AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೌಟುಂಬಿಕ ಕಲಹ: ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ತಾನೂ ನೇಣಿಗೆ ಶರಣಾದ ಪತಿ

18 ವರ್ಷದ ಹಿಂದೆ ಇಂದ್ರಮ್ಮ ಮತ್ತು ದೇಸಿಗೌಡ ವಿವಾಹವಾಗಿದ್ದರು. ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದ ದಂಪತಿ, ಕೊವಿಡ್ ಹಿನ್ನೆಲೆ ಗುಡ್ಡ ವೀರನಹೊಸಹಳ್ಳಿ ಗ್ರಾಮಕ್ಕೆ ವಾಪಾಸ್ ಬಂದು ನೆಲೆಸಿದ್ದರು. ಆದರೆ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ಕೌಟುಂಬಿಕ ಕಲಹ: ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ತಾನೂ ನೇಣಿಗೆ ಶರಣಾದ ಪತಿ
ಮನೆಯಲ್ಲಿ ಪತ್ನಿ ಕತ್ತು ಕೊಯ್ದು ಕೊಲೆ
TV9 Web
| Updated By: preethi shettigar|

Updated on:Oct 17, 2021 | 9:18 AM

Share

ರಾಮನಗರ: ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆ ಮಾಡಿದ್ದು, ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗುಡ್ಡ ವೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಇಂದ್ರಮ್ಮ(35)ನನ್ನು ಕೊಲೆ ಮಾಡಿದ ಪತಿ ದೇಸಿಗೌಡ(40) ತಾನು ಕೂಡ ನೇಣಿಗೆ ಶರಣಾಗಿದ್ದಾನೆ. ಸದ್ಯ ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 ವರ್ಷದ ಹಿಂದೆ ಇಂದ್ರಮ್ಮ ಮತ್ತು ದೇಸಿಗೌಡ ವಿವಾಹವಾಗಿದ್ದರು. ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದ ದಂಪತಿ, ಕೊವಿಡ್ ಹಿನ್ನೆಲೆ ಗುಡ್ಡ ವೀರನಹೊಸಹಳ್ಳಿ ಗ್ರಾಮಕ್ಕೆ ವಾಪಾಸ್ ಬಂದು ನೆಲೆಸಿದ್ದರು. ಆದರೆ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಂದ್ರಮ್ಮ ಮಲಗಿದ್ದ ವೇಳೆ ಚಾಕುವಿನಿಂದ ಕತ್ತು ಕೊಯ್ದು ಪತಿ ಕೊಲೆ ಮಾಡಿದ್ದಾನೆ. ನಂತರ‌ ತನ್ನ ಜಮೀನಿನಲ್ಲಿ ದೇಸಿಗೌಡ ನೇಣಿಗೆ ಶರಣಾಗಿದ್ದಾನೆ.

ತುಮಕೂರು: ಬಸ್-ಗೂಡ್ಸ್ ವಾಹನ ಮಧ್ಯೆ ಡಿಕ್ಕಿ, ನಾಲ್ವರ ಸಾವು ಖಾಸಗಿ ಬಸ್ ಮತ್ತು ಗೂಡ್ಸ್ ವಾಹನದ ಮಧ್ಯೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ತುಮಕೂರು ತಾಲೂಕಿನ ಗೊಲ್ಲಹಳ್ಳಿಯ ಬಳಿಯ ತುಮಕೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಬೆಳಗಿನ ಜಾವ 5.30ರ ಸಮಯದಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ತುಮಕೂರು ಎಎಸ್​ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

ವಿಜಯಪುರ: ಪತ್ನಿಗೆ ಸಂಬಂಧಿಯ ಜೊತೆ ಅಕ್ರಮ ಸಂಬಂಧ; ಮನನೊಂದ ಪತಿ ಆತ್ಮಹತ್ಯೆಗೆ ಶರಣು

ಅರ್ಚಕನನ್ನು ದೇಗುಲದ ಆವರಣದಲ್ಲೇ ಹತ್ಯೆಗೈದ ದುಷ್ಕರ್ಮಿಗಳು; ಪುತ್ರನೇ ಕಾರಣವಂತೆ ತಂದೆಯ ಕೊಲೆಗೆ !

Published On - 9:11 am, Sun, 17 October 21