ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

ಕನ್ನಡತಿ ಧಾರಾವಾಹಿ ನಿತ್ಯ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಹರ್ಷ (ಕಿರಣ್​)​ ಮತ್ತು ಭುವಿ (ರಂಜನಿ) ನಡುವಿನ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ.

ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​
ರಂಜನಿ-ಕಿರಣ್​ ರಾಜ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 18, 2021 | 1:52 PM

ಕಿರಣ್​ ರಾಜ್​ ಹಾಗೂ ರಂಜನಿ ರಾಘವನ್​ ‘ಕನ್ನಡತಿ’ ಧಾರಾವಾಹಿ ಮೂಲಕ ಹೆಚ್ಚು ಮನೆ ಮಾತಾಗಿದ್ದಾರೆ. ಅವರು ನಿರ್ವಹಿಸುತ್ತಿರುವ ಹರ್ಷ ಮತ್ತು ಭುವಿ ಪಾತ್ರ ಜನರಿಗೆ ಹೆಚ್ಚು ಇಷ್ಟವಾಗಿದೆ. ಈ ಧಾರಾವಾಹಿ ಜೋಡಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಶೇಷ ಎಂದರೆ, ಇಬ್ಬರಿಗೂ ‘ಅನುಬಂಧ’ ಅವಾರ್ಡ್​ ಸಿಕ್ಕಿದೆ. ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ಅದ್ದೂರಿಯಾಗಿ ‘ಅನುಬಂಧ’ ಅವಾರ್ಡ್ಸ್​ ಕಾರ್ಯಕ್ರಮ ನಡೆಸಿದೆ. ಅಕ್ಟೋಬರ್​ 15,16 ಮತ್ತು 17ರಂದು ಈ ಕಾರ್ಯಕ್ರಮ ಕಲರ್ಸ್​ನಲ್ಲಿ ಪ್ರಸಾರವಾಗಿದೆ. ಧಾರಾವಾಹಿ ಕಲಾವಿದರು ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ನಾನಾ ರೀತಿಯ ಅವಾರ್ಡ್​ ಸಿಕ್ಕಿದೆ.

ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ನಾಯಕ, ಜನ ಮೆಚ್ಚಿದ ಜೋಡಿ, ಜನ ಮೆಚ್ಚಿದ ಯೂತ್​ ಐಕಾನ್​ ಸೇರಿ ಸಾಕಷ್ಟು ಅವಾರ್ಡ್​ಗಳನ್ನು ನೀಡಲಾಗುತ್ತದೆ. ಇದಕ್ಕೆ ವೀಕ್ಷಕರು ವೋಟ್​ ಮಾಡಬೇಕು. ಯಾರು ಹೆಚ್ಚು ವೋಟ್​ ಪಡೆಯುತ್ತಾರೋ ಅವರು ಈ ಪ್ರಶಸ್ತಿ​ಗೆ ಭಾಜನರಾಗುತ್ತಾರೆ. ಅದೇ ರೀತಿ ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ನಾಯಕ ಪ್ರಶಸ್ತಿ ಅನುಕ್ರಮವಾಗಿ ರಂಜನಿ ರಾಘವನ್​ ಹಾಗೂ ಕಿರಣ್​ ರಾಜ್​ಗೆ ಸಿಕ್ಕಿದೆ.

ಕನ್ನಡತಿ ಧಾರಾವಾಹಿ ನಿತ್ಯ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಹರ್ಷ (ಕಿರಣ್​)​ ಮತ್ತು ಭುವಿ (ರಂಜನಿ) ನಡುವಿನ ಆಪ್ತತೆ ದಿನ ಕಳೆದಂತೆ ಹೆಚ್ಚುತ್ತಿದೆ. ಭುವಿಗೆ ಪ್ರಪೋಸ್​ ಮಾಡಬೇಕು ಎಂದು ಹರ್ಷ ಸಿದ್ಧತೆ ಮಾಡಿಕೊಂಡಿದ್ದಾನೆ. ಹೀಗಾಗಿ ಧಾರಾವಾಹಿ ವೀಕ್ಷಕರ ಆಸಕ್ತಿ ಕೆರಳಿಸುತ್ತಿದೆ. ಇನ್ನು ಕಿರಣ್​ ರಾಜ್​ ಹಾಗೂ ರಂಜನಿ ರಾಘವನ್​ ಅವರ ನ್ಯಾಚುರಲ್​ ಆ್ಯಕ್ಟಿಂಗ್​ ಎಲ್ಲರಿಗೂ ಇಷ್ಟವಾಗುತ್ತಿದೆ.

‘ನಾನು ಕೊನೆಯ​ ಸೀಟ್​ನಲ್ಲಿ ಕೂರುತ್ತಿದ್ದೆ. ಆಗ ಸ್ಟೇಜ್​ ತುಂಬಾ ದೊಡ್ಡದಾಗಿ ಕಾಣುತ್ತಿತ್ತು. ಈಗ ಸ್ಟೇಜ್​ ಮೇಲೆ ನಿಂತು ನೋಡಿದಾಗ, ಆ ಕುರ್ಚಿ ಚಿಕ್ಕದಾಗಿ ಕಾಣುತ್ತಾ ಇದೆ. ಆದರೆ, ಈ ಪ್ರಯಾಣಕ್ಕೆ ಸಾಕಷ್ಟು ಶ್ರಮ ಬೇಕು. ಜೀವನ ತುಂಬಾನೇ ಅನ್​ಪ್ರಿಡಿಕ್ಟ್​ ಆಗಿದೆ . ಆದರೆ, ಏನಾದ್ರೂ ಮಾಡ್ತೀನಿ ಎಂದರೆ ಆ ಧೈರ್ಯಕ್ಕೆ ನೀವೇ ಕಾರಣ’ ಎಂದರು ಹರ್ಷ.

ಇದನ್ನೂ ಓದಿ: ಅವಮಾನ ಮಾಡಿದವರಿಗೆ ಕಿಚ್ಚ ಸುದೀಪ್​ ಎದುರೇ ಉತ್ತರಿಸಿದ ‘ಕನ್ನಡತಿ’ ಕಿರಣ್​ ರಾಜ್​

ಅರವಿಂದ್​ಗೆ ಸಿಕ್ತು ಯೂತ್​ ಐಕಾನ್​ ಅವಾರ್ಡ್​​; ಸಂತಸ ಪಟ್ಟ ದಿವ್ಯಾ ಉರುಡುಗ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು