ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

ರೇವ್​ ಪಾರ್ಟಿಯಲ್ಲಿ ಆರ್ಯನ್​ ಖಾನ್​ ಸಿಕ್ಕಿ ಬಿದ್ದಿರುವುದರಿಂದ ಅವರ ಕುಟುಂಬಕ್ಕೆ ಇದು ಕಪ್ಪು ಚುಕ್ಕಿ ಆಗಿದೆ. ಆರ್ಯನ್​ ಮೊಬೈಲ್​ನಲ್ಲಿ ಇರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ
ಆರ್ಯನ್ ಖಾನ್
Follow us
| Updated By: ಮದನ್​ ಕುಮಾರ್​

Updated on: Oct 03, 2021 | 12:22 PM

ಬಾಲಿವುಡ್​ನ ಸ್ಟಾರ್​ ನಟ ಶಾರುಖ್​ ಖಾನ್​ಗೆ ಈಗ ಮುಜುಗರ ಉಂಟಾಗಿದೆ. ಅವರ ಪುತ್ರ ಆರ್ಯನ್​ ಖಾನ್​ ಅವರು ಡ್ರಗ್ಸ್​ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಮುಂಬೈನ ಸಮುದ್ರದಲ್ಲಿ ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಆರ್ಯನ್​ ಖಾನ್​ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರ ಮೊಬೈಲ್​ ಪರಿಶೀಲಿಸಲಾಗುತ್ತಿದೆ. ಈ ದಾಳಿಯಲ್ಲಿ ಹತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ. ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಾರುಖ್​ ಪುತ್ರನ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ.

ಆರ್ಯನ್​ ಖಾನ್​ಗೆ ನಟನಾಗುವ ಆಸಕ್ತಿ ಇಲ್ಲವಂತೆ. ಅದನ್ನು ಈ ಹಿಂದೆ ಶಾರುಖ್​ ಹೇಳಿಕೊಂಡಿದ್ದರು. ಹಾಗಂತ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದುಕೊಳ್ಳುತ್ತಾರೆ ಎಂದರ್ಥವಲ್ಲ. ನಿರ್ದೇಶನದಲ್ಲಿ ತೊಡಗಿಕೊಳ್ಳುವ ಆಸಕ್ತಿ ಅವರಿಗೆ ಇದೆ. ಲಂಡನ್​ನ ‘ಸೆವೆನ್​ ಓಕ್ಸ್​ ಹೈಸ್ಕೂಲ್​’ನಲ್ಲಿ ಆರ್ಯನ್​ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್​ ಆರ್ಟ್ಸ್​, ಸಿನಿಮ್ಯಾಟಿಕ್​ ಆರ್ಟ್ಸ್​, ಫಿಲ್ಮ್​ ಮತ್ತು ಟೆಲಿವಿಷನ್​ ಪ್ರೊಡಕ್ಷನ್​ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ.

‘ದಿ ಲಯನ್​ ಕಿಂಗ್​’ ಸಿನಿಮಾದ ಹಿಂದಿ ಅವತರಣಿಕೆಗೆ ಆರ್ಯನ್​ ಖಾನ್​ ಡಬ್ಬಿಂಗ್​ ಮಾಡಿದ್ದರು. ಅಲ್ಲದೆ ಚಿಕ್ಕ ವಯಸ್ಸಿನಲ್ಲಿದ್ದಾಗ ಕೆಲವು ಸಿನಿಮಾಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಶಾರುಖ್​ ನಟನೆಯ ‘ಕಭಿ ಅಲ್ವಿದಾ ನಾ ಕೆಹನಾ’, ‘ಕಭಿ ಖುಷಿ ಕಭಿ ಗಮ್​’ ಸಿನಿಮಾದ ಸಣ್ಣ-ಪುಟ್ಟ ದೃಶ್ಯಗಳಲ್ಲಿ ಅವರು ಬಂದುಹೋಗಿದ್ದರು. ‘ಧೂಮ್​’ ಸರಣಿಯ ಮುಂಬರುವ ಚಿತ್ರಕ್ಕೆ ಆರ್ಯನ್​ ಖಾನ್​ ಹೀರೋ ಆಗುತ್ತಾರೆ ಎಂಬ ಗಾಸಿಪ್​ ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದಿನ್ನೂ ನಿಜವಾಗಿಲ್ಲ.

ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿದ್ದಾರೆ. ಇನ್ನೋರ್ವ ಪುತ್ರ ಅಬ್​ರಾಮ್​ ಫೋಟೋಗಳೂ ಆಗಾಗ ವೈರಲ್​ ಆಗುತ್ತಿರುತ್ತವೆ. ರೇವ್​ ಪಾರ್ಟಿಯಲ್ಲಿ ಆರ್ಯನ್​ ಖಾನ್​ ಸಿಕ್ಕಿ ಬಿದ್ದಿರುವುದರಿಂದ ಅವರ ಇಡೀ ಕುಟುಂಬಕ್ಕೆ ಇದು ಕಪ್ಪು ಚುಕ್ಕಿ ಆಗಿದೆ. ಆರ್ಯನ್​ ಮೊಬೈಲ್​ನಲ್ಲಿ ಇರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಡ್ರಗ್ಸ್​ ಪಾರ್ಟಿ ಆಯೋಜಕರ ಜೊತೆ ಆರ್ಯನ್​ ಯಾವ ರೀತಿ ಸಂಪರ್ಕದಲ್ಲಿ ಇದ್ದರು? ಯಾವ ಸಂದೇಶಗಳು ರವಾನೆ ಆಗಿವೆ ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ಈವರೆಗೂ ಆರ್ಯನ್ ಮೇಲೆ ಯಾವುದೇ ಕೇಸ್​ ದಾಖಲಾಗಿಲ್ಲ. ವಶಕ್ಕೆ ಪಡೆದು ವಿಚಾರಣೆಯಷ್ಟೇ ಮಾಡಲಾಗುತ್ತಿದೆ. ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್​ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ:

ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​

ಡ್ರಗ್ಸ್​ ಪಾರ್ಟಿ: ಎನ್​ಸಿಬಿ ಬಲೆಗೆ ಬಿದ್ದ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​