ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ

Rashmika Mandanna: ದಕ್ಷಿಣ ಭಾರತದ ಘಟಾನುಘಟಿ ಸ್ಟಾರ್​ ಕಲಾವಿದರನ್ನೆಲ್ಲ ರಶ್ಮಿಕಾ ಮಂದಣ್ಣ ಹಿಂದಿಕ್ಕಿದ್ದಾರೆ. ‘ಕೆಜಿಎಫ್​’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ‘ರಾಕಿಂಗ್​ ಸ್ಟಾರ್​’ ಯಶ್​ ಅವರಿಗೆ ಮೂರನೇ ಸ್ಥಾನವಿದೆ.

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ
ಯಶ್​, ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Oct 18, 2021 | 9:17 AM

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಲವು ಕಾರಣಗಳಿಗಾಗಿ ಅವರು ಸುದ್ದಿ ಆಗುತ್ತಿದ್ದಾರೆ. ಈಗ ಅವರು ಯಶ್​, ಸಮಂತಾ, ಪ್ರಭಾಸ್​, ವಿಜಯ್​ ದೇವರಕೊಂಡ (Vijay Deverakonda) ಮುಂತಾದ ಸ್ಟಾರ್​ ಕಲಾವಿದರನ್ನು ಹಿಂದಿಕ್ಕಿ ನಂಬರ್​ ಒನ್​ ಪಟ್ಟ ಪಡೆದುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ಪ್ರಭಾವಿ ಎನಿಸಿಕೊಂಡಿರುವ ದಕ್ಷಿಣ ಭಾರತದ ಸೆಲೆಬ್ರಿಗಳ ಪಟ್ಟಿಯನ್ನು (Forbes list) ಫೋರ್ಬ್ಸ್​ ಸಂಸ್ಥೆ ಬಿಡುಗಡೆ ಮಾಡಿದೆ. ಅದರಲ್ಲಿ ರಶ್ಮಿಕಾ ನಂ.1 ಆಗಿದ್ದಾರೆ.

ಸಂಭಾವನೆ, ಸೋಶಿಯಲ್ ಮೀಡಿಯಾ ಹಿಂಬಾಲಕರ ಸಂಖ್ಯೆ, ಸಿನಿಮಾ ಆಫರ್​ ಮುಂತಾದ ಎಲ್ಲ ವಿಚಾರದಲ್ಲೂ ಈ ಕೊಡಗಿನ ಕುವರಿಯ ನಾಗಾಲೋಟ ಮುಂದುವರಿದಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರಭಾವ ಹೆಚ್ಚುತ್ತಿದೆ. ಅವರು ಮಾಡುವ ಪ್ರತಿ ಪೋಸ್ಟ್​ ಕೂಡ ಕೋಟ್ಯಂತರ ಮಂದಿಯನ್ನು ತಲುಪುತ್ತಿದೆ. ಈ ಕಾರಣಕ್ಕೆ ಅವರು 9.88 ರೇಟಿಂಗ್​ ಪಡೆಯುವ ಮೂಲಕ ನಂ.1 ಆಗಿದ್ದಾರೆ. 9.67 ರೇಟಿಂಗ್​ ಪಡೆದಿರುವ ವಿಜಯ್​ ದೇವರಕೊಂಡ ಅವರು 2ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಭಾರತದ ಘಟಾನುಘಟಿ ಸ್ಟಾರ್​ ಕಲಾವಿದರನ್ನೆಲ್ಲ ರಶ್ಮಿಕಾ ಮಂದಣ್ಣ ಹಿಂದಿಕ್ಕಿದ್ದಾರೆ. ‘ಕೆಜಿಎಫ್​’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ‘ರಾಕಿಂಗ್​ ಸ್ಟಾರ್​’ ಯಶ್​ ಅವರಿಗೆ ಮೂರನೇ ಸ್ಥಾನವಿದೆ. ಅವರು 9.54 ರೇಟಿಂಗ್​ ಪಡೆದುಕೊಂಡಿದ್ದಾರೆ. 9.49 ರೇಟಿಂಗ್​ನೊಂದಿಗೆ ನಟಿ ಸಮಂತಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಲು ಅರ್ಜುನ್​ 9.46, ದುಲ್ಖರ್​ ಸಲ್ಮಾನ್​ 9.42, ಪೂಜಾ ಹೆಗ್ಡೆ 9.41, ಪ್ರಭಾಸ್​ 9.40, ಸೂರ್ಯ 9.37, ತಮನ್ನಾ ಭಾಟಿಯಾ 9.36 ರೇಟಿಂಗ್​ ಪಡೆದುಕೊಂಡಿದ್ದಾರೆ.

ಟಾಲಿವುಡ್​ನ ಇನ್ನಿತರ ಸ್ಟಾರ್​ ಕಲಾವಿದರಾದ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮುಂತಾದವರು ಟಾಪ್​ 10 ಪಟ್ಟಿಯ ಹೊರಗಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸೆಲೆಬ್ರಿಟಿಗಳ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಬಂದ ಪ್ರತಿಕ್ರಿಯೆಯನ್ನು ಆಧರಿಸಿ ಪೋರ್ಬ್ಸ್​ ಸಂಸ್ಥೆ ಈ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ನಂ.1 ಎಂಬುದನ್ನು ತಿಳಿದು ಅವರ ಫ್ಯಾನ್ಸ್​ ಹಿರಿಹಿರಿ ಹಿಗ್ಗುತ್ತಿದ್ದಾರೆ.

ಇದನ್ನೂ ಓದಿ:

ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ; ಎಲ್ಲಿಂದ ಬರುತ್ತಿದೆ ಇಷ್ಟೊಂದು ದುಡ್ಡು?

ಒಂದೇ ಒಂದು ಮಾತಿನಿಂದ ಟ್ರೋಲಿಗನ ಕಮೆಂಟ್​ ಡಿಲೀಟ್​ ಮಾಡಿಸಿದ ರಶ್ಮಿಕಾ; ಅದರಲ್ಲಿ ಅಂಥದ್ದೇನಿತ್ತು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ