ಕನ್ನಡತಿಯಲ್ಲಿ ಹರ್ಷನ ಪ್ರಪೋಸ್​ ಭುವಿ ಒಪ್ಪಿಕೊಳ್ಳೋದು ಡೌಟು? ಇಲ್ಲಿದೆ ಕಾರಣ

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದರು. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದಾರೆ.

ಕನ್ನಡತಿಯಲ್ಲಿ ಹರ್ಷನ ಪ್ರಪೋಸ್​ ಭುವಿ ಒಪ್ಪಿಕೊಳ್ಳೋದು ಡೌಟು? ಇಲ್ಲಿದೆ ಕಾರಣ
ಭುವಿ-ಹರ್ಷ

ಕನ್ನಡತಿ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಪ್ರೀತಿಯನ್ನು ವ್ಯಕ್ತಪಡಿಸದೇ ಸುಮ್ಮನೆ ಇದ್ದ ಹರ್ಷ​, ಭುವಿ ಜನ್ಮದಿನಕ್ಕಾಗಿ ಕಾದಿದ್ದ. ಆ ದಿನ ಈಗ ಬಂದೇ ಬಿಟ್ಟಿದೆ. ಭುವಿಗೆ ಪ್ರಪೋಸ್​ ಮಾಡೋಕೆ ಹರ್ಷ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಈ ವಿಶೇಷ ಕ್ಷಣಕ್ಕೆ ಯಾವುದಾದರೂ ವಿಘ್ನ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದಾನೆ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್​ಪ್ರೈಸ್​ ಕಾದಿತ್ತು.  ಭುವಿ ಕಣ್ಮುಚ್ಚಿ ಬಿಂದು ಮನೆ ಒಳಗೆ ಕರೆತಂದಳು. ಒಳಗೆ ಮಾಡಲಾಗಿದ್ದ ಅಲಂಕಾರ ನೋಡಿ ಭುವನೇಶ್ವರಿಗೆ ನಿಜಕ್ಕೂ ಅಚ್ಚರಿ ಹಾಗೂ ಶಾಕ್​ ಎರಡೂ ಆಗಿತ್ತು.

ಬರ್ತ್​ಡೇ ಸೆಲಬ್ರೇಷನ್​ ನಂತರದಲ್ಲಿ ಹರ್ಷ ಪ್ರಪೋಸ್​ ಮಾಡೋಕೆ ವಿಶೇಷ ಅರೇಂಜ್​ಮೆಂಟ್​ಗಳನ್ನು ಮಾಡಿದ್ದಾನೆ. ಕಾಂಟ್ರ್ಯಾಕ್ಟ್​ ನೀಡಿ ಪ್ರಪೋಸ್​ ಮಾಡೋಕೆ ವ್ಯವಸ್ಥೆ ಮಾಡಿಸಿದ್ದಾನೆ. ಚಿನ್ನದ ಉಂಗುರ ಕೂಡ ಮಾಡಿಸಿದ್ದಾನೆ. ಇದು ಭುವಿಗೆ ಇನ್ನೂ ತಿಳಿದಿಲ್ಲ.

ಭುವಿ ಪ್ರಪೋಸ್​ ಒಪ್ಪಿಕೊಳ್ಳುತ್ತಾರಾ?

ಹರ್ಷ ಮಾಡಿದ ಪ್ರಪೋಸ್​ ಭುವಿ ಒಪ್ಪಿಕೊಳ್ಳುತ್ತಾಳಾ ಅನ್ನೋದು ಸದ್ಯದ ಕುತೂಹಲ. ಅವಳ ಕ್ಲೋಸ್​ ಫ್ರೆಂಡ್ ವರುಧಿನಿಗೆ ಹರ್ಷ ಮೇಲೆ ಪ್ರೀತಿ ಇದೆ. ಆ ಪ್ರೀತಿಯನ್ನು ಪಡೆಯಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾಳೆ ವರುಧಿನಿ. ಇದು ಭುವಿಗೂ ಗೊತ್ತಾಗಿದೆ. ಒಂದೊಮ್ಮೆ ಹರ್ಷ ಪ್ರೀತಿ ಒಪ್ಪಿಕೊಂಡರೆ ವರುಧಿನಿಗೆ ಬೇಸರ ಆಗುತ್ತದೆ ಎಂದು ಭುವಿಗೆ ಅನಿಸಬಹುದು. ಹೀಗಾಗಿ, ಅವಳು ಹರ್ಷನ ಪ್ರೀತಿಯನ್ನು ತಿರಸ್ಕರಿಸಬಹುದು. ಹರ್ಷನನ್ನು ಕಂಡರೆ ಭುವಿಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಈ ಪ್ರೀತಿಯನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಗೊಂದಲಕ್ಕೆ ಅವಳು ಬೀಳಬಹುದು.

ಇದನ್ನೂ ಓದಿ: ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಲು ‘ಕನ್ನಡತಿ’ ಹರ್ಷ ರೆಡಿ; ವಿಲನ್​ ಯಾರು?

Read Full Article

Click on your DTH Provider to Add TV9 Kannada