AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bappi Lahiri: ಮಗನಿಗೆ ಸೂಟ್​ಕೇಸ್ ಎಂದು ಹೆಸರಿಡಲು ಯೋಚಿಸಿದ್ದ ಖ್ಯಾತ ಗಾಯಕ; ಏನಿದು ಸಮಾಚಾರ?

Salman Khan: ಬಿಗ್ ಬಾಸ್ 15ರಲ್ಲಿ ಖ್ಯಾತ ಹಿರಿಯ ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಅವರು ಹಲವು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Bappi Lahiri: ಮಗನಿಗೆ ಸೂಟ್​ಕೇಸ್ ಎಂದು ಹೆಸರಿಡಲು ಯೋಚಿಸಿದ್ದ ಖ್ಯಾತ ಗಾಯಕ; ಏನಿದು ಸಮಾಚಾರ?
ಬಿಗ್​ ಬಾಸ್ 15ರಲ್ಲಿ ಬಪ್ಪಿ ಲಹಿರಿ ಹಾಗೂ ಅವರ ಮೊಮ್ಮಗ ಸ್ವಸ್ತಿಕ್ ಲಹಿರಿ
TV9 Web
| Updated By: shivaprasad.hs|

Updated on:Oct 17, 2021 | 3:45 PM

Share

Big Boss 15: ಬಪ್ಪಿ ಲಹಿರಿ (Bappi Lahiri) ಬಾಲಿವುಡ್ ಹಾಗೂ ಬೆಂಗಾಳಿ‌ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು. ಕನ್ನಡದ ಕೆಲವು ಚಿತ್ರಗಳಲ್ಲೂ ಅವರು ಹಾಡಿದ್ದಾರೆ. ಇದೀಗ ಅವರು ಮೊತ್ತಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆ ಹತ್ತಿದ್ದಾರೆ. ಸಲ್ಮಾನ್‌ಖಾನ್ ನಡೆಸಿಕೊಡುವ ಬಿಗ್ ಬಾಸ್ 15ರ (Big Boss 15) ವೇದಿಕೆಯಲ್ಲಿ ಅವರು ತಮ್ಮ ಮೊಮ್ಮಗ ಸ್ವಸ್ತಿಕ್​(Swasthik Lahiri)ಯ ನೂತನ ಆಲ್ಬಂ ‘ಬಚ್ಚಾ ಪಾರ್ಟಿ’ಯ (Bachcha Party) ಪ್ರಚಾರದ ಉದ್ದೇಶದಿಂದ ಭಾಗವಹಿಸಿದ್ದಾರೆ. ಅಲ್ಲಿ ತಮ್ಮ ಬದುಕಿನ‌ ಕುರಿತ ಹಲವು ಅಚ್ಚರಿಯ ಮಾಹಿತಿಗಳನ್ನು‌ ಹಂಚಿಕೊಂಡಿರುವ ಅವರು, ತಮ್ಮ ಪುತ್ರನ ಹೆಸರಿನ ಕುರಿತು ಮಾತನಾಡುತ್ತಾ ತಮಾಷೆ ಮಾಡಿದ್ದಾರೆ.‌ ಇದು ಸಲ್ಮಾನ್ ಸೇರಿದಂತೆ ಎಲ್ಲರಿಗೂ ವಿಪರೀತ‌ ನಗು ತರಿಸಿದೆ. ಅಷ್ಟಕ್ಕೂ ಬಪ್ಪಿ ಲಹಿರಿ ಹೇಳಿದ್ದೇನು? ಮುಂದೆ ಓದಿ.

ಬಪ್ಪಿ ಲಹಿರಿ ಬಿಗ್ ಬಾಸ್ ವೇದಿಕೆ ಪ್ರವೇಶಿಸುತ್ತಿದ್ದಂತೆಯೇ ಸಲ್ಮಾನ್ ಅವರನ್ನು ಸ್ವಾಗತಿಸಿದರು. ”ಬಿಗ್ ಬಾಸ್ ಗೆ ಬಪ್ಪಿ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ಎಲ್ಲರಿಗೂ ತಿಳಿದಿರದ ಒಂದು ಸಂಗತಿಯೆಂದರೆ, ಬಪ್ಪಿ ಲಹರಿಯವರ ನಿಜವಾದ ಹೆಸರು ಅಲೋಕೇಶ್” ಎಂದು ಸಲ್ಮಾನ್ ನುಡಿದಿದ್ದಾರೆ.‌‌ ಇದು ವೇದಿಕೆಯಲ್ಲಿದ್ದವರಿಗೆ ಹಾಗೂ ವೀಕ್ಷಕರ ಅಚ್ಚರಿಗೆ ಕಾರಣವಾಗಿದೆ.

ಸಲ್ಮಾನ್ ಮಾತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಬಪ್ಪಿ, “ನನ್ನ ಪುತ್ರನ‌ ಹೆಸರು ಅರುಣೇಶ್. ಆತನ‌ ನಂತರ ಯಾರಾದರೂ ಹುಟ್ಟಿದ್ದರೆ ಅವನು ಸೂಟ್ ಕೇಸ್” ಎಂದು ನಕ್ಕಿದ್ದಾರೆ. ಬಪ್ಪಿಯವರ ಪ್ರಾಸದಿಂದ ಕೂಡಿದ ತಮಾಷೆಯ ಮಾತಿಗೆ ಸಲ್ಮಾನ್ ಸೇರಿದಂತೆ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಬಪ್ಪಿ ತಮ್ಮ ಮೊಮ್ಮಗ ಸ್ವಸ್ತಿಕ್​ಗೆ ತಮಾಷೆಯಾಗಿ ಹಾಗೆ ಹೇಳಿದ್ದಾರೆ ಎಂದೂ ವೀಕ್ಷಕರು ವ್ಯಾಖ್ಯಾನಿಸುತ್ತಿದ್ದಾರೆ. ಬಪ್ಪಿ ಲಹಿರಿ ಈ ಮಾತಿನ ನಂತರ ಸಲ್ಮಾನ್, ಸ್ವಸ್ತಿಕ್ ಲಹಿರಿಯನ್ನು ಸ್ವಾಗತಿಸಿದ್ದಾರೆ. ಸ್ವಸ್ತಿಕ್, ಬಪ್ಪಿಯವರ ಪುತ್ರಿ ರೇಮಾ ಲಹಿರಿಯ ಮಗ.

ಸ್ವಸ್ತಿಕ್ ನೂತನ ಹಾಡಿನ ಕುರಿತು ಇತ್ತೀಚೆಗೆ ಪಿಟಿಐನೊಂದಿಗೆ ಮಾತಬಾಡುತ್ತಾ ಬಪ್ಪಿ ಲಹಿರಿ, ಮೆಚ್ಚುಗೆ ಸೂಚಿಸಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸುತ್ತಿರುವುದು ಸಂತಸ ತಂದಿದೆ ಎಂದು ಅವರು ನುಡಿದಿದ್ದರು. ವಿಶೇಷವೆಂದರೆ ರೇಗೋ (ಸ್ವಸ್ತಿಕ್ ಲಹಿರಿ) ತಾಯಿ ರೇಮಾ ಕೂಡ 1987ರಲ್ಲಿ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಆಲ್ಬಂ ಸಾಂಗ್ ತಯಾರಿಸಿದ್ದರು. ಅದನ್ನೂ ಬಪ್ಪಿ ಲಹಿರಿ ಸ್ಮರಿಸಿಕೊಂಡಿದ್ದಾರೆ.

ಬಪ್ಪಿ ಲಹಿರಿ ಕಾರ್ಯಕ್ರಮದ ಕುರಿತು ವಾಹಿನಿ ಹಂಚಿಕೊಂಡಿರುವ ಪ್ರೋಮೋ ಇಲ್ಲಿದೆ:

View this post on Instagram

A post shared by ColorsTV (@colorstv)

ಬಪ್ಪಿ ಲಹರಿ ಡಿಸ್ಕೋ ಡಾನ್ಸರ್, ರಾತ್ ಬಾಕಿ, ಬಂಬಾಯ್ ಸೇ ಆಯಾ ಮೇರಾ ದೋಸ್ತ್ ಸೇರಿದಂತೆ ಹಲವಾರು ಹಿಟ್ ಗಳನ್ನು ನೀಡಿದ್ದಾರೆ. ಅವರ ಸಂಗೀತ‌ ನಿರ್ದೇಶನದ ಹಾಡುಗಳನ್ನು ಈಗಲೂ ಹೊಸ ಚಿತ್ರಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ:

ಅರವಿಂದ್​ಗೆ ಸಿಕ್ತು ಯೂತ್​ ಐಕಾನ್​ ಅವಾರ್ಡ್​​; ಸಂತಸ ಪಟ್ಟ ದಿವ್ಯಾ ಉರುಡುಗ

ಸೈನಿಕರ ಬಗ್ಗೆ ಅಕ್ಷಯ್​ ಕುಮಾರ್​ ಹೊಸ ಸಿನಿಮಾ; ಪೋಸ್ಟರ್​ನಲ್ಲಿ ತಪ್ಪು ಕಂಡುಹಿಡಿದ ಮಾಜಿ ಸೇನಾಧಿಕಾರಿ

Published On - 3:35 pm, Sun, 17 October 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ