ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ

ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ

TV9 Web
| Updated By: ಮದನ್​ ಕುಮಾರ್​

Updated on: Oct 03, 2021 | 4:17 PM

ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಖಾನ್​ ಗಪ್​ ಚುಪ್​ ಆಗಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ. ರೇವ್​ ಪಾರ್ಟಿಯಲ್ಲಿ ಮಗ ಸಿಕ್ಕಿಬಿದ್ದಿರುವುದರಿಂದ ಶಾರುಖ್​ ಖಾನ್​ಗೆ ತಲೆ ನೋವು ಶುರುವಾಗಿದೆ.

ಬಾಲಿವುಡ್​ನ ಕಿಂಗ್​ ಖಾನ್​ ಎನಿಸಿಕೊಂಡಿರುವ ಶಾರುಖ್​ ಖಾನ್​ ಕುಟುಂಬ ಈಗ ಮುಜುಗರಕ್ಕೆ ಒಳಗಾಗಿದೆ. ಶಾರುಖ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸುಳಿಯಲ್ಲಿ ಸಿಲುಕಿದ್ದು, ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮುಂಬೈ ಕಡಲ ತೀರಿದ ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಎನ್​ಸಿಬಿ ಪೊಲೀಸರು ಅ.2ರ ರಾತ್ರಿ ದಾಳಿ ಮಾಡಿದ್ದರು. ಈ ವೇಳೆ ಆರ್ಯನ್​ ಖಾನ್​ ಕೂಡ ಸಿಕ್ಕಿ ಬಿದ್ದಿದ್ದಾರೆ. ಅಲ್ಲಿಂದ ಅವರನ್ನು ಎನ್​ಸಿಬಿ ಕಚೇರಿಗೆ ಕರೆದುಕೊಂಡು ಬರಲಾಯಿತು. ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಖಾನ್​ ಗಪ್​ ಚುಪ್​ ಆಗಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ.

ರೇವ್​ ಪಾರ್ಟಿಯಲ್ಲಿ ಮಗ ಸಿಕ್ಕಿಬಿದ್ದಿರುವುದರಿಂದ ಶಾರುಖ್​ ಖಾನ್​ಗೆ ತಲೆ ನೋವು ಶುರುವಾಗಿದೆ. ಹಾಗಾಗಿ ಅವರು ತಮ್ಮ ‘ಪಠಾಣ್​’ ಸಿನಿಮಾದ ಶೂಟಿಂಗ್​ ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಶಾರುಖ್​ ಖಾನ್​ ವರ್ಚಸ್ಸು ಕಡಿಮೆ ಆಗಿತ್ತು. ಅವರ ಯಾವುದೇ ಸಿನಿಮಾಗಳೂ ಗೆಲ್ಲುತ್ತಿರಲಿಲ್ಲ. ಈಗ ಮಗ ಮಾಡಿದ ಎಡವಟ್ಟಿನಿಂದಾಗಿ ಅವರ ಇಮೇಜ್​ ಇನ್ನಷ್ಟು ಹಾಳಾದಂತಾಗಿದೆ. ಅಪರಾಧ ಸಾಬೀತಾದರೆ ಆರ್ಯನ್​ ಖಾನ್​ ಜೈಲು ಸೇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದ ಮಗ ಆರ್ಯನ್​​ಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಶಾರುಖ್​ ಖಾನ್​