ಶಾರುಖ್ ಪುತ್ರ ಆರ್ಯನ್ ಲೆನ್ಸ್ ಬಾಕ್ಸ್ನಲ್ಲಿ ಇತ್ತು ಡ್ರಗ್ಸ್, ಹುಡುಗಿಯರು ಸ್ಯಾನಿಟರಿ ಪ್ಯಾಡ್ ಮಧ್ಯದಲ್ಲಿ ಇಟ್ಟುಕೊಂಡಿದ್ದರು: ಎನ್ಸಿಬಿ
ಮುಂಬೈ ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಎನ್ಸಿಬಿ ಆರ್ಯನ್ ಖಾನ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದೆ. ಈ ಎಂಟು ಮಂದಿಯಲ್ಲಿ ಆರ್ಯನ್ ಖಾನ್ ಸೇರಿ ಇಬ್ಬರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿತ್ತು.
ಐಷಾರಾಮಿ ಹಡಗಿನಲ್ಲಿ ನಡೆಸಲಾಗಿದ್ದ ಐಷಾರಾಮಿ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರೂಖ್ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಸದ್ಯ ಮಾದಕದ್ರವ್ಯ ನಿಯಂತ್ರಣ ಮಂಡಳಿ (NCB)ಯ ವಶದಲ್ಲಿದ್ದಾರೆ. ಪುತ್ರನ ಬಂಧನವಾಗುತ್ತಿದ್ದಂತೆ ಶಾರುಖ್ ಖಾನ್ ತಮ್ಮ ಪಠಾಣ್ ಚಿತ್ರದ ಶೂಟಿಂಗ್ ಕೂಡ ನಿಲ್ಲಿಸಿ, ವಾಪಸ್ ಮನೆಗೆ ಬಂದಿದ್ದಾರೆ.ಈ ಮಧ್ಯೆ ಆರ್ಯನ್ಖಾನ್ ಪರ ವಕೀಲ ಸತೀಶ್ ಮನಶಿಂಧೆ, ಪಾರ್ಟಿಯಲ್ಲಿ ಭಾಗವಹಿಸಿದ್ದ ಆರ್ಯನ್ ಬಳಿ ಮಾದಕವಸ್ತುಗಳು ಏನೂ ಸಿಗಲಿಲ್ಲ. ಅವರು ಹಡಗನ್ನು ಪ್ರವೇಶಿಸುವಾಗ ಸ್ಕ್ರೀನಿಂಗ್ ಮಾಡಲಾಗಿತ್ತು. ಆದರೆ ಏನೂ ಪತ್ತೆಯಾಗಿರಲಿಲ್ಲ ಎಂದು ಕೋರ್ಟ್ಗೆ ಹೇಳಿದ್ದರು. ಆದರೆ ಈಗ ಆರ್ಯನ್ರ ಕಣ್ಣಿನ ಲೆನ್ಸ್ ಹಾಕುವ ಬಾಕ್ಸ್ (ಲೆನ್ಸ್ ಕೇಸ್)ನಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಹೇಳಿದ್ದಾಗಿ ವರದಿಯಾಗಿದೆ.
ಡ್ರಗ್ಸ್ ಪಾರ್ಟಿಯ ಮೇಲೆ ಎನ್ಸಿಬಿ ದಾಳಿಯಾದ ಸಂದರ್ಭದಲ್ಲಿ ಆರ್ಯನ್ ಖಾನ್ ಸೇರಿ ಇನ್ನಿತರ ಹುಡುಗಿಯರನ್ನೂ ಬಂಧಿಸಲಾಗಿದೆ. ಇವರಲ್ಲಿ ಆರ್ಯನ್ ಖಾನ್ ಲೆನ್ಸ್ ಕೇಸ್ನಲ್ಲಿ ಮಾದಕ ದ್ರವ್ಯ ಇದ್ದರೆ, ಬೇರೆ ಕೆಲವು ಮಹಿಳಾ ಆರೋಪಿಗಳ ಸ್ಯಾನಿಟರಿ ಪ್ಯಾಡ್, ಮೆಡಿಕಲ್ ಬಾಕ್ಸ್ನಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಇದೀಗ ಸಿಕ್ಕಿಬಿದ್ದವರು ಯಾರೂ ತಮ್ಮ ಬ್ಯಾಗ್ ಅಥವಾ ಜೇಬು ಮತ್ತಿತರ ಕಡೆ ಡ್ರಗ್ಸ್ ಇಟ್ಟುಕೊಂಡಿರಲಿಲ್ಲ ಎಂದೂ ಹೇಳಿದೆ.
ಇನ್ನು ಆರ್ಯನ್ ಖಾನ್ಗೆ ಮಾದಕ ದ್ರವ್ಯದ ನಂಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ವಾಟ್ಸ್ಆ್ಯಪ್ ಚಾಟ್ಗಳೂ ಸಿಕ್ಕಿವೆ ಎನ್ನಲಾಗಿದೆ. ಆರ್ಯನ್ ಖಾನ್ ಮತ್ತು ಅವರ ಸ್ನೇಹಿತರು ಡ್ರಗ್ಸ್ ಪೆಡ್ಲರ್ಗಳ ಜತೆ ಹಲವು ಬಾರಿ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡಿದ್ದು, ಅದನ್ನೆಲ್ಲ ಎನ್ಸಿಬಿ ವಶಪಡಿಸಿಕೊಂಡಿದೆ. ಇನ್ನು ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಎನ್ಸಿಬಿ ಚರಸ್, ಕೊಕೇನ್ ಮತ್ತು ಎಂಡಿಎಂಎ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ.
ಎಂಟು ಜನರ ಬಂಧನ ಮುಂಬೈ ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಎನ್ಸಿಬಿ ಆರ್ಯನ್ ಖಾನ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದೆ. ಈ ಎಂಟು ಮಂದಿಯಲ್ಲಿ ಆರ್ಯನ್ ಖಾನ್ ಸೇರಿ ಇಬ್ಬರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿತ್ತು. ಅವರೀಗ ಎನ್ಸಿಬಿ ಕಸ್ಟಡಿಯಲ್ಲಿಯೇ ಇದ್ದಾರೆ. ಇನ್ನು ಉಳಿದ ಐವರ ವೈದ್ಯಕೀಯ ತಪಾಸಣೆಯೂ ಆಗಬೇಕಿದ್ದು, ಅದಾದ ತಕ್ಷಣವನ್ನೇ ಅವರನ್ನೂ ಕೋರ್ಟ್ ಎದುರು ಹಾಜರುಪಡಿಸಲಿದೆ. ಹಾಗೇ, ಎಲ್ಲರೊಂದಿಗೂ ಮುಖಾಮುಖಿ ವಿಚಾರಣೆ ನಡೆಸಲು ಸಿದ್ಧವಾಗಿದೆ.
ಇದನ್ನೂ ಓದಿ: ಶಾರುಖ್ ಖಾನ್ಗೆ ಹೆಚ್ಚಿದ ಸಂಕಷ್ಟ; ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ ಅರೆಸ್ಟ್
‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ
Published On - 9:06 am, Mon, 4 October 21