ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿಗೆ ಗಿಡುಗ ಆಮೆ ಕಳೆಬರ ಪತ್ತೆ

ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಆಮೆಗಳಲ್ಲಿ ಅತಿ ಚಿಕ್ಕ ಆಮೆಗಳ ಪ್ರಬೇಧ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ.

ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿಗೆ ಗಿಡುಗ ಆಮೆ ಕಳೆಬರ ಪತ್ತೆ
ಗಿಡುಗ ಆಮೆ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 31, 2021 | 11:06 PM

ಕಾರವಾರ: ಪಶ್ಚಿಮ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಆಮೆಗಳಲ್ಲಿ ಅತಿ ಚಿಕ್ಕ ಆಮೆಗಳ ಪ್ರಬೇಧ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಇದಕ್ಕೆ ಗಿಡುಗ ಆಮೆ ಎಂದು ಕರೆಯುತ್ತಾರೆ. ಅಪರೂಪದ ಆಮೆಯ ಕಳೇಬರವನ್ನು ಕಾರವಾರದ ತಿಳುಮಾತಿ ಬೀಚ್ ಬಳಿ ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿ ಪತ್ತೆ ಮಾಡಿದ್ದಾರೆ.

ಈ ಆಮೆಯು ಸಮುದ್ರ ಆಮೆಗಳಲ್ಲೇ ಗಾತ್ರದಲ್ಲಿಯೇ ಅತ್ಯಂತ ಚಿಕ್ಕದು. ಇದರ ಮುಖವು ಗಿಡುಗನ ಮುಖವನ್ನು ಹೋಲುತ್ತದೆ. ಹುಲಿಯ ದೇಹದ ಮೇಲೆ ಕಾಣಿಸುವ ಪಟ್ಟೆಗಳು ಈ ಆಮೆಯ ದೇಹದ ಮೇಲೆಯೂ ಕಾಣಿಸುತ್ತವೆ. ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಪೆಸಿಪಿಕ್, ಅಟ್ಲಾಂಟಿಕ್ ಸಾಗರಗಳಲ್ಲಿ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಹೆಚ್ಚು ಆಳವಿಲ್ಲದ ಕಡಲಿನ ಹವಳದ ದಿಬ್ಬಗಳ ನಡುವೆ ಕಂಡುಬರುತ್ತವೆ.

ಗಿಡುಗ ಆಮೆ ನೀರಿನಲ್ಲಿ ಈಜುವ ವಿಡಿಯೊ ಇಲ್ಲಿದೆ

(Carcass of Hawksbill Tortoise Found in Karwar Sea Shore)

ಇದನ್ನೂ ಓದಿ: Azadi Ka Amrut Mahotsav: ಕಾರವಾರದಲ್ಲಿ ಸ್ವಾತಂತ್ರ್ಯ ಹೋರಾಟ; ಇತಿಹಾಸದ ರೋಚಕ ಕಥೆ

ಇದನ್ನೂ ಓದಿ: ಸತ್ತ ಆಮೆ ಗರ್ಭದಲ್ಲಿನ ಮೊಟ್ಟೆಗಳಲ್ಲಿ ಜೀವ ತಳೆಯುತ್ತಿದ್ದ ಮರಿಗಳಿಗೆ ಬದುಕು ನೀಡಿದ್ದು ಎರಿಕ್ ಹೆಸರಿನ ವಾತ್ಸಲ್ಯಮಯಿ ವಿಜ್ಞಾನಿ!

Published On - 11:03 pm, Tue, 31 August 21