ತಪ್ಪಾದ ಅಥವಾ ವಂಚನೆಯ ವಹಿವಾಟಿನ ಸಂದರ್ಭದಲ್ಲಿ ಹಣ ವಾಪಸ್ ಪಡೆಯುವುದು ಹೇಗೆ?
ಆನ್ಲೈನ್ನಲ್ಲಿ ತಪ್ಪಾಗಿ ವಹಿವಾಟು ಮಾಡಿದರೆ ಅಥವಾ ವಂಚನೆಯಾದರೆ ಆ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬುದರ ವಿವರ ಈ ಲೇಖನದಲ್ಲಿದೆ.
ಹಣವನ್ನು ವರ್ಗಾಯಿಸುವಾಗ ಒಬ್ಬ ವ್ಯಕ್ತಿಯು ವಹಿವಾಟಿನಲ್ಲಿ ತಪ್ಪು ಮಾಡಬಹುದು ಅಥವಾ ವರ್ಗಾವಣೆಯಲ್ಲಿ ವಂಚನೆ ಆಗಬಹುದು. ಆದರೆ ಮೊಬೈಲ್ ಅಪ್ಲಿಕೇಷನ್‌ಗಳು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಯುಪಿಐ ವಹಿವಾಟುಗಳು ಜನರಿಗೆ ಹಣಕಾಸಿನ ವಹಿವಾಟು ಪ್ರಕ್ರಿಯೆಯನ್ನು ಹೆಚ್ಚು ಸುಲಭವಾಗಿಸಿದೆ ಎಂಬುದಂತೂ ನಿಜ. ಆದರೆ ಒಬ್ಬರು ತಪ್ಪಾದ ಖಾತೆಗೆ ಹಣವನ್ನು ವರ್ಗಾಯಿಸಿದರೆ ಏನಾಗುತ್ತದೆ ಗೊತ್ತಾ? ಈ ಲೇಖನದಲ್ಲಿ ತಿಳಿಸುವಂತೆ ಕೆಲವು ಸುಲಭ ವಿಧಾನಗಳೊಂದಿಗೆ ಹಣವನ್ನು ಮೂಲ ಖಾತೆಗೆ ಮರುಪಾವತಿ ಮಾಡಬಹುದು. ವಂಚನೆ ವಹಿವಾಟು ಅಥವಾ ತಪ್ಪು ವಹಿವಾಟು ಯಾವುದು ಎಂಬ ಬಗ್ಗೆ ಒಬ್ಬರು ಆಯಾ ನೋಂದಾಯಿತ ಬ್ಯಾಂಕ್‌ಗೆ ತಿಳಿಸಬೇಕು. ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಬಹುದು ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಬಹುದು. ಸ್ವೀಕರಿಸುವವರ ಬ್ಯಾಂಕ್ ಖಾತೆ, ಸಮಯ ಮತ್ತು ದಿನಾಂಕದಂತಹ ವಹಿವಾಟಿನ ಎಲ್ಲ ವಿವರಗಳನ್ನು ಹಂಚಿಕೊಂಡು, ದೋಷವನ್ನು ನಮೂದಿಸಬೇಕು. ಆ ಸಂದರ್ಭದಲ್ಲಿ ಬ್ಯಾಂಕ್ ಸ್ವೀಕರಿಸುವವರಿಂದ ಅನುಮತಿ ಕೇಳುತ್ತದೆ. ಆದರೆ ಈ ಪ್ರಕರಣಗಳು ಬಗೆಹರಿಯಲು ಬಹಳ ಸಮಯ ತೆಗೆದುಕೊಳ್ಳಬಹುದು.
ಆರ್‌ಬಿಐ ಮಾರ್ಗಸೂಚಿ ಈಗ ವಂಚನೆ ವಹಿವಾಟು ಪ್ರಕರಣಗಳು ಹೆಚ್ಚುತ್ತಿವೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ವಿಷಯದ ಬಗ್ಗೆ ಕಾಳಜಿ ವಹಿಸಿದೆ. ಆದ್ದರಿಂದ ಎಟಿಎಂ ಅಥವಾ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣಕಾಸಿನ ವಹಿವಾಟು ಪೂರ್ಣಗೊಳಿಸಿದ ತಕ್ಷಣ ಸಂದೇಶ ಕಳುಹಿಸುವ ಹಂತವನ್ನು ಆರಂಭಿಸಿದೆ. ವಹಿವಾಟಿನ ನಂತರ, “ವಹಿವಾಟು ತಪ್ಪಾಗಿದ್ದರೆ ದಯವಿಟ್ಟು ಈ ಸಂದೇಶವನ್ನು ಈ ಫೋನ್ ಸಂಖ್ಯೆಗೆ ಕಳುಹಿಸಿ” ಎಂಬ ಸಂದೇಶವು ಬರುತ್ತದೆ. ವಹಿವಾಟು ತಪ್ಪು ಅಥವಾ ವಂಚನೆ ಎಂದು ಗಮನಿಸಿದರೆ ಈ ಆಯ್ಕೆಯನ್ನು ಬಳಸಿಕೊಳ್ಳಬಹುದು ಮತ್ತು ನೀವು ಹಣವನ್ನು ವರ್ಗಾಯಿಸಿಲ್ಲ ಅಥವಾ ತಪ್ಪಾಗಿ ಮಾಡಿದೆ ಎಂದು ನಮೂದಿಸುವ ಸಂದೇಶವನ್ನು ಕಳುಹಿಸಬಹುದು. ಆಕಸ್ಮಿಕವಾಗಿ ಹಣವನ್ನು ಕಳುಹಿಸಿದರೆ ಬ್ಯಾಂಕ್ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ಉಲ್ಲೇಖಿಸಿದೆ.
ಕಾನೂನು ಕ್ರಮ ಕೈಗೊಳ್ಳಬೇಕು ತಪ್ಪಾಗಿ ವಹಿವಾಟು ನಡೆಸಿದ ಪ್ರಕರಣವನ್ನು ಎದುರಿಸಿದರೆ, ಸ್ವೀಕರಿಸುವವರು ಹಣವನ್ನು ಹಿಂತಿರುಗಿಸಲು ನಿರಾಕರಿಸಿದರೆ ಅಂಥವರ ವಿರುದ್ಧ ಕಾನೂನು ಮೊಕದ್ದಮೆ ಹೂಡಬಹುದು. ಆದರೆ ನ್ಯಾಯಾಲಯವು ಈ ವಿಷಯದಲ್ಲಿ ಭಾಗಿ ಆಗುವುದರಿಂದ ಕಾನೂನು ಪ್ರಕರಣಗಳು ಬಹಳ ಸಮಯ ತೆಗೆದುಕೊಳ್ಳಬಹುದು. ವಹಿವಾಟನ್ನು ನ್ಯಾಯಾಲಯ ಮತ್ತು ಬ್ಯಾಂಕ್ ಸಂಪೂರ್ಣವಾಗಿ ವಿಶ್ಲೇಷಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾರ್ಗಸೂಚಿಗಳಲ್ಲಿ ತಪ್ಪು ವಹಿವಾಟು ನಡೆಸಿದ್ದರೆ ಸ್ವೀಕರಿಸುವವರ ಖಾತೆಯ ಎಲ್ಲ ಸರಿಯಾದ ವಿವರಗಳನ್ನು ಬ್ಯಾಂಕಿನೊಂದಿಗೆ ಹಂಚಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಮತ್ತು ಆ ತಪ್ಪಿಗೆ ಬ್ಯಾಂಕ್ ಜವಾಬ್ದಾರ ಆಗಿರುವುದಿಲ್ಲ.
ಆದರೂ ಸ್ವೀಕರಿಸುವವರ ಬ್ಯಾಂಕ್ ಖಾತೆಯನ್ನು ನಮೂದಿಸಲು ತಪ್ಪು ಮಾಡಿದ್ದರೆ ಮತ್ತು ಖಾತೆ ಅಮಾನ್ಯವಾಗಿದ್ದರೆ, ನಂತರ ಹಣವು ನಿಮ್ಮ ಖಾತೆಗೆ ಸ್ವಯಂಚಾಲಿತವಾಗಿ ಮರಳಿ ಜಮಾ ಆಗುತ್ತದೆ. ಹೆಚ್ಚಾಗಿ, ಅಮಾನ್ಯ ಖಾತೆಯ ಸಂದರ್ಭದಲ್ಲಿ ನಿಮ್ಮ ಹಣವನ್ನು UPI ಮೂಲಕ ಡೆಬಿಟ್ ಮಾಡುವುದಿಲ್ಲ.
ಇದನ್ನೂ ಓದಿ: RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್ಲೈನ್ನಲ್ಲಿ ಸೇವ್ ಆಗಲ್ಲ; ಇಲ್ಲಿದೆ ಆರ್‌ಬಿಐ ಹೊಸ ನಿಯಮ