ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ

ವಯಸ್ಕ ಆಮೆಯು 110 ರಿಂದ 190 ಕೆಜಿ ವರೆಗೂ ತೂಕವಿರುತ್ತದೆ. 8 ರಿಂದ 10 ಇಂಚು ಉದ್ದವಾಗಿ ಬೆಳೆಯುತ್ತದೆ. ಇದರ ದೇಹದ ಮೇಲ್ಭಾಗದ ಅಂಗ ರಚನೆಯೂ ವಿಶೇಷವಾಗಿದ್ದು, ಸ್ಲೂಪಿನಂತೆ ಇರುತ್ತದೆ.

ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ
ಗ್ರೀನ್ ಸೀ ಆಮೆ ಕಳೇಬರ ಪತ್ತೆ
Follow us
| Updated By: preethi shettigar

Updated on:Sep 10, 2021 | 1:58 PM

ಉತ್ತರ ಕನ್ನಡ: ಕರ್ನಾಟಕ ಕರಾವಳಿಯಲ್ಲಿ ಅಪರೂಪವಾಗಿ ಕಾಣಸಿಗುವ “ಗ್ರೀನ್ ಸೀ” ಆಮೆಯ(chelonia mydas) ಕಳೆಬರ ಕಾರವಾರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಪತ್ತೆಯಾಗಿದೆ. ಇವುಗಳ ವಂಶವು ಅವನತಿಯಲ್ಲಿ ಇರುವುದರಿಂದಾಗಿ ವನ್ಯ ಜೀವಿ ಸೌಂರಕ್ಷಣ ಕಾಯ್ದೆ 1972 ರ ಅನುಭಂದ 1ರ ಅಡಿ ಇದು ಸಂರಕ್ಷಿಸಲ್ಪಟ್ಟಿದೆ. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಆಮೆಯ ಕಳೆಬರವೊಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದರ ನಂತರ ಪುನಃ ಇಂದು ಗ್ರೀನ್​ ಸೀ ಆಮೆ ಕಳೆಬರ ಪತ್ತೆಯಾಗಿದೆ.

ಗ್ರೀನ್ ಸೀ ಎಂದು ಕರೆಯಲ್ಪಡುವ ಈ ಆಮೆಯು ಸಸ್ಯಹಾರಿ ಆಮೆಯಾಗಿದ್ದು, ಪೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ದೇಹದ ವಿಶೇಷ ರಚನೆಯಿಂದ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಇದರ ಮುಖವು ಮೊಂಡವಾಗಿದ್ದು, ಸಮುದ್ರದಲ್ಲಿ ಬೆಳೆಯುವ ಪಾಚಿ, ಹುಲ್ಲುಗಲನ್ನು ತಿನ್ನಲು ಬೇಕಾದ ವ್ಯವಸ್ಥೆಗೆ ರಚನೆಯಾಗಿದೆ.

ವಯಸ್ಕ ಆಮೆಯು 110 ರಿಂದ 190 ಕೆಜಿ ವರೆಗೂ ತೂಕವಿರುತ್ತದೆ. 8 ರಿಂದ 10 ಇಂಚು ಉದ್ದವಾಗಿ ಬೆಳೆಯುತ್ತದೆ. ಇದರ ದೇಹದ ಮೇಲ್ಭಾಗದ ಅಂಗ ರಚನೆಯೂ ವಿಶೇಷವಾಗಿದ್ದು, ಸ್ಲೂಪಿನಂತೆ ಇರುತ್ತದೆ. ಎರಡು ವರ್ಷಗಳಿಗೊಮ್ಮೆ ಮಾತ್ರ ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಇವುಗಳ ಸಂತತಿ ಇದೀಗ ಅಳವಿನಂಚಿನಲ್ಲಿದೆ.

ಇಂದು ಪತ್ತೆಯಾದ ಆಮೆಯು ಮೀನುಗಾರರ ಬಲೆಗೆ ಸಿಲುಕಿ ಉಸಿರುಗಟ್ಟಿ ಸತ್ತಿರುವ ಸಾಧ್ಯತೆಯನ್ನು ತಜ್ಞರು ಅಭಿಪ್ರಾಯ ಪಟ್ಟಿದ್ದು, ಸ್ಥಳಕ್ಕೆ ಕಾರವಾರದ ಅರಣ್ಯಾಧಿಕಾರಿ ವಸಂತ್ ರೆಡ್ಡಿ ,ಕೋಸ್ಟಲ್ ಅಂಡ್​ ಮರೈನ್ ಏಕೋ ಸಿಸ್ಟಮ್​ನ ವಲಯದ ಆರ್​ಎಫ್​ಓ ಪ್ರಮೋದ್, ಡಿಆರ್​ಎಫ್​ಓ ಚಂದ್ರಶೇಖರ, ನವೀನ್, ಮಹೇಶ್ ಮತ್ತು ಸಿಬ್ಬಂದಿಗಳು ಹಾಜರಾಗಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Green sea turtle

ಗ್ರೀನ್ ಸೀ ಆಮೆ

ಈ ಹಿಂದೆ ಕೂಡ ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿಗೆ ಗಿಡುಗ ಆಮೆ ಕಳೆಬರ ಪತ್ತೆಯಾಗಿತ್ತು ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಆಮೆಗಳಲ್ಲಿ ಅತಿ ಚಿಕ್ಕ ಆಮೆಗಳ ಪ್ರಬೇಧ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಇದಕ್ಕೆ ಗಿಡುಗ ಆಮೆ ಎಂದು ಕರೆಯುತ್ತಾರೆ. ಅಪರೂಪದ ಆಮೆಯ ಕಳೇಬರವನ್ನು ಕಾರವಾರದ ತಿಳುಮಾತಿ ಬೀಚ್ ಬಳಿ ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿ ಪತ್ತೆ ಮಾಡಿದ್ದಾರೆ.

ಈ ಆಮೆಯು ಸಮುದ್ರ ಆಮೆಗಳಲ್ಲೇ ಗಾತ್ರದಲ್ಲಿಯೇ ಅತ್ಯಂತ ಚಿಕ್ಕದು. ಇದರ ಮುಖವು ಗಿಡುಗನ ಮುಖವನ್ನು ಹೋಲುತ್ತದೆ. ಹುಲಿಯ ದೇಹದ ಮೇಲೆ ಕಾಣಿಸುವ ಪಟ್ಟೆಗಳು ಈ ಆಮೆಯ ದೇಹದ ಮೇಲೆಯೂ ಕಾಣಿಸುತ್ತವೆ. ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಪೆಸಿಪಿಕ್, ಅಟ್ಲಾಂಟಿಕ್ ಸಾಗರಗಳಲ್ಲಿ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಹೆಚ್ಚು ಆಳವಿಲ್ಲದ ಕಡಲಿನ ಹವಳದ ದಿಬ್ಬಗಳ ನಡುವೆ ಕಂಡುಬರುತ್ತವೆ. ಇದನ್ನೂ ಓದಿ: ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿಗೆ ಗಿಡುಗ ಆಮೆ ಕಳೆಬರ ಪತ್ತೆ

ಸತ್ತ ಆಮೆ ಗರ್ಭದಲ್ಲಿನ ಮೊಟ್ಟೆಗಳಲ್ಲಿ ಜೀವ ತಳೆಯುತ್ತಿದ್ದ ಮರಿಗಳಿಗೆ ಬದುಕು ನೀಡಿದ್ದು ಎರಿಕ್ ಹೆಸರಿನ ವಾತ್ಸಲ್ಯಮಯಿ ವಿಜ್ಞಾನಿ!

Published On - 1:56 pm, Fri, 10 September 21