ಶಾರುಖ್ ಖಾನ್ಗೆ ಹೆಚ್ಚಿದ ಸಂಕಷ್ಟ; ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ ಅರೆಸ್ಟ್
ಆರ್ಯನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದ ಎನ್ಸಿಬಿ ಅಧಿಕಾರಿಗಳು ಈಗ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದರಿಂದ ಶಾರುಖ್ ಖಾನ್ಗೆ ಸಂಕಷ್ಟ ಹೆಚ್ಚಿದೆ.
ಡ್ರಗ್ಸ್ ಪಾರ್ಟಿಗೆ ತೆರಳಿದವರಲ್ಲಿ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಕೂಡ ಇದ್ದರು ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಆರ್ಯನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದ ಎನ್ಸಿಬಿ ಅಧಿಕಾರಿಗಳು ಈಗ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದರಿಂದ ಶಾರುಖ್ ಖಾನ್ಗೆ ಸಂಕಷ್ಟ ಹೆಚ್ಚಿದೆ.
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಆರ್ಯನ್ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್ಸಿಬಿ) ಆರ್ಯನ್ ಅವರನ್ನು ವಶಕ್ಕೆ ಪಡೆದಿದೆ. ಅಲ್ಲಿಂದ ಅವರನ್ನು ಎನ್ಸಿಬಿ ಕಚೇರಿಗೆ ಕರೆದುಕೊಂಡು ಬರಲಾಯಿತು. ಎನ್ಸಿಬಿ ಕಚೇರಿ ಒಳಗೆ ಆರ್ಯನ್ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ಈಗ ಅವರನ್ನು ಅರೆಸ್ಟ್ ಮಾಡಲಾಗಿದೆ. ಇದರಿಂದ ಶಾರುಖ್ ವಿಚಲಿತರಾಗಿದ್ದಾರೆ.
ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್ನಲ್ಲಿ ಹರಡಿರುವ ಡ್ರಗ್ಸ್ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.
ಆರ್ಯನ್ ಖಾನ್ಗೆ ನಟನಾಗುವ ಆಸಕ್ತಿ ಇಲ್ಲವಂತೆ. ಅದನ್ನು ಈ ಹಿಂದೆ ಶಾರುಖ್ ಹೇಳಿಕೊಂಡಿದ್ದರು. ಹಾಗಂತ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದುಕೊಳ್ಳುತ್ತಾರೆ ಎಂದರ್ಥವಲ್ಲ. ನಿರ್ದೇಶನದಲ್ಲಿ ತೊಡಗಿಕೊಳ್ಳುವ ಆಸಕ್ತಿ ಅವರಿಗೆ ಇದೆ. ಲಂಡನ್ನ ‘ಸೆವೆನ್ ಓಕ್ಸ್ ಹೈಸ್ಕೂಲ್’ನಲ್ಲಿ ಆರ್ಯನ್ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್ ಆರ್ಟ್ಸ್, ಸಿನಿಮ್ಯಾಟಿಕ್ ಆರ್ಟ್ಸ್, ಫಿಲ್ಮ್ ಮತ್ತು ಟೆಲಿವಿಷನ್ ಪ್ರೊಡಕ್ಷನ್ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ.
‘ದಿ ಲಯನ್ ಕಿಂಗ್’ ಸಿನಿಮಾದ ಹಿಂದಿ ಅವತರಣಿಕೆಗೆ ಆರ್ಯನ್ ಖಾನ್ ಡಬ್ಬಿಂಗ್ ಮಾಡಿದ್ದರು. ಅಲ್ಲದೆ ಚಿಕ್ಕ ವಯಸ್ಸಿನಲ್ಲಿದ್ದಾಗ ಕೆಲವು ಸಿನಿಮಾಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಶಾರುಖ್ ನಟನೆಯ ‘ಕಭಿ ಅಲ್ವಿದಾ ನಾ ಕೆಹನಾ’, ‘ಕಭಿ ಖುಷಿ ಕಭಿ ಗಮ್’ ಸಿನಿಮಾದ ಸಣ್ಣ-ಪುಟ್ಟ ದೃಶ್ಯಗಳಲ್ಲಿ ಅವರು ಬಂದುಹೋಗಿದ್ದರು. ‘ಧೂಮ್’ ಸರಣಿಯ ಮುಂಬರುವ ಚಿತ್ರಕ್ಕೆ ಆರ್ಯನ್ ಖಾನ್ ಹೀರೋ ಆಗುತ್ತಾರೆ ಎಂಬ ಗಾಸಿಪ್ ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದಿನ್ನೂ ನಿಜವಾಗಿಲ್ಲ. ಹೀಗಿರುವಾಗಲೇ ಅವರ ಬಂಧನವಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.
ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದ ಮಗ ಆರ್ಯನ್ಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಶಾರುಖ್ ಖಾನ್
Published On - 4:13 pm, Sun, 3 October 21