ಅರ್ಚಕನನ್ನು ದೇಗುಲದ ಆವರಣದಲ್ಲೇ ಹತ್ಯೆಗೈದ ದುಷ್ಕರ್ಮಿಗಳು; ಪುತ್ರನೇ ಕಾರಣವಂತೆ ತಂದೆಯ ಕೊಲೆಗೆ !

TV9 Digital Desk

| Edited By: Lakshmi Hegde

Updated on: Oct 14, 2021 | 3:51 PM

Bihar: ಇದೀಗ ಹತ್ಯೆಯಾಗಿರುವ ಕಂಕಾಲಿ ದೇಗುಲದ ಮುಖ್ಯ ಅರ್ಚಕರು ಸ್ವಲ್ಪ ದಿನಗಳ ಹಿಂದೆ ಕೆಲವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಅರ್ಚಕನನ್ನು ದೇಗುಲದ ಆವರಣದಲ್ಲೇ ಹತ್ಯೆಗೈದ ದುಷ್ಕರ್ಮಿಗಳು; ಪುತ್ರನೇ ಕಾರಣವಂತೆ ತಂದೆಯ ಕೊಲೆಗೆ !
ಸ್ಥಳೀಯ ಚಿತ್ರಣ
Follow us

ಬಿಹಾರದ ಧರ್ಬಾಂಗ ಜಿಲ್ಲೆಯಲ್ಲಿ  ಯೂನಿವರ್ಸಿಟಿ ಪೊಲೀಸ್​ ಠಾಣೆ ವ್ಯಾಪ್ತಿಯ ರಾಮನಗರ ಮೊಹಲ್ಲಾದಲ್ಲಿ ಇರುವ  ಕಂಕಾಲಿ ದೇವಸ್ಥಾನದಲ್ಲಿ ಮುಖ್ಯ ಅರ್ಚಕನನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಇಂದು ಮುಂಜಾನೆ ದೇಗುಲದ ಆವರಣದಲ್ಲಿಯೇ ದುರ್ಘಟನೆ ನಡೆದಿದ್ದು, ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಇನ್ನು ಮುಖ್ಯ ಅರ್ಚಕರ ಹತ್ಯೆ ಮಾಡುತ್ತಿದ್ದಂತೆ ಅಲ್ಲಿಯೇ ಸುತ್ತಮುತ್ತಲೂ ಇದ್ದ ಜನರು, ದೇಗುಲಕ್ಕೆ ಆಗಮಿಸಿದ್ದ ಭಕ್ತರು ಸೇರಿ, ಆಕ್ರಮಣ ಮಾಡಿದವರಲ್ಲಿ ಒಬ್ಬನನ್ನು ಹಿಡಿದು, ಥಳಿಸಿಯೇ ಕೊಂದಿದ್ದಾರೆ. ಅಷ್ಟೇ ಅಲ್ಲ, ಕಾರನ್ನೂ ಹಾಳುಮಾಡಿದ್ದಾರೆ. 

ಇದೀಗ ಹತ್ಯೆಯಾಗಿರುವ ಕಂಕಾಲಿ ದೇಗುಲದ ಮುಖ್ಯ ಅರ್ಚಕರು ಸ್ವಲ್ಪ ದಿನಗಳ ಹಿಂದೆ ಕೆಲವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಕೆಲವು ಗೂಂಡಾಗಳು ಕಂಠಪೂರ್ತಿ ಕುಡಿದು ತೊಂದರೆಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಪೊಲೀಸರು ಆಗ ಯಾವುದೇ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ.  ಅದಾದ ನಂತರ ಒಂದುದಿನ ಈ ಅರ್ಚಕರು ತಮ್ಮ ರಾಮ್​ಬಾಘ್​​ನಲ್ಲಿರುವ ಮನೆಯಲ್ಲಿ ರಾತ್ರಿ ಮಲಗಿದ್ದಾಗ ಇದೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು ಎಂದೂ ಹೇಳಲಾಗಿದೆ. ಆದರೆ ಈಗ ದೇಗುಲದ ಆವರಣದಲ್ಲಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಗಲಾಟೆಯಲ್ಲಿ ಭಕ್ತರೊಬ್ಬರಿಗೂ ಗಾಯವಾಗಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ.

ಪೊಲೀಸರು ಹೇಳಿದ್ದೇನು? ಈ ಜಗಳ ಶುರುವಾಗಿದ್ದು ಅರ್ಚಕನ ಮಗನಿಂದ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಒಟ್ಟು ನಾಲ್ವರು ಗೂಂಡಾಗಳು ಅರ್ಚಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದರಲ್ಲೊಬ್ಬ ಆರೋಪಿ ಮತ್ತು ಅರ್ಚಕನ ಮಗನ ಮಧ್ಯೆ ಮೊಬೈಲ್​ ವಿಚಾರಕ್ಕೆ ಜಗಳ ಆಗಿತ್ತು ಎಂಬುದು ಗೊತ್ತಾಗಿದೆ. ಮಧ್ಯಪ್ರವೇಶಿಸಿದ್ದ ಅರ್ಚಕರ ಮೇಲೆಯೂ ಅವರ ದ್ವೇಷ ತಿರುಗಿತ್ತು. ದಾಳಿ ನಡೆಸಿದ ನಾಲ್ವರಲ್ಲಿ ಮೂವರನ್ನು ಸ್ಥಳೀಯರು, ಭಕ್ತರು ಸೇರಿ ಥಳಿಸಿದ್ದಾರೆ. ಒಬ್ಬನನ್ನು ಹತ್ಯೆಗೈದಿದ್ದಾರೆ. ತಪ್ಪಿಸಿಕೊಂಡಿರುವ ಒಬ್ಬನನ್ನು ಆದಷ್ಟು ಶೀಘ್ರವೇ ಬಂಧಿಸುತ್ತೇವೆ. ಸಿಸಿಟಿವಿ ಫೂಟೇಜ್​​ಗಳ ಪರಿಶೀಲನೆಯೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಇದೀಗ ಸ್ಥಳೀಯರಿಂದ ಹತ್ಯೆಗೀಡಾಗಿರುವ ದಾಳಿಕೋರನ ಹೆಸರು ಪುಲ್​ಕಿತ್​ ಸಿಂಗ್​. ಈತನ ತಂದೆ ಧರ್ಬಾಂಗಾದಲ್ಲಿರುವ ಯೂನಿವರ್ಸಿಟಿಯೊಂದರ ಕ್ಲರ್ಕ್​.  ಈಗ ಸಿಕ್ಕಿಬಿದ್ದಿರುವ ಆರೋಪಿಗಳೇನೂ ವೃತ್ತಿಪರ ಕ್ರಿಮಿನಲ್​ಗಳಲ್ಲ. ಅವರ ಹಿನ್ನೆಲೆಯಲ್ಲಿ ಹಿಂದೆ ಇಂಥ ಕೃತ್ಯನಡೆಸಿಲ್ಲ. ಆದರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಶುರು ಮಾಡಿದ್ದೇವೆ ಎಂದಿದ್ದಾರೆ.  ಹಾಗೇ, ಥಳಿತಕ್ಕೊಳಗಾಗಿ ಗಾಯಗೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Real Estate: ಹೈದರಾಬಾದ್​ನಲ್ಲಿ 4.3 ಲಕ್ಷ ಚದರಡಿಯ ಕಚೇರಿ ಕಟ್ಟಡಗಳು 247.5 ಕೋಟಿ ರೂಪಾಯಿಗೆ ಖರೀದಿ

ಸೌರ ಶಕ್ತಿ ಬಳಸಿ ಇಸ್ತ್ರಿ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಮಿಳುನಾಡಿನ ಬಾಲಕಿ; ಪ್ರತಿಷ್ಠಿತ ‘ಇಕೋ ಆಸ್ಕರ್’ಗೆ ನಾಮ ನಿರ್ದೇಶನ

ತಾಜಾ ಸುದ್ದಿ

Related Stories

Click on your DTH Provider to Add TV9 Kannada