‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

ತಮ್ಮ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸೇವಿಸಲಿ, ಮನಬಂದಷ್ಟು ಸಿಗರೇಟ್​ ಸೇದಲಿ, ಬೇಕಾದರೆ ಹುಡುಗಿಯರ ಹಿಂದೆಯೂ ಹೋಗಲಿ ಎಂದು ಶಾರುಖ್​ ಖಾನ್​ ಹೇಳಿರುವ ವಿಡಿಯೋ ಈಗ ವೈರಲ್​ ಆಗುತ್ತಿದೆ. ಅದನ್ನು ಕಂಡು ಜನರು ಖಾರವಾಗಿ ಟೀಕೆ ಮಾಡುತ್ತಿದ್ದಾರೆ.

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​
ಆರ್ಯನ್​ ಖಾನ್​, ಶಾರುಖ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on:Oct 04, 2021 | 9:03 AM

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2ರ ರಾತ್ರಿ ರೇವ್​ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಬಾಲಿವುಡ್​ನ ಸ್ಟಾರ್​ ನಟ ಶಾರುಖ್​ ಖಾನ್ ಪುತ್ರ ಆರ್ಯನ್​ ಖಾನ್​ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಶಾರುಖ್​ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಅಚ್ಚರಿ ಏನೆಂದರೆ, ಹಲವು ವರ್ಷಗಳ ಹಿಂದೆಯೇ ಶಾರುಖ್​ ಖಾನ್​ ಅವರು ಮಗನ ಬಗ್ಗೆ ಮಾತನಾಡಿದ್ದರು. ತಮ್ಮ ಪುತ್ರ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಬೇಕಾದರೂ ಹೋಗಲಿ ಎಂದು ಅವರು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅದು 1997ರಲ್ಲಿ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಜೊತೆಯಾಗಿ ನೀಡಿದ್ದ ಸಂದರ್ಶನ. ಅದರಲ್ಲಿ ಅವರು ತಮ್ಮ ಪುತ್ರ ಆರ್ಯನ್​ ಖಾನ್​ ಬಗ್ಗೆ ಮಾತನಾಡಿದ್ದರು. ‘ಆರ್ಯನ್​ಗೆ ನಾನು ಹೇಳಿಬಿಟ್ಟಿದ್ದೇನೆ. ಅವನು ಹುಡುಗಿಯರ ಹಿಂದೆ ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಸೇದಬಹುದು. ಡ್ರಗ್ಸ್​ ಸೇವಿಸಬಹುದು ಮತ್ತು ಸೆ*ಕ್ಸ್​ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್​ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್​ ಎಂಜಾಯ್​ ಮಾಡಲಿ’ ಎಂದು ಶಾರುಖ್​ ಹೇಳಿದ್ದರು.

ಪಕ್ಕದಲ್ಲೇ ಕುಳಿತು ಇದನ್ನೆಲ್ಲ ಕೇಳಿಸಿಕೊಂಡಿದ್ದ ಗೌರಿ ಖಾನ್​ ಕಿಸಿಕಿಸಿ ನಕ್ಕಿದ್ದರು. ಆ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ. ಅದನ್ನು ಕಂಡು ಜನರು ಖಾರವಾಗಿ ಟೀಕೆ ಮಾಡುತ್ತಿದ್ದಾರೆ. ಹೀಗೆ ಬೆಳೆಸಿದ್ದರ ಪರಿಣಾಮವಾಗಿಯೇ ಆರ್ಯನ್ ಖಾನ್​ ಇಂದು ಹಾದಿ ತಪ್ಪಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ, ಈ ಎಲ್ಲ ಮಾತುಗಳನ್ನು ಶಾರುಖ್​ ಖಾನ್​ ಅವರು ತಮಾಷೆಗೆ ಹೇಳಿರಬಹುದು. ಆದರೆ ಅದೆಲ್ಲವೂ ಇಂದು ನಿಜವಾಗಿದೆ. ಹಾಗಾಗಿ ಶಾರುಖ್​ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಈಗ ಆರ್ಯನ್​ ಖಾನ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:

ಶಾರುಖ್​ ಪತ್ನಿ ಗೌರಿ ಖಾನ್​ಗೂ ಅಂಟಿತ್ತು ಗಾಂಜಾ ಕಳಂಕ; ಏರ್​ಪೋರ್ಟ್​ನಲ್ಲಿ ನಡೆದ ಆ ಘಟನೆ ನಿಜವೇ?

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

Published On - 9:02 am, Mon, 4 October 21

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ