ಅಪಘಾತಕ್ಕೆ ಒಳಗಾದ ನಂತರ ಮೊದಲ ಬಾರಿಗೆ ಅಭಿಮಾನಿಗಳ ಜತೆ ಮಾತನಾಡಿದ ಸಾಯಿ ಧರಮ್​ ತೇಜ್​

ಅಪಘಾತಕ್ಕೆ ಒಳಗಾದ ನಂತರ ಮೊದಲ ಬಾರಿಗೆ ಅಭಿಮಾನಿಗಳ ಜತೆ ಮಾತನಾಡಿದ ಸಾಯಿ ಧರಮ್​ ತೇಜ್​
ಸಾಯಿ ಧರಮ್​ ತೇಜ್​

ಸಾಯಿ ಧರಮ್​ ತೇಜ್​ ಅವರ ಸ್ಥಿತಿ ಈಗ ಕೊಂಚ ಚೇತರಿಕೆ ಕಂಡಿದೆ. ಇಷ್ಟು ದಿನಾ ಕೋಮದಲ್ಲಿದ್ದ ಅವರು ಚೇತರಿಸಿಕೊಂಡಿದ್ದಾರೆ. ಟ್ವಿಟರ್​ ಥಂಬ್​​ ಅಪ್​ ಮಾಡಿರುವ ಫೋಟೋವನ್ನು ಹಾಕಿದ್ದಾರೆ.

TV9kannada Web Team

| Edited By: Rajesh Duggumane

Oct 03, 2021 | 6:49 PM

ನಟ ಸಾಯಿ ಧರಮ್​ ತೇಜ್​ ಅವರು ಬೈಕ್​ ಅಪಘಾತಕ್ಕೆ ಒಳಗಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಹೈದರಾಬಾದ್​ನಲ್ಲಿ ಸೆ.10ರಂದು ಸ್ಪೋರ್ಟ್ಸ್​ ಬೈಕ್​ನಲ್ಲಿ ಚಲಿಸುತ್ತಿದ್ದ ಅವರು ಅಪಘಾತಕ್ಕೆ ಒಳಗಾದ ಬಳಿಕ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಅಭಿಮಾನಿಗಳು ಅಪ್​ಡೇಟ್​ ಕೇಳುತ್ತಿದ್ದರು. ಆ ಕುರಿತು ಈಗ ಸಾಯಿ ಧರಮ್​ ಅವರೇ ಉತ್ತರ ನೀಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಒಂದನ್ನು ಮಾಡಿದ್ದಾರೆ.

ಸಾಯಿ ಧರಮ್​ ತೇಜ್​ ಅವರ ಸ್ಥಿತಿ ಈಗ ಕೊಂಚ ಚೇತರಿಕೆ ಕಂಡಿದೆ. ಇಷ್ಟು ದಿನ ಕೋಮದಲ್ಲಿದ್ದ ಅವರು ಚೇತರಿಸಿಕೊಂಡಿದ್ದಾರೆ. ಟ್ವಿಟರ್​ ಥಂಬ್​​ ಅಪ್​ ಮಾಡಿರುವ ಫೋಟೋವನ್ನು ಹಾಕಿದ್ದಾರೆ. ‘ನನ್ನ ಮೇಲೆ ಮತ್ತು ನನ್ನ ಸಿನಿಮಾ ‘ರಿಪಬ್ಲಿಕ್’ ಮೇಲೆ ನೀವು ತೋರಿಸಿದ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಧನ್ಯವಾದ ಎಂಬುದು ಸಣ್ಣ ಪದ, ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ’ ಎಂದು ಅವರು ಬರೆದಿದ್ದಾರೆ.

ಸಾಯಿ ಧರಮ್​ ತೇಜ್​ ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಇತ್ತೀಚೆಗೆ ಅವರ ಮಾವ ಪವನ್​ ಕಲ್ಯಾಣ್​ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಸಾಯಿ ಧರಮ್​ ತೇಜ್​ ಇನ್ನೂ ಕಣ್ಣು ಬಿಟ್ಟಿಲ್ಲ. ಆತ ಇನ್ನೂ ಕೋಮಾ ಸ್ಥಿತಿಯಲ್ಲೇ ಇದ್ದಾನೆ. ಅವನಿಗೆ ಆದ ಆ್ಯಕ್ಸಿಡೆಂಟ್​ ನಿಜಕ್ಕೂ ದುರದೃಷ್ಟಕರ. ಅವನು ಅತಿ ವೇಗದಲ್ಲಿ ಬೈಕ್​ ಓಡಿಸುತ್ತಿದ್ದ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ಆದರೆ ಅದು ನಿಜವಲ್ಲ. ಸಾಯಿ ಧರಮ್​ ತೇಜ್​ ಕೇವಲ 45 ಕಿ.ಮೀ. ವೇಗದಲ್ಲಿ ಬೈಕ್​ ಓಡಿಸುತ್ತಿದ್ದ. ಸಿಸಿಟಿವಿ ದೃಶ್ಯದಲ್ಲೂ ಅದು ಗೊತ್ತಾಗುತ್ತದೆ. ಸಾಯಿ ಧರಮ್​ ತೇಜ್​ ಬಗ್ಗೆ ಮಾಧ್ಯಮಗಳು ಮಾತನಾಡಬೇಕಿಲ್ಲ. ರಾಜಕೀಯದಲ್ಲಿನ ಅಪರಾಧಗಳ ಬಗ್ಗೆ ಮಾತನಾಡಬೇಕಿದೆ’ ಎಂದು ಪವನ್​ ಕಲ್ಯಾಣ್​ ಹೇಳಿದ್ದರು.

ಇದನ್ನೂ ಓದಿ: ಬೈಕ್​ ಅಪಘಾತಕ್ಕೆ ಒಳಗಾದ ನಟ ಸಾಯಿ ಧರಮ್​ ತೇಜ್​ ಈಗ ಹೇಗಿದ್ದಾರೆ? ಇಲ್ಲಿದೆ ಶಾಕಿಂಗ್​ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada