜು ಪಾವಗಡ ಕೂಡ ಆಗಮಿಸಿದ್ದರು.
ಸೃಜನ್ ಲೋಕೇಶ್ ಹಾಗೂ ರಮೋಲಾ ವೇದಿಕೆ ಏರಿದ್ದರು. ಈ ವೇಳೆ ಮಂಜು ಪಾವಗಡ ಅವರು ವೇದಿಕೆ ಹತ್ತಿದರು. ಅವರನ್ನು, ಸೃಜನ್ ಮಾತನಾಡಿಸಿದರು. ಅಲ್ಲದೆ, ರಮೋಲಾ ಅವರನ್ನು ತೋರಿಸಿ ಇವರು ಯಾರು ಎಂದು ಮಂಜುಗೆ ಸೃಜನ್ ಪ್ರಶ್ನೆ ಮಾಡಿದರು. ಇದಕ್ಕೆ, ಮಂಜು ‘ಹುಡುಗಿ’ ಎಂದು ಉತ್ತರಿಸಿದರು. ಇದಕ್ಕೆ ಎಲ್ಲರೂ ನಕ್ಕರು. ‘ನಿಮಗೆ ಹೇಗೆ ಗೊತ್ತು?’ ಎಂದು ಮಂಜುಗೆ ಸೃಜನ್ ಪ್ರಶ್ನೆ ಮಾಡಿದರು. ಇದಕ್ಕೆ ಮಂಜು, ‘ನೋಡಿದ್ರೆ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.
ನಂತರ ಸೃಜನ್ ಅವರೇ ರಮೋಲಾ ಪರಿಚಯ ಮಾಡಿಕೊಟ್ಟರು. ‘ಇವರು ಸಾನಿಯಾ ಅಂತ. ನಿಜವಾದ ಹೆಸರು ರಮೋಲಾ’ ಎಂದರು. ಆಗ ಮಂಜು ರಮೋಲಾ ಎನ್ನುವ ಬದಲು ರಂಬೋಲಾ ಎಂದರು. ಈ ವೇಳೆಯೂ ಎಲ್ಲರೂ ನಕ್ಕರು.
ಕಲರ್ಸ್ ಕನ್ನಡ ವಾಹಿನಿ ಅದ್ದೂರಿಯಾಗಿ ‘ಅನುಬಂಧ’ ಅವಾರ್ಡ್ಸ್ ಕಾರ್ಯಕ್ರಮ ನಡೆಸಿದೆ. ಅಕ್ಟೋಬರ್ 15,16 ಮತ್ತು 17ರಂದು ಈ ಕಾರ್ಯಕ್ರಮ ಕಲರ್ಸ್ನಲ್ಲಿ ಪ್ರಸಾರವಾಗಿದೆ. ಧಾರಾವಾಹಿ ಕಲಾವಿದರು ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ನಾನಾ ರೀತಿಯ ಅವಾರ್ಡ್ ಸಿಕ್ಕಿದೆ.
ಇದನ್ನೂ ಓದಿ: ಕನ್ನಡತಿಯಲ್ಲಿ ಖಡಕ್ ವಿಲನ್ ರಮೋಲಾ ನಿಜ ಜೀವನದಲ್ಲಿ ಹೀಗಿದ್ದಾರಾ?; ಸಣ್ಣ ಘಟನೆಯಿಂದ ಎಲ್ಲವೂ ಗೊತ್ತಾಯ್ತು