ಶಾರುಖ್ ಪುತ್ರನ ಅರೆಸ್ಟ್ ಬೆನ್ನಲ್ಲೇ ಓಡೋಡಿ ಬಂದ ಸಲ್ಮಾನ್ ಖಾನ್; ‘ಮನ್ನತ್’ನಲ್ಲಿ ನಡೆದಿದ್ದು ಏನು?
ಶಾರುಖ್ಗೆ ಸಂಕಷ್ಟ ಎದುರಾಗಿರುವುದರಿಂದ ಗೆಳೆಯನಿಗೆ ಸಹಾಯ ಮಾಡಲು ಸಲ್ಮಾನ್ ಖಾನ್ ಆಗಮಿಸಿದ್ದಾರೆ. ಐಷಾರಾಮಿ ಕಾರಿನಲ್ಲಿ ಅವರು ‘ಮನ್ನತ್’ಗೆ ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನ ಕಡಲ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಅವರು ಸಿಕ್ಕಿ ಬಿದ್ದಿದ್ದಾರೆ. ಎನ್ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಶಾರುಖ್ ಖಾನ್ಗೆ ಟೆನ್ಷನ್ ಹೆಚ್ಚಿದೆ. ತಮ್ಮ ಸಿನಿಮಾಗಳ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡಿರುವ ಕಿಂಗ್ ಖಾನ್ ಅವರು ಮಗನ ರಕ್ಷಣೆಗಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅವರ ಸ್ನೇಹಿತ ಸಲ್ಮಾನ್ ಖಾನ್ ಕೂಡ ಈ ಸಮಯದಲ್ಲಿ ಬೆಂಬಲ ನೀಡುತ್ತಿದ್ದಾರೆ.
ಭಾನುವಾರ (ಅ.ಡ3) ಸಂಜೆಯೇ ಆರ್ಯನ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಒಂದು ದಿನದ ಮಟ್ಟಿಗೆ ಅವರನ್ನು ಎನ್ಸಿಬಿ ಕಸ್ಟಡಿಗೆ ನೀಡಿ ಮುಂಬೈ ಕೋರ್ಟ್ ಆದೇಶ ಹೊರಡಿಸಿದೆ. ಇದು ಶಾರುಖ್ ತಲೆನೋವಿಗೆ ಕಾರಣ ಆಗಿದೆ. ಭಾನುವಾರ ರಾತ್ರಿ ಅವರು ಮನೆಗೆ ಬಂದು ಮುಂದಿನ ಕ್ರಮಗಳ ಬಗ್ಗೆ ಆಲೋಚಿಸುತ್ತಿದ್ದಾರೆ. ಇದೇ ವೇಳೆ ಸಲ್ಮಾನ್ ಖಾನ್ ಕೂಡ ಶಾರುಖ್ ಖಾನ್ರ ನಿವಾಸ ‘ಮನ್ನತ್’ಗೆ ಭೇಟಿ ನೀಡಿದ್ದಾರೆ. ಐಷಾರಾಮಿ ಕಾರಿನಲ್ಲಿ ಅವರು ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಡುವೆ ಉತ್ತಮ ಬಾಂಧವ್ಯ ಇದೆ. ಪರಸ್ಪರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನೂ ನಿಭಾಯಿಸುವ ಮೂಲಕ ಒಬ್ಬರಿಗೊಬ್ಬರು ವೃತ್ತಿಜೀವನದಲ್ಲಿ ನೆರವಾಗುತ್ತಿದ್ದಾರೆ. ಈಗ ಶಾರುಖ್ಗೆ ವೈಯಕ್ತಿಕ ಜೀವನದಲ್ಲಿ ಸಂಕಷ್ಟ ಎದುರಾಗಿರುವುದರಿಂದ ಗೆಳೆಯನಿಗೆ ಸಹಾಯ ಮಾಡಲು ಸಲ್ಮಾನ್ ಖಾನ್ ಆಗಮಿಸಿದ್ದಾರೆ. ಡ್ರಗ್ಸ್ ಪಾರ್ಟಿ ಕೇಸ್ನಿಂದ ಆರ್ಯನ್ನನ್ನು ಹೇಗೆ ಹೊರತರಬೇಕು ಎಂಬ ಕಾನೂನು ಹಾದಿಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್ನಲ್ಲಿ ಹರಡಿರುವ ಡ್ರಗ್ಸ್ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.
ಇದನ್ನೂ ಓದಿ:
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ
ಡ್ರಗ್ಸ್ ಕೇಸ್: ಎನ್ಸಿಬಿ ಕಚೇರಿಯಲ್ಲಿ ಗಪ್ಚುಪ್ ಆಗಿ ಕುಳಿತ ಶಾರುಖ್ ಪುತ್ರ ಆರ್ಯನ್ ಖಾನ್; ಇಲ್ಲಿದೆ ವಿಡಿಯೋ




