ಹೊಸ ರೂಪದಲ್ಲಿ ಬರಲಿದೆ ‘ವೀಕೆಂಡ್​ ವಿತ್​ ರಮೇಶ್’​; ಪ್ರಸಾರ ಯಾವಾಗ?

Weekend with Ramesh: ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ಹೆಚ್ಚಿದೆ. ಸಾಕಷ್ಟು ಜನರು ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೆ, ಹಿಂದಿಯಲ್ಲಿ ಬಿಗ್​ ಬಾಸ್​ ಶೋಅನ್ನು ಸಂಪೂರ್ಣವಾಗಿ ಒಟಿಟಿಯಲ್ಲೇ ಪ್ರಸಾರ ಮಾಡಲಾಗಿತ್ತು.

ಹೊಸ ರೂಪದಲ್ಲಿ ಬರಲಿದೆ ‘ವೀಕೆಂಡ್​ ವಿತ್​ ರಮೇಶ್’​; ಪ್ರಸಾರ ಯಾವಾಗ?

‘ವೀಕೆಂಡ್​ ವಿತ್​ ರಮೇಶ್​’ ಶೋ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಈ ಶೋ ಯಶಸ್ವಿಯಾಗಿ ನಾಲ್ಕು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಈಗ ಐದನೇ ಸೀಸನ್​ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಆದರೆ, ಈ ಬಾರಿ ಈ ಶೋನ ರೂಪುರೇಷೆ ಸಂಪೂರ್ಣವಾಗಿ ಬದಲಾಗಲಿದೆ. ಈ ವಿಚಾರ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.

‘ವೀಕೆಂಡ್​ ವಿತ್​ ರಮೇಶ್’​ ಪ್ರತಿ ಸೀಸನ್​ನಲ್ಲಿ ಸಾಧಕರನ್ನು ಕರೆತಂದು ಅವರು ಮಾಡಿದ ಸಾಧನೆ ಬಗ್ಗೆ ಹೇಳಲಾಗುತ್ತದೆ. ಅವರು ಅನುಭವಿಸಿದ ಕಷ್ಟ, ಅವರಿಗೆ ಯಶಸ್ಸು ಸಿಕ್ಕಿದ್ದು ಹೇಗೆ ಎಂಬಿತ್ಯಾದಿ ವಿವರಗಳನ್ನು ಇಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗುತ್ತದೆ. ಇನ್ನು, ಸಾಧಕರ ಕಷ್ಟದ ಹಾದಿಯಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತ ಅನೇಕರನ್ನು ವೇದಿಕೆ ಮೇಲೆ ಕರೆತರಲಾಗುತ್ತದೆ. ರಮೇಶ್​ ಅರವಿಂದ್ ಅವರ ನಿರೂಪಣೆ ಪ್ರತಿಬಾರಿ ಹೆಚ್ಚು ಗಮನ ಸೆಳೆಯುತ್ತದೆ. ಈ ಎಲ್ಲಾ ಕಾರಣಕ್ಕೆ ‘ವೀಕೆಂಡ್​ ವಿತ್​ ರಮೇಶ್’ ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈಗ ಹೊಸ ಸೀಸನ್​ ಆರಂಭವಾಗುವ ಸೂಚನೆ ಸಿಕ್ಕಿದೆ.

ಇತ್ತೀಚೆಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು ಅವರು ಈ ಬಗ್ಗೆ ಮಾತನಾಡಿದ್ದರು. 2022ರ ಆರಂಭದಲ್ಲಿ ಶೋ ಪ್ರಸಾರವಾಗಲಿದೆ ಎಂದು ಹೇಳಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಬಾರಿ ಶೋ ಪ್ರಸಾರವಾಗುತ್ತಿತ್ತು. ಈಗ ಕೇಳಿ ಬರುತ್ತಿರುವ ಹೊಸ ವಿಚಾರ ಎಂದರೆ, ಒಟಿಟಿ ಪ್ಲಾಟ್​ಫಾರ್ಮ್ ಜೀ5​ನಲ್ಲಿ ಮಾತ್ರ ಈ ಶೋ ಪ್ರಸಾರವಾಗಲಿದೆ.

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ಹೆಚ್ಚಿದೆ. ಸಾಕಷ್ಟು ಜನರು ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೆ, ಹಿಂದಿಯಲ್ಲಿ ಬಿಗ್​ ಬಾಸ್​ ಶೋಅನ್ನು ಸಂಪೂರ್ಣವಾಗಿ ಒಟಿಟಿಯಲ್ಲೇ ಪ್ರಸಾರ ಮಾಡಲಾಗಿತ್ತು. ಈಗ ಅದೇ ರೀತಿಯಲ್ಲಿ ‘ವೀಕೆಂಡ್​ ವಿತ್​ ರಮೇಶ್​’ ಒಟಿಟಿ ಹಾದಿ ಹಿಡಿದಿದೆ.

ಹಾಗಾದರೆ, ಇದನ್ನು ಈ ಬಾರಿ ನಿರೂಪಣೆ ಮಾಡುವವರು ಯಾರು? ಅದಕ್ಕೂ ಉತ್ತರವಿದೆ. ಪ್ರತಿಬಾರಿಯಂತೆ ಈ ಬಾರಿಯೂ ರಮೇಶ್​ ಅರವಿಂದ್ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಸಾಕಷ್ಟು ಭಿನ್ನ ವಿಚಾರಗಳನ್ನು ಇಟ್ಟುಕೊಂಡು ಈ ಶೋ ಪ್ರಸಾರ ಮಾಡುವ ಆಲೋಚನೆ ವಾಹಿನಿಗೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

ರಮೋಲಾರನ್ನು ರಂಬೋಲಾ ಎಂದು ಕರೆದ ಮಂಜು ಪಾವಗಡ; ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

Click on your DTH Provider to Add TV9 Kannada