ಆರ್ಯನ್​ ಖಾನ್​ಗೆ ಜಾಮೀನು ಅಥವಾ ಜೈಲು? ಮತ್ತೆ ಕೋರ್ಟ್​ ಮುಂದೆ ಬರಲಿರುವ ಶಾರುಖ್​ ಪುತ್ರ

ಇಂದು (ಅ.4) ಆರ್ಯನ್ ಖಾನ್​ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಅವರಿಗೆ ಜಾಮೀನು ಸಿಗಲಿದೆಯೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆಯೋ ಎಂಬ ಬಗ್ಗೆ ಕೌತುಕ ಮನೆ ಮಾಡಿದೆ.

TV9kannada Web Team

| Edited By: Madan Kumar

Oct 04, 2021 | 10:01 AM

ಐಷಾರಾಮಿ ಹಡಗಿನಲ್ಲಿ ಶನಿವಾರ ರಾತ್ರಿ (ಅ.2) ಡ್ರಗ್ಸ್​ ಪಾರ್ಟಿ ಮಾಡುತ್ತಿರುವಾಗ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಆರ್ಯನ್​ ಖಾನ್​ ಅವರನ್ನು ಭಾನುವಾರ ಸಂಜೆಯೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಒಂದು ದಿನದ ಮಟ್ಟಿಗೆ ಅವರನ್ನು ಎನ್​ಸಿಬಿ ಕಸ್ಟಡಿಗೆ ನೀಡಿ ಮುಂಬೈ ಕೋರ್ಟ್​ ಆದೇಶ ಹೊರಡಿಸಿದೆ. ಇದು ಶಾರುಖ್​ ತಲೆನೋವಿಗೆ ಕಾರಣ ಆಗಿದೆ. ಸೋಮವಾರ (ಅ.4) ಆರ್ಯನ್​ ಖಾನ್​ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಅವರಿಗೆ ಜಾಮೀನು ಸಿಗಲಿದೆಯೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆಯೋ ಎಂಬ ಬಗ್ಗೆ ಕೌತುಕ ಮನೆ ಮಾಡಿದೆ.

ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್​ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್​ನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.

ಇದನ್ನೂ ಓದಿ:

ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

Follow us on

Click on your DTH Provider to Add TV9 Kannada