AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೀಟರ್ ಡೀಸೆಲ್ ದರ 100ರ ಗಡಿ ದಾಟಿದೆ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.37 ರೂ. ಆಗಿದ್ದರೆ, ರಾಯಚೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.25 ರೂಪಾಯಿ ಇದೆ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: sandhya thejappa|

Updated on:Oct 17, 2021 | 10:42 AM

Share

ಹುಬ್ಬಳ್ಳಿ: ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ್ದಾರೆ. ತೈಲ ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಅಂತ ತಿಳಿಸಿದ್ದಾರೆ.

ಎಷ್ಟಿದೆ ಡೀಸೆಲ್ ದರ? ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೀಟರ್ ಡೀಸೆಲ್ ದರ 100ರ ಗಡಿ ದಾಟಿದೆ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.37 ರೂ. ಆಗಿದ್ದರೆ, ರಾಯಚೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.25 ರೂಪಾಯಿ, ತುಮಕೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 100.84 ರೂಪಾಯಿ, ಕಲಬುರಗಿಯಲ್ಲಿ ಲೀಟರ್ ಡೀಸೆಲ್ ಬೆಲೆ 100.16 ರೂಪಾಯಿ ಹಾಗೂ ರಾಮನಗರದಲ್ಲಿ ಲೀಟರ್ ಡೀಸೆಲ್ ಬೆಲೆ 100.67 ರೂಪಾಯಿಗೆ ಏರಿಕೆ ಆಗಿದೆ. ಬೀದರ್​ನಲ್ಲಿ ಲೀಟರ್ ಡೀಸೆಲ್ ಬೆಲೆ 101.22 ರೂಪಾಯಿ ಹಾಗೂ ಚಿತ್ರದುರ್ಗದಲ್ಲಿ ಲೀಟರ್ ಡೀಸೆಲ್ ಬೆಲೆ 101.93 ರೂಪಾಯಿ ಇದೆ. ಪ್ರತಿದಿನ ಸಾಗುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ದರ ಇನ್ನಷ್ಟು ಏರಿಕೆಯಾಗುತ್ತಿರುವುದನ್ನು ಕಂಡು ವಾಹನ ಸವಾರರು ಬೇಸರ ಹೊರಹಾಕಿದ್ದಾರೆ.

ಎಷ್ಟಿದೆ ಪೆಟ್ರೋಲ್ ಬೆಲೆ? ಇಂದು ರಾಯಚೂರಿನಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 109.35 ರೂ. ಇದೆ. ತುಮಕೂರಿನಲ್ಲಿ 108.08 ರೂ, ಕಲಬುರಗಿಯಲ್ಲಿ ಪೆಟ್ರೋಲ್ 109.26, ಬೀದರ್​ನಲ್ಲಿ 110.42, ಚಿತ್ರದುರ್ಗದಲ್ಲಿ 111.30, ಮಂಡ್ಯದಲ್ಲಿ 109.28, ಯಾದಗಿರಿಯಲ್ಲಿ 109.88, ಚಿಕ್ಕಬಳ್ಳಾಪುರದಲ್ಲಿ 109.59, ಧಾರವಾಡದಲ್ಲಿ 109.26 ರೂ ಇದೆ. ಇನ್ನು ವಿಜಯಪುರದಲ್ಲೂ ಒಂದು ಲೀಟರ್ ಪೆಟ್ರೋಲ್​ಗೆ 109.24 ರೂಪಾಯಿ ಆಗಿದೆ.

ಇದನ್ನೂ ಓದಿ

ಕೌಟುಂಬಿಕ ಕಲಹ: ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಹತ್ಯೆ; ಪತಿಯು ನೇಣಿಗೆ ಶರಣು

T20 World Cup 2021: ಟಿ20 ವಿಶ್ವಕಪ್ ಕಾವು ಶುರು: ಅರ್ಹಾತಾ ಸುತ್ತಿನಲ್ಲಿಂದು ಎರಡು ಪಂದ್ಯ: ಸೂಪರ್ 12ಗಾಗಿ ಹೋರಾಟ

Published On - 9:27 am, Sun, 17 October 21

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ