AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಬಾರಿ ವಿಚಾರಣೆಯಿಂದ ತಪ್ಪಿಸಿಕೊಂಡ ‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್; ಮುಂದಿನ ಕ್ರಮ ಏನು?

ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್​ ಮೇಲೂ ಅನುಮಾನ ಎದುರಾಗಿದೆ.

ನಾಲ್ಕು ಬಾರಿ ವಿಚಾರಣೆಯಿಂದ ತಪ್ಪಿಸಿಕೊಂಡ ‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್; ಮುಂದಿನ ಕ್ರಮ ಏನು?
ಜಾಕ್ವೆಲಿನ್ ಫರ್ನಾಂಡಿಸ್
ರಾಜೇಶ್ ದುಗ್ಗುಮನೆ
|

Updated on:Oct 18, 2021 | 5:31 PM

Share

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಅನೇಕ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಜನಪ್ರಿಯ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೂ ಈಗ ಸಂಕಷ್ಟ ಎದುರಾಗಿದೆ. ಬರೋಬ್ಬರಿ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ. ಇದಕ್ಕೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಸತತ ನಾಲ್ಕನೇ ಬಾರಿಗೆ ಅವರು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್​ ಚಂದ್ರಶೇಖರ್​ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್​ ಮೇಲೂ ಅನುಮಾನ ಎದುರಾಗಿದೆ.  ಶ್ರೀಲಂಕಾ ಮೂಲಕ ಜಾಕ್ವೆಲಿನ್​ ಅವರು ಬಾಲಿವುಡ್​ನಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ. ಸಲ್ಮಾನ್​ ಖಾನ್​ ವಲಯದಲ್ಲಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್​ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ಜಾಕ್ವೆಲಿನ್​ ಅವರನ್ನು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಇತ್ತೀಚೆಗೆ ಅನೇಕ ಬಾರಿಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದಿಲ್ಲ ಎಂಬುದು ತಿಳಿದುಬಂದಿದೆ. ಈ ಮೂಲಕ ಅವರು ನಾಲ್ಕು ಬಾರಿ ವಿಚಾರಣೆಯಿಂದ ತಪ್ಪಿಸಿಕೊಂಡಂತೆ ಆಗಿದೆ. ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮುಖ್ಯ ಆರೋಪಿ ಸುಕೇಶ್​ ಚಂದ್ರಶೇಖರ್​ ಮತ್ತು ಜಾಕ್ವೆಲಿನ್​​ ಫರ್ನಾಂಡಿಸ್​ ಅವರು ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು? 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಸುಕೇಶ್​ ಚಂದ್ರಶೇಖರ್ ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಕಿಚ್ಚ; ಬುರ್ಜ್​ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್​ ರೋಣ’ ಟೈಟಲ್​ ಲಾಂಚ್​ ನೆನಪಿಸಿಕೊಂಡ ಸುದೀಪ್​

Published On - 5:31 pm, Mon, 18 October 21

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ