AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಜೀವನದ ಅವಿಸ್ಮರಣೀಯ ಕ್ಷಣವನ್ನು ಕಿತ್ತುಕೊಂಡಿದೆ: ಇಂಡಿಗೋ ವಿರುದ್ಧ ಪ್ರಯಾಣಿಕ ಆಕ್ರೋಶ

ನನ್ನ ಜೀವನದ ಅವಿಸ್ಮರಣೀಯ ಕ್ಷಣವನ್ನು ಕಿತ್ತುಕೊಂಡಿದೆ: ಇಂಡಿಗೋ ವಿರುದ್ಧ ಪ್ರಯಾಣಿಕ ಆಕ್ರೋಶ

ರಮೇಶ್ ಬಿ. ಜವಳಗೇರಾ
|

Updated on: Dec 05, 2025 | 5:52 PM

Share

ದೇಶಾದ್ಯಂತ ಇಂಡಿಯೋ ಏರ್​​ಲೈನ್ಸ್​​ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಬ್ರೇಕ್ ಬಿದ್ದಿದೆ. ವಿಮಾನಗಳ ದಿಢೀರ್ ರದ್ದತಿಯಿಂದಾಗಿ ದೇಶಾದ್ಯಂತ ಏರ್​ಪೋರ್ಟ್​ಗಳಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ದೆ ಇಲ್ಲದೆ ಪರದಾಡ್ತಿದ್ದಾರೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು, ವೃದ್ಧರು, ರೋಗಿಗಳ ಪಾಡಂತೂ ಹೇಳ ತೀರದಾಗಿದೆ. ಇನ್ನು ಕೆಲವರ ಅವಿಸ್ಮರಣೀಯ ಕ್ಷಣವನ್ನ ಇಂಡಿಗೋ ವಿಮಾನ ಸಂಸ್ಥೆ ಕಿತ್ತುಕೊಂಡಿದೆ.. ಹೌದು..ಮಗ ಹುಟ್ಟಿದ ಖುಷಿಯಲ್ಲಿದ್ದ ತಂದೆಯೊಬ್ಬರು ನಾಮಕರಣ ಕಾರ್ಯಕ್ರಮಕ್ಕೆ ಹೋಗದ ಪತಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಲಾದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ಡಿಸೆಂಬರ್ 05): ದೇಶಾದ್ಯಂತ ಇಂಡಿಯೋ ಏರ್​​ಲೈನ್ಸ್​​ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಬ್ರೇಕ್ ಬಿದ್ದಿದೆ. ವಿಮಾನಗಳ ದಿಢೀರ್ ರದ್ದತಿಯಿಂದಾಗಿ ದೇಶಾದ್ಯಂತ ಏರ್​ಪೋರ್ಟ್​ಗಳಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಊಟ, ತಿಂಡಿ, ನಿದ್ದೆ ಇಲ್ಲದೆ ಪರದಾಡ್ತಿದ್ದಾರೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು, ವೃದ್ಧರು, ರೋಗಿಗಳ ಪಾಡಂತೂ ಹೇಳ ತೀರದಾಗಿದೆ. ಇನ್ನು ಕೆಲವರ ಅವಿಸ್ಮರಣೀಯ ಕ್ಷಣವನ್ನ ಇಂಡಿಗೋ ವಿಮಾನ ಸಂಸ್ಥೆ ಕಿತ್ತುಕೊಂಡಿದೆ.. ಹೌದು..ಮಗ ಹುಟ್ಟಿದ ಖುಷಿಯಲ್ಲಿದ್ದ ತಂದೆಯೊಬ್ಬರು ನಾಮಕರಣ ಕಾರ್ಯಕ್ರಮಕ್ಕೆ ಹೋಗದ ಪತಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಲಾದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಗನ ನಾಮಕರಣಕ್ಕೆ ಹೋಗಲು ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಜೈಪುರಕ್ಕೆ ಹೋಗಲು ಇಂಡಿಯೋ ವಿಮಾನ ಬುಕ್ ಮಾಡಿದ್ದು, ಅದರಂತೆ ಇಂದು (ಡಿಸೆಂಬರ್ 05) ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆದ್ರೆ, ವಿಮಾನ ರದ್ದಾಗಿದೆ ಎನ್ನುವ ವಿಷಯ ತಿಳಿದು ಶಾಕ್ ಆಗಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಯಾಣಿಕ, ಮಗನ ನಾಮಕರಣಕ್ಕೆ ಕುಟುಂಬ ಸಮೇತ ಹೋಗಲು ಟಿಕೆಟ್ ಬುಕ್ ಮಾಡಲಾಗಿತ್ತು. ಆದ್ರೆ ಕೊನೆ ಇಂಡಿಗೋ ವಿಮಾನಗಳ ರದ್ದಿನಿಂದ ಹೋಗಲಾಗದ ಸ್ಥಿತಿ ಬಂದಿದೆ. ಇಂಡಿಗೋ ಏರ್ಲೈನ್ಸ್ ನನ್ನ ಜೀವನದ ಅವಿಸ್ಮರಣೀಯ ಕ್ಷಣವನ್ನ ಕಿತ್ತುಕೊಂಡಿದೆ. ಅವರು ನನ್ನ ಹಣ ವಾಪಸ್ ಕೊಡಬಹುದು. ಆದ್ರೆ ಮಗನ ನಾಮಕರಣ ಕ್ಷಣವನ್ನ ವಾಪಸ್ ಕೊಡುತ್ತಾರಾ? ಇಂಡಿಗೋ ಏರ್ಲೈನ್ಸ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.