Wimbledon 2025: 23 ವರ್ಷದ ಯಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್
Jannik Sinner: ಯಾನಿಕ್ ಸಿನ್ನರ್ 23ನೇ ವಯಸ್ಸಿನಲ್ಲಿ 4ನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ತನ್ನದಾಗಿಸಿಕೊಂಡರು. ಇದಕ್ಕೂ ಮುನ್ನ ಯಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024, ಯುಎಸ್ ಓಪನ್ 2024, ಆಸ್ಟ್ರೇಲಿಯನ್ ಓಪನ್ 2025 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಪ್ರತಿಷ್ಠಿತ ವಿಂಬಲ್ಡನ್ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಡನ್ ಸೆಂಟರ್ ಕೋರ್ಟ್ನಲ್ಲಿ ನಡೆದ ವಿಂಬಲ್ಡನ್ 2025ರ ಪುರುಷರ ಫೈನಲ್ನಲ್ಲಿ ಇಟಲಿಯ ಯಾನಿಕ್ ಸಿನ್ನರ್ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಚೊಚ್ಚಲ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪೇನ್ನ ಯುವ ಟೆನಿಸ್ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಝ್ ನಡುವಣ ಈ ಮುಖಾಮುಖಿಯ ಮೊದಲ ಸೆಟ್ನಲ್ಲಿ ಸಿನ್ನರ್ ಹಿನ್ನಡೆ ಹೊಂದಿದ್ದರು.
ಆರಂಭದಿಂದಲೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಕಾರ್ಲೋಸ್ ಅಲ್ಕರಾಝ್ 6-4 ಅಂತರದಿಂದ ಗೆದ್ದುಕೊಂಡರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಯಾನಿಕ್ ಸಿನ್ನರ್ ಬ್ಯಾಕ್ ಟು ಬ್ಯಾಕ್ ಮೂರು ಸೆಟ್ಗಳನ್ನು 6-4, 6-4 6-4 ಅಂತರದಿಂದ ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಈ ಮೂಲಕ 23ನೇ ವಯಸ್ಸಿನಲ್ಲಿ 4ನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ತನ್ನದಾಗಿಸಿಕೊಂಡರು. ಇದಕ್ಕೂ ಮುನ್ನ ಯಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024, ಯುಎಸ್ ಓಪನ್ 2024, ಆಸ್ಟ್ರೇಲಿಯನ್ ಓಪನ್ 2025 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಪ್ರತಿಷ್ಠಿತ ವಿಂಬಲ್ಡನ್ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

