‘ಕನ್ನಡತಿ’ ವರುಧಿನಿ ಪರವಾಗಿ ಧ್ವನಿ ಎತ್ತಿದ ವೀಕ್ಷಕರು; ಇದಕ್ಕೆ ಕಾರಣ ಶ್ವೇತಾ

‘ಕನ್ನಡತಿ’ ವರುಧಿನಿ ಪರವಾಗಿ ಧ್ವನಿ ಎತ್ತಿದ ವೀಕ್ಷಕರು; ಇದಕ್ಕೆ ಕಾರಣ ಶ್ವೇತಾ
ಸುಕೃತಾ-ಸಾರಾ ಅಣ್ಣಯ್ಯ

ಸುಕೃತಾ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದರು. ಅವರು ಮಾಡುತ್ತಿದ್ದ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಇದಾದ ನಂತರ ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದರು.

TV9kannada Web Team

| Edited By: Rajesh Duggumane

Oct 18, 2021 | 9:41 PM

‘ಕನ್ನಡತಿ’ ಧಾರಾವಾಹಿ ವರುಧಿನಿ ಪಾತ್ರ ಮಾಡುತ್ತಿರುವ ಸಾರಾ ಅಣ್ಣಯ್ಯ ಅನೇಕರಿಗೆ ಇಷ್ಟವಾಗುತ್ತಾರೆ. ತೆರೆಮೇಲೆ ಅವರು ನಿರ್ವಹಿಸುತ್ತಿರುವ ಪಾತ್ರ ಭಿನ್ನವಾಗಿದೆ. ಕೆಲವೊಮ್ಮೆ ಅವರು ಅತಿಯಾಗಿ ಆಡುವುದರಿಂದ ವೀಕ್ಷಕರಿಗೆ ಕಿರಿಕಿರಿ ಉಂಟಾದ ಉದಾಹರಣೆ ಇದೆ. ಆದರೆ, ತೆರೆಮೇಲೆ ಹಾಗೂ ನಿಜ ಜೀವನದಲ್ಲಿ ತುಂಬಾನೇ ಸ್ಟೈಲಿಸ್ಟ್​. ಈ ಕಾರಣಕ್ಕೆ ಅನೇಕರು ಅವರ ಪರವಾಗಿ ಧ್ವನಿ ಎತ್ತಿದ್ದಾರೆ. ಹಾಗಾದರೆ, ಇದಕ್ಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸುಕೃತಾ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದರು. ಅವರು ಮಾಡುತ್ತಿದ್ದ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಇದಾದ ನಂತರ ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಆದರೆ, ಈಗ ಸುಕೃತಾ ಧಾರಾವಾಹಿಗೆ ಕಂಬ್ಯಾಕ್​ ಮಾಡಿದ್ದಾರೆ. ‘ಲಕ್ಷಣ’ ಧಾರಾವಾಹಿಯಲ್ಲಿ ಶ್ವೇತಾ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ‘ಲಕ್ಷಣ’ದಲ್ಲಿ ಅವರದ್ದು ನೆಗೆಟಿವ್ ಪಾತ್ರ. ಅವರು ಈ ಧಾರಾವಾಹಿಯಲ್ಲಿ ಸಖತ್​ ಸ್ಟೈಲಿಶ್​​ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಈ ಬಾರಿಯ ‘ಅನುಬಂಧ’ ಅವಾರ್ಡ್ಸ್​ನಲ್ಲಿ ಜನ ಮೆಚ್ಚಿದ ಸ್ಟೈಲ್​ ಐಕಾನ್​ (ಫಿಮೇಲ್​) ಸುಕೃತಾಗೆ (ಶ್ವೆತಾ ಪಾತ್ರ) ಸಿಕ್ಕಿದೆ. ಅವರಿಗೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದೇ ರೀತಿ ಅನೇಕರು ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಈ ಪ್ರಶಸ್ತಿ ವರುಧಿನಿಗೆ (ಸಾರಾ ಅಣ್ಣಪ್ಪ) ಸಲ್ಲಬೇಕಿತ್ತು ಎಂದು ಅನೇಕರು ಅಭಿಪ್ರಾಯ ಹೊರ ಹಾಕಿದ್ದಾರೆ. ಶ್ವೇತಾಗಿಂತ ವರುಧಿನಿ ಹೆಚ್ಚು ಸ್ಟೈಲಿಸ್ಟ್​ ಆಗಿದ್ದಾರೆ. ಈ ಕಾರಣಕ್ಕೆ ವರುಧಿನ ಅವರು ಇದಕ್ಕೆ ಅರ್ಹರಾಗಿದ್ದರು ಎನ್ನುವ ಅಭಿಪ್ರಾಯ ಬಂದಿದೆ.

ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದರ ಜತೆಗೆ ವರ್ಷಕ್ಕೆ ಒಂದು ಬಾರಿ ಧಾರಾವಾಹಿ ಕಲಾವಿದರನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಕಲರ್ಸ್​ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್​ನೊಂದಿಗೆ ವೀಕ್ಷಕರ ಎದುರು ಬಂದಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಇಟ್ಟುಕೊಂಡು ವಿವಿಧ ರೀತಿಯ ಅವಾರ್ಡ್​ ನೀಡಲಾಗಿದೆ.

ಇದನ್ನೂ ಓದಿ: ಕನ್ನಡತಿಯಲ್ಲಿ ಹರ್ಷನ ಪ್ರಪೋಸ್​ ಭುವಿ ಒಪ್ಪಿಕೊಳ್ಳೋದು ಡೌಟು? ಇಲ್ಲಿದೆ ಕಾರಣ

ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

Follow us on

Related Stories

Most Read Stories

Click on your DTH Provider to Add TV9 Kannada