ಸೈನಿಕರ ಬಗ್ಗೆ ಅಕ್ಷಯ್​ ಕುಮಾರ್​ ಹೊಸ ಸಿನಿಮಾ; ಪೋಸ್ಟರ್​ನಲ್ಲಿ ತಪ್ಪು ಕಂಡುಹಿಡಿದ ಮಾಜಿ ಸೇನಾಧಿಕಾರಿ

ಸೈನಿಕರ ಬಗ್ಗೆ ಅಕ್ಷಯ್​ ಕುಮಾರ್​ ಹೊಸ ಸಿನಿಮಾ; ಪೋಸ್ಟರ್​ನಲ್ಲಿ ತಪ್ಪು ಕಂಡುಹಿಡಿದ ಮಾಜಿ ಸೇನಾಧಿಕಾರಿ
‘ಗೋರ್ಕಾ’ ಚಿತ್ರದ ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​

ಅಕ್ಷಯ್​ ಕುಮಾರ್​ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಪೋಸ್ಟರ್​ನಲ್ಲಿ ಒಂದು ತಪ್ಪು ಕಾಣಿಸಿದೆ. ಅದನ್ನು ಮಾಜಿ ಸೇನಾಧಿಕಾರಿಯೊಬ್ಬರು ಗುರುತಿಸಿದ್ದಾರೆ.

TV9kannada Web Team

| Edited By: Madan Kumar

Oct 17, 2021 | 1:59 PM

ತುಂಬ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುವವರು ನಟ ಅಕ್ಷಯ್​ ಕುಮಾರ್​. ಸದ್ಯ ಅವರ ಕೈಯಲ್ಲಿ ರಕ್ಷಾ ಬಂಧನ್​, ಬಚ್ಚನ್​ ಪಾಂಡೆ, ರಾಮ್​ ಸೇತು ಮುಂತಾದ ಸಿನಿಮಾಗಳಿವೆ. ಅವುಗಳ ಜೊತೆಗೆ ಇನ್ನೊಂದು ಹೊಸ ಚಿತ್ರವನ್ನು ಅವರು ಇತ್ತೀಚೆಗೆ ಘೋಷಿಸಿದರು. ‘ಗೋರ್ಕಾ’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಅಲ್ಲದೇ ಫಸ್ಟ್​ಲುಕ್​ ಕೂಡ ಅನಾವರಣ ಆಗಿದೆ. ಸೈನಿಕನ ಗೆಟಪ್​ನಲ್ಲಿ ಅಕ್ಷಯ್​ ಕುಮಾರ್​ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ಆದರೆ ‘ಗೋರ್ಕಾ’ ಚಿತ್ರತಂಡ ಹಂಚಿಕೊಂಡ ಪೋಸ್ಟರ್​ನಲ್ಲಿ ಒಂದು ತಪ್ಪು ಕಾಣಿಸಿದೆ. ಅದನ್ನು ಮಾಜಿ ಸೇನಾಧಿಕಾರಿಯೊಬ್ಬರು ಕಂಡುಹಿಡಿದಿದ್ದಾರೆ.

ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ಅವರು ಗೋರ್ಕಾ ರೆಜಿಮೆಂಟ್​ ಸೈನಿಕನಾಗಿ ನಟಿಸಲಿದ್ದಾರೆ. ಗೋರ್ಕಾ ಸೈನಿಕರು ತಮ್ಮ ಜೊತೆ ಕುಕ್ರಿ ಎಂಬ ಚಾಕು ರೀತಿಯ ಆಯುಧವನ್ನು ಇಟ್ಟುಕೊಂಡಿರುತ್ತಾರೆ. ‘ಗೋರ್ಕಾ’ ಸಿನಿಮಾದ ಪೋಸ್ಟರ್​ನಲ್ಲೂ ಅದನ್ನು ತೋರಿಸಲಾಗಿದೆ. ಆದರೆ ಅಕ್ಷಯ್​ ಕುಮಾರ್​ ಹಿಡಿದುಕೊಂಡಿರುವುದು ಸರಿಯಾದ ಕುಕ್ರಿ ಅಲ್ಲ ಎಂದು ಮಾಜಿ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿದ್ದು, ಸರಿಯಾದ ಕುಕ್ರಿ ಯಾವುದು ಮತ್ತು ಅದು ಹೇಗಿರುತ್ತದೆ ಎಂಬುದನ್ನು ಚಿತ್ರ ಸಮೇತ ವಿವರಿಸಿದ್ದಾರೆ.

‘ನೀವು ಈ ಸಿನಿಮಾ ಮಾಡುತ್ತಿರುವುದಕ್ಕೆ ಮಾಜಿ ಗೋರ್ಕಾ ಸೇನಾಧಿಕಾರಿಯಾದ ನಾನು ಧನ್ಯವಾದ ತಿಳಿಸುತ್ತೇನೆ. ಆದರೆ ವಿವರಗಳು ತುಂಬ ಮುಖ್ಯವಾಗುತ್ತವೆ. ದಯವಿಟ್ಟು ಸರಿಯಾದ ಕುಕ್ರಿ ತೆಗೆದುಕೊಳ್ಳಿ’ ಎಂದು ಮಾಜಿ ಸೇನಾಧಿಕಾರಿ ಟ್ವೀಟ್​ ಮಾಡಿದ್ದಾರೆ. ಅದಕ್ಕೆ ಅಕ್ಷಯ್​ ಕುಮಾರ್​ ಪ್ರತಿಕ್ರಿಯಿಸಿದ್ದಾರೆ. ‘ಇದನ್ನು ಕಂಡುಹಿಡಿದಿದ್ದಕ್ಕೆ ನಿಮಗೆ ಧನ್ಯವಾದಗಳು. ಚಿತ್ರೀಕರಣ ಮಾಡುವಾಗ ನಾವು ಹೆಚ್ಚು ಗಮನ ಹರಿಸುತ್ತೇವೆ. ಈ ಚಿತ್ರ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ನೈಜತೆಗೆ ಹತ್ತಿರ ಆಗಿಸುವಂತಹ ಯಾವುದೇ ಸಲಹೆಯನ್ನೂ ಸ್ವೀಕರಿಸಲಾಗುವುದು’ ಎಂದು ಅಕ್ಷಯ್​ ಕುಮಾರ್ ಉತ್ತರಿಸಿದ್ದಾರೆ.

ಈ ಸಿನಿಮಾದಲ್ಲಿ ವೀರ ಯೋಧ ಇಯನ್​ ಕಾರ್ಡೋಸೋ ಅವರ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡುತ್ತಿದ್ದಾರೆ. 1962, 1965 ಮತ್ತು 1971ರ ಯುದ್ಧದಲ್ಲಿ ಇಯನ್​ ಕಾರ್ಡೋಸೋ ಹೇಗೆ ಹೋರಾಡಿದರು ಎಂಬುದನ್ನು ಈ ಸಿನಿಮಾ ವಿವರಿಸಲಿದೆ. ಸಂಜಯ್​ ಪುರಾಣ್​ ಸಿಂಗ್​ ಚೌಹಾಣ್​ ಅವರು ‘ಗೋರ್ಕಾ’ ಚಿತ್ರಕ್ಕೆ ನಿರ್ದೇಶನ ಮಾಡಿಲಿದ್ದಾರೆ.

ಇದನ್ನೂ ಓದಿ:

ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?

ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?

Follow us on

Related Stories

Most Read Stories

Click on your DTH Provider to Add TV9 Kannada