AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಗೇಟಿಗೆ ಸಿಲುಕಿಕೊಂಡ ನಾಯಿ ಮರಿ; ಯುವಕರು ರಕ್ಷಿಸಿದ ವಿಡಿಯೋ ಇಲ್ಲಿದೆ

ಮನೆ ಗೇಟಿಗೆ ಸಿಲುಕಿಕೊಂಡ ನಾಯಿ ಮರಿ; ಯುವಕರು ರಕ್ಷಿಸಿದ ವಿಡಿಯೋ ಇಲ್ಲಿದೆ

sandhya thejappa
|

Updated on: Oct 03, 2021 | 9:36 AM

Share

ಕಬ್ಬಿಣದ ಗೇಟ್ ಕಟ್ ಮಾಡಿ ಮಳೆಮಠ ಮನೆಯವರು ಹಾಗೂ ಸ್ಥಳೀಯ ಯುವಕರು ನಾಯಿ ಮರಿಯನ್ನು ರಕ್ಷಣೆ ಮಾಡಿದ್ದಾರೆ. ತಡರಾತ್ರಿ ಎರಡು ಗಂಟೆ ಸುಮಾರಿಗೆ ನಾಯಿ ಮರಿ ಗೇಟ್​ಗೆ ಸಿಲುಕಿಕೊಂಡಿತ್ತು.

ಕೊಪ್ಪಳ ಜಿಲ್ಲೆಯ ಗಂಗವಾತಿ ನಗರದಲ್ಲಿ ಮನೆಯೊಂದರ ಗೇಟಿಗೆ ನಾಯಿ ಮರಿ ಸಿಲುಕಿಕೊಂಡು ಒದ್ದಾಡುತ್ತಿತ್ತು. ಗಂಗಾವತಿ ನಗರದ ಬಸವರಾಜ್ ಮಳೆ ಮಠ ಎಂಬುವರ ಮನೆ ಮುಂದಿನ ಗೇಟಿಗೆ ನಾಯಿ ಮರಿ ಸಿಲುಕಿಕೊಂಡು ಕೂಗುತ್ತಿತ್ತು. ತಡರಾತ್ರಿ ಮನೆಗೆ ಒಳಗೆ ಬರಲು ಯತ್ನಿಸಿದಾಗ ನಾಯಿ ಮರಿ ಗೇಟ್​ನಲ್ಲಿ ಸಿಲುಕಿಕೊಂಡಿತ್ತು. ನಾಯಿ ಮರಿ ಚೀರಾಡುವುದನ್ನು ಕಂಡ ಯುವಕರು ನಾಯಿ ಮರಿಯನ್ನ ರಕ್ಷಿಸಿದ್ದಾರೆ. ಕಬ್ಬಿಣದ ಗೇಟ್ ಕಟ್ ಮಾಡಿ ಮಳೆಮಠ ಮನೆಯವರು ಹಾಗೂ ಸ್ಥಳೀಯ ಯುವಕರು ನಾಯಿ ಮರಿಯನ್ನು ರಕ್ಷಣೆ ಮಾಡಿದ್ದಾರೆ. ತಡರಾತ್ರಿ ಎರಡು ಗಂಟೆ ಸುಮಾರಿಗೆ ನಾಯಿ ಮರಿ ಗೇಟ್​ಗೆ ಸಿಲುಕಿಕೊಂಡಿತ್ತು. ಎರಡು ಗಂಟೆ ಬಳಿಕ ಸತತ ಪ್ರಯತ್ನದಿಂದ ಯುವಕರು ನಾಯಿ ಮರಿಯನ್ನು ರಕ್ಷಿಸಿದ್ದಾರೆ.