ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?

ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?
ಆರವ್ ಕುಮಾರ್, ಟ್ವಿಂಕಲ್ ಖನ್ನಾ, ಅಕ್ಷಯ್ ಕುಮಾರ್

ಆರ್ಯನ್​ ಖಾನ್​ ಬಂಧನದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದೆ. ಶಾರುಖ್​ ಪುತ್ರ ಆರ್ಯನ್ ಮತ್ತು ಅಕ್ಷಯ್​ ಕುಮಾರ್​ ಪುತ್ರ ಆರವ್ ಕುಮಾರ್​ ನಡುವೆ ಜನರು ಹೋಲಿಕೆ ಮಾಡುತ್ತಿದ್ದಾರೆ.

TV9kannada Web Team

| Edited By: Madan Kumar

Oct 04, 2021 | 9:46 AM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರು ಡ್ರಗ್ಸ್​ ಪಾರ್ಟಿ ಮಾಡುವಾಗ ಸಿಕ್ಕಿಬಿದ್ದಿರುವುದು ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದೆ. ಇತರೆ ಸೆಲೆಬ್ರಿಟಿಗಳ ಮಕ್ಕಳ ಎಲ್ಲಿ, ಏನು ಮಾಡುತ್ತಾರೆ ಎಂಬ ಬಗ್ಗೆ ಈಗ ಗುಮಾನಿ ಮೂಡುವಂತಾಗಿದೆ.​ ಈ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಮತ್ತು ಟ್ವಿಂಕಲ್​ ಖನ್ನಾ ದಂಪತಿಯ ಮಗನ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಯಾಕೆಂದರೆ, ಜನರು ಪ್ರಶ್ನೆ ಮಾಡುವುದಕ್ಕಿಂತ ಮುನ್ನವೇ ಟ್ವಿಂಕಲ್​ ಖನ್ನಾ ಈ ಕುರಿತು ಮಾಹಿತಿ ನೀಡಿದ್ದಾರೆ. ಮಗನ ಫೋಟೋವನ್ನು ಹಂಚಿಕೊಂಡಿರುವ ಅವರು, ಸೂಚ್ಯವಾಗಿ ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ. ಆ ಫೋಟೋ ಈಗ ವೈರಲ್​ ಆಗುತ್ತಿದೆ. ಟ್ವಿಂಕಲ್ ಖನ್ನಾ ಅವರ ಬುದ್ಧಿವಂತಿಕೆಗೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎನ್​ಸಿಬಿ ಅಧಿಕಾರಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂಬ ಸುದ್ದಿ ಭಾನುವಾರ (ಅ.3) ಬೆಳಗ್ಗೆ ಎಲ್ಲೆಲ್ಲೂ ಹಬ್ಬಿತು. ಆ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಪುತ್ರ ಆರವ್ ಕುಮಾರ್​​ ಲಂಡನ್​ನಲ್ಲಿ ಇದ್ದರು. ಆ ಕುರಿತು ಟ್ವಿಂಕಲ್​ ಖನ್ನಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ಫೋಟೋ ಪೋಸ್ಟ್​ ಮಾಡಿದ್ದಾರೆ. ‘ಭಾನುವಾರ ಬೆಳಗ್ಗೆ ತುಂಬಾ ಸ್ಪೆಷಲ್​ ಆಗಿತ್ತು. ಅವನ ಪ್ರೀತಿಯ ಕ್ಯಾಂಪಸ್​ನಲ್ಲಿ ಅವನನ್ನು ಭೇಟಿ ಮಾಡಲು ಸಾಧ್ಯವಾಯ್ತು. ಇಬ್ಬರೂ ಜೊತೆಯಾಗಿ ತಿಂಡಿ ತಿಂದೆವು’ ಎಂದು ಟ್ವಿಂಕಲ್ ಖನ್ನಾ ಕ್ಯಾಪ್ಷನ್​ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ಶಾರುಖ್​ ಪುತ್ರ ಆರೆಸ್ಟ್​ ಆಗುವುದಕ್ಕೂ, ಇತ್ತ ತಮ್ಮ ಪುತ್ರನ ಫೋಟೋವನ್ನು ಟ್ವಿಂಕಲ್​ ಖನ್ನಾ ಪೋಸ್ಟ್​ ಮಾಡುವುದಕ್ಕೂ ಏನಾದರೂ ಲಿಂಕ್​ ಇದೆಯೇ? ಇದು ಕಾಕತಾಳೀಯವೇ ಇರಬಹುದು. ಆದರೆ ಇಂಥ ಸೂಕ್ತ ಸಂದರ್ಭದಲ್ಲಿ ಮಗನ ಫೋಟೋ ಅಪ್​ಲೋಡ್​ ಮಾಡಿದ್ದಕ್ಕೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ. ತಮ್ಮ ಮಗ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ ಎಂಬಿತ್ಯಾದಿ ಮಾಹಿತಿಯನ್ನು ಈ ಫೋಟೋ ಮೂಲಕ ಟ್ವಿಂಕಲ್ ಖನ್ನಾ ಹಂಚಿಕೊಂಡಂತಾಗಿದೆ.

ಇನ್ನು, ಸೋಶಿಯಿಲ್​ ಮೀಡಿಯಾದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದೆ. ಶಾರುಖ್​ ಪುತ್ರ ಆರ್ಯನ್ ಮತ್ತು ಆಕ್ಷಯ್​ ಕುಮಾರ್​ ಪುತ್ರ ಆರವ್​ ನಡುವೆ ಜನರು ಹೋಲಿಕೆ ಮಾಡುತ್ತಿದ್ದಾರೆ. ಸಭ್ಯವಾಗಿ ಬೆಳೆಸಿದ್ದರಿಂದಲೇ ಆರವ್​ ಒಳ್ಳೆಯ ಹಾದಿ ಹಿಡಿದಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. 19ರ ಪ್ರಾಯ ಆರವ್​ ಸದ್ಯ ಲಂಡನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

Follow us on

Related Stories

Most Read Stories

Click on your DTH Provider to Add TV9 Kannada