Amitabh Bachchan: ನಟಿ ಕೃತಿ ಸನೋನ್ ಜೊತೆ ಹೆಜ್ಜೆ ಹಾಕುತ್ತಾ ಕಾಲೇಜು ದಿನಗಳ ನೆನಪಿಗೆ ಜಾರಿದ ಅಮಿತಾಭ್
Kriti Sanon in KBC 13: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್ಪತಿ ಶೋ ನಡೆಸಿಕೊಡುತ್ತಾ, ನಟಿ ಕೃತಿ ಸನೋನ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಅವರಿಗೆ ತಮ್ಮ ಯೌವ್ವನದ ದಿನಗಳು ನೆನಪಾಗಿದೆ.
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ‘ಕೌನ್ ಬನೇಗಾ ಕರೋಡ್ಪತಿ’ಯ 13ನೇ ಸೀಸನ್ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಸಂಚಿಕೆ ಪ್ರಸಾರವಾಗುತ್ತದೆ. ಅದರಲ್ಲಿ ವಿವಿಧ ಕ್ಷೇತ್ರಗಳ ಖ್ಯಾತ ತಾರೆಯರು ಚಾರಿಟಿಯ ಉದ್ದೇಶದಿಂದ ಭಾಗವಹಿಸಿ, ಗೆದ್ದ ಹಣವನ್ನು ದಾನ ಮಾಡುತ್ತಾರೆ. ಈ ವಾರದ ಸಂಚಿಕೆಯಲ್ಲಿ ಬಾಲಿವುಡ್ನ ಖ್ಯಾತ ನಟಿ ಕೃತಿ ಸನೋನ್ ಭಾಗಿಯಾಗಲಿದ್ದಾರೆ. ಈ ಕುರಿತು ಬಿಗ್ಬಿ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಕೃತಿ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ನೃತ್ಯ ಮಾಡುವಾಗ ಅಮಿತಾಭ್ಗೆ ತಮ್ಮ ಯೌವ್ವನದ ದಿನಗಳು ನೆನಪಾಗಿವೆಯಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಅಮಿತಾಭ್, ಅದಕ್ಕೆ ಕ್ಯಾಪ್ಶನ್ ನೀಡುತ್ತಾ ಹಳೆಯ ದಿನಗಳನ್ನು ಸ್ಮರಿಸಿದ್ದಾರೆ. ‘ನಟಿ ಕೃತಿಯೊಂದಿಗೆ ಬಲ್ರೂಮ್ ನೃತ್ಯ ಮಾಡುತ್ತಾ ತನ್ನ ಕಾಲೇಜು ಹಾಗೂ ಕಲ್ಕತ್ತಾದ ದಿನಗಳು ನೆನಪಾದವು’ ಎಂದು ಅಮಿತಾಭ್ ಸಂಭ್ರಮ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಅಮಿತಾಭ್ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:
View this post on Instagram
ನಟ ಅಮಿತಾಭ್ ಮುಂಬೈಗೆ ಬರುವ ಮೊದಲು ಕಲ್ಕತ್ತಾದಲ್ಲಿದ್ದರು. ಕೃತಿ ಜೊತೆ ನೃತ್ಯ ಮಾಡುತ್ತಾ ಅಮಿತಾಭ್ ಆಗಿನ ಕಾಲವನ್ನು ನೆನಪಿಸಿಕೊಂಡಿದ್ದಾರೆ. ಈ ಸಂಚಿಕೆಯ ಕುರಿತು ಇನ್ನೂ ವಾಹಿನಿ ಪ್ರೋಮೋ ಬಿಡುಗಡೆ ಮಾಡಿಲ್ಲ. ಕೃತಿ ಭಾಗವಹಿಸಿರುವ ವಿಶೇಷ ಸಂಚಿಕೆಯು ಶುಕ್ರವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ನಟಿ ಕೃತಿ ಸನೋನ್ ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದ ಶೂಟಿಂಗ್ ಮುಗಿಸಿದ್ದರು. ಅದರಲ್ಲಿ ಅವರು ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಕೆಬಿಸಿಯಲ್ಲಿ ಪ್ರತಿ ಶುಕ್ರವಾರ ಪ್ರಸಾರವಾಗುವ ವಿಶೇಷ ಸಂಚಿಕೆಯಲ್ಲಿ ಈವರೆಗೆ ಖ್ಯಾತ ತಾರೆಯರು ಭಾಗವಹಿಸಿದ್ದಾರೆ. ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ, ಸುನೀಲ್ ಶೆಟ್ಟಿ, ಜಾಕಿನ ಶ್ರಾಫ್ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಒಲಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಹಾಕಿ ಆಟಗಾರ ಪಿ.ಶ್ರೀಜಿತ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:
‘ಸಲಗ’ ಚಿತ್ರದ ಸಾವಿತ್ರಿ-ಚಿನ್ನು ಲವ್ಸ್ಟೋರಿ ಬಗ್ಗೆ ಕಾಕ್ರೋಚ್ ಸುಧಿ ಫನ್ನಿ ಮಾತುಕತೆ
Vasishta Simha: ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹಗೆ ಜನ್ಮದಿನದ ಸಂಭ್ರಮ; ಹೊಸ ಚಿತ್ರಗಳ ಪೋಸ್ಟರ್ ರಿಲೀಸ್
Suresh Pujari Arrest: ಫಿಲಿಪೈನ್ಸ್ನಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿ ಸೆರೆ