AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ ಪತ್ನಿ ಗೌರಿ ಖಾನ್​ಗೂ ಅಂಟಿತ್ತು ಗಾಂಜಾ ಕಳಂಕ; ಏರ್​ಪೋರ್ಟ್​ನಲ್ಲಿ ನಡೆದ ಆ ಘಟನೆ ನಿಜವೇ?

ಬರ್ಲಿನ್​ ಏರ್​ಪೋರ್ಟ್​ನಲ್ಲಿ ಆ ಘಟನೆ ನಡೆಯಿತು ಎನ್ನಲಾದ ಬಳಿಕ ಗೌರಿ ಖಾನ್​ ಬಗ್ಗೆ ಅನೇಕ ವದಂತಿಗಳು ಹರಿದಾಡಿದ್ದವು. ಅವರು ಮಾದಕ ವ್ಯಸನಿ ಆಗಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತ್ತು.

ಶಾರುಖ್​ ಪತ್ನಿ ಗೌರಿ ಖಾನ್​ಗೂ ಅಂಟಿತ್ತು ಗಾಂಜಾ ಕಳಂಕ; ಏರ್​ಪೋರ್ಟ್​ನಲ್ಲಿ ನಡೆದ ಆ ಘಟನೆ ನಿಜವೇ?
ಶಾರುಖ್ ಖಾನ್, ಗೌರಿ ಖಾನ್, ಆರ್ಯನ್ ಖಾನ್
TV9 Web
| Edited By: |

Updated on: Oct 04, 2021 | 8:17 AM

Share

ಡ್ರಗ್ಸ್​ ಪಾರ್ಟಿ ಮಾಡುತ್ತಿರುವಾಗ ನಟ ಶಾರುಖ್​ ಖಾನ್​ ಪುತ್ರ ಆರ್ಯನ್ ಖಾನ್​ ಅವರು ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಅಧಿಕಾರಿಗಳ ಬಲೆಗೆ ಬಿದಿದ್ದಾರೆ. ಸದ್ಯ ಅವರನ್ನು ಎನ್​ಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ಇದು ಶಾರುಖ್ ಕುಟುಂಬಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಮಗನನ್ನು ಕೇಸ್​ನಿಂದ ಹೊರತರಲು ಶಾರುಖ್​ ಮತ್ತು ಅವರ ಪತ್ನಿ ಗೌರಿ ಖಾನ್​ ಹರಸಾಹಸ ಮಾಡುತ್ತಿದ್ದಾರೆ. ಈ ನಡುವೆ ಗೌರಿ ಖಾನ್​ಗೆ ಸಂಬಂಧಿಸಿದ ಒಂದು ಮಾಹಿತಿ ಮತ್ತೆ ಮುನ್ನೆಲೆಗೆ ಬರುತ್ತಿದೆ. ಅವರಿಗೂ ಕೂಡ ಗಾಂಜಾ ನಂಟು ಇತ್ತು ಎಂಬ ಬಗ್ಗೆ ಚರ್ಚೆ ಆಗುತ್ತಿದೆ.

ಕೆಲವು ವರ್ಷಗಳ ಹಿಂದೆ ಗೌರಿ ಖಾನ್​ ಬಗ್ಗೆ ಒಂದು ಸುದ್ದಿ ಹಾರಿದಾಡಿತ್ತು. ಗಾಂಜಾ ಹೊಂದಿದ್ದಾರೆ ಎಂಬ ಶಂಕೆ ಮೇರೆಗೆ ಬರ್ಲಿನ್​ ಏರ್​​ಪೋರ್ಟ್​ನಲ್ಲಿ ಅವರನ್ನು ಅಧಿಕಾರಿಗಳು ತಡೆದಿದ್ದರು ಮತ್ತು ಸಂಪೂರ್ಣ ತಪಾಸಣೆ ನಡೆಸಲಾಗಿತ್ತು ಎಂಬ ವಿಚಾರ ವೈರಲ್​ ಆಗಿತ್ತು. ಆದರೆ ಆ ಬಗ್ಗೆ ಅಲ್ಲಿನ ಅಧಿಕಾರಿಗಳು ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಹಾಗಾಗಿ ಅದು ಕೇವಲ ವದಂತಿ ಎಂದು ವಾದ ಮಾಡುತ್ತಾರೆ ಶಾರುಖ್​ ಅಭಿಮಾನಿಗಳು.

ಆ ಘಟನೆ ನಡೆದ ಬಳಿಕ ಗೌರಿ ಖಾನ್​ ಬಗ್ಗೆ ಅನೇಕ ಗಾಸಿಪ್​ಗಳು ಹರಿದಾಡಿದ್ದವು. ಅವರು ಮಾದಕ ವ್ಯಸನಿ ಆಗಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತು. ಖಾಸಗಿ ಮ್ಯಾಗಜಿನ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಎಲ್ಲ ವದಂತಿಗಳನ್ನು ಗೌರಿ ಖಾನ್​ ತಳ್ಳಿ ಹಾಕಿದರು. ಇಂಥ ಗಾಳಿ ಸುದ್ದಿಗಳಿಂದ ತಾವು ವಿಚಲಿತ ಆಗುವುದಿಲ್ಲ ಎಂದು ಅವರು ಹೇಳಿದ್ದರು. ಒಟ್ಟಿನಲ್ಲಿ ಅವರ ಮೇಲೆ ಗಾಂಜಾ ಕಳಂಕ ಅಂಟಿಕೊಂಡಿದ್ದು ಮಾತ್ರ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿತ್ತು.

ಸದ್ಯ ಶಾರುಖ್​ ಪುತ್ರ ಆರ್ಯನ್​ ಖಾನ್​ ಭವಿಷ್ಯದ ಬಗ್ಗೆ ಅವರ ಕುಟುಂಬಕ್ಕೆ ಚಿಂತೆ ಆಗಿದೆ. ಆ ಪಾರ್ಟಿಗೆ ಆರ್ಯನ್ ಕೇವಲ ಗೆಸ್ಟ್​ ಆಗಿದ್ದರು. ಅವರು ಯಾವುದೇ ರೀತಿ ಡ್ರಗ್ಸ್​ ಸೇವಿಸಿಲ್ಲ ಎಂದು ಅವರ ಪರ ವಕೀಲರು ವಾದ ಮಾಡುತ್ತಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಸತ್ಯ ಹೊರಬೀಳಲಿದೆ.

ಇದನ್ನೂ ಓದಿ:

ಶಾರುಖ್​ ಪುತ್ರನ ಅರೆಸ್ಟ್​ ಬೆನ್ನಲ್ಲೇ ಓಡೋಡಿ ಬಂದ ಸಲ್ಮಾನ್​ ಖಾನ್​; ‘ಮನ್ನತ್​’ನಲ್ಲಿ ನಡೆದಿದ್ದು ಏನು?

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?