AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Real Estate: ಹೈದರಾಬಾದ್​ನಲ್ಲಿ 4.3 ಲಕ್ಷ ಚದರಡಿಯ ಕಚೇರಿ ಕಟ್ಟಡಗಳು 247.5 ಕೋಟಿ ರೂಪಾಯಿಗೆ ಖರೀದಿ

ಹೈದರಾಬಾದ್​ನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಭಾರೀ ದೊಡ್ಡ ಮೊತ್ತಕ್ಕೆ ಕಚೇರಿ ಸ್ಥಳವನ್ನು ಖರೀದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇದು ದೊಡ್ಡ ಮೊತ್ತದ ವ್ಯವಹಾರ ಇದಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Real Estate: ಹೈದರಾಬಾದ್​ನಲ್ಲಿ 4.3 ಲಕ್ಷ ಚದರಡಿಯ ಕಚೇರಿ ಕಟ್ಟಡಗಳು 247.5 ಕೋಟಿ ರೂಪಾಯಿಗೆ ಖರೀದಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 14, 2021 | 2:43 PM

Share

ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ವಾಣಿಜ್ಯ ಒಪ್ಪಂದಗಳಲ್ಲಿ ಇದೂ ಒಂದು. ರಿಯಲ್ ಎಸ್ಟೇಟ್ ಸಂಸ್ಥೆ ಅಪರ್ಣಾ ಕನ್​ಸ್ಟ್ರಕ್ಷನ್ಸ್ 4.3 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ಕಟ್ಟಡಗಳನ್ನು ಹೈದರಾಬಾದ್​ನಲ್ಲಿ 247.5 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ಪ್ರಾಪ್ ಸ್ಟಾಕ್​ಗೆ ಲಭ್ಯವಾದ ದಾಖಲೆಗಳು ತೋರಿಸಿವೆ. ಮಾರಾಟ ಪತ್ರವನ್ನು ಸೆಪ್ಟೆಂಬರ್ 20, 2021ರಂದು ನೋಂದಾಯಿಸಲಾಗಿದೆ. ಕಚೇರಿ ಜಾಗವನ್ನು ಮಾರಾಟ ಮಾಡಿರುವುದು ENN ENN ಕಾರ್ಪ್ ಲಿಮಿಟೆಡ್. ಇದನ್ನು ಮೊದಲು ಅಭಿಷೇಕ್ ಗ್ರೂಪ್ ಆಫ್ ಕಂಪೆನಿ ಎಂದು ಕರೆಯಲಾಗುತ್ತಿತ್ತು. ಇದು ರಿಯಲ್ ಎಸ್ಟೇಟ್ ಅಭಿವೃದ್ಧಿ, ರಫ್ತು, ಕಾರ್ಬನ್ ಮುಕ್ತ ವಿದ್ಯುತ್ ಉತ್ಪಾದನೆ ಮತ್ತು ಅಸೆಟ್ ಲೀಸಿಂಗ್ ವ್ಯವಹಾರ ನಡೆಸುತ್ತಿದೆ. ಖರೀದಿದಾರರು ಹೈಟೆಕ್ ಸೈಬರ್‌ಪಜಿಯೊ ಎಲ್‌ಎಲ್‌ಪಿ, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ನೋಂದಾಯಿತ ಕಚೇರಿಯೊಂದಿಗೆ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ ಸಂಸ್ಥೆಯಾಗಿದೆ. ಕಂಪೆನಿಯು ತನ್ನ ಅಧಿಕೃತ ಪಾಲುದಾರ ಅಪರ್ಣಾ ಇನ್​ಫ್ರಾ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಸುತ್ತದೆ ಎಂದು ದಾಖಲೆಗಳು ತೋರಿಸಿವೆ. ಇದು ಸಿ.ವೆಂಕಟೇಶ್ವರ ರೆಡ್ಡಿ ಮತ್ತು ಬಿ. ಸುಬ್ಬಾ ರೆಡ್ಡಿ ಅವರನ್ನು ಖರೀದಿ ಕಾರ್ಯಗತಗೊಳಿಸುವುದಕ್ಕೆ ಅಧಿಕಾರ ನೀಡಿದೆ.

ಮೊದಲ ಪ್ಲಾಟ್ – ಪ್ಲಾಟ್ 8, ಮಾದಾಪುರ ಮುಖ್ಯ ರಸ್ತೆ, ಇಲ್ಲಿ 2,52,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ಇದು ರೂ. 141.57 ಕೋಟಿಗೆ ಮಾರಾಟವಾಗಿದೆ. ಈ ಪ್ಲಾಟ್ ನೆಲ ಮತ್ತು ನಾಲ್ಕು ಮಹಡಿಗಳನ್ನು ಹೊಂದಿದೆ. ಇತರೆ ಪ್ಲಾಟ್‌ಗಳು 3 ಮತ್ತು 4 ಆಗಿದ್ದು, 1,81,500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ನೆಲ ಮತ್ತು ಐದು ಮಹಡಿಗಳನ್ನು ಹೊಂದಿರುವ ಇವನ್ನು ರೂ. 105.93 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ತೋರಿಸಿವೆ. ಅಪರ್ಣಾ ಕನ್​ಸ್ಟ್ರಕ್ಷನ್ಸ್ ಅಥವಾ ಬಿ ಸುಬ್ಬಾ ರೆಡ್ಡಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಮೂರು ಪ್ಲಾಟ್‌ಗಳಿಗೆ ಅರ್ಜಿ ಸಲ್ಲಿಸಿತ್ತು ಎಲ್ ಅಂಡ್ ಟಿ ಇನ್ಫೋಸಿಟಿ ಲಿಮಿಟೆಡ್ 7.88 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಐಟಿ/ಐಟಿಇಎಸ್ ಚಟುವಟಿಕೆಗಳಿಗೆ ಮೀಸಲಾಗಿರುವ ಐಟಿ ಸೌಲಭ್ಯವನ್ನು ಸ್ಥಾಪಿಸಲು 2004ರಲ್ಲಿ ಈ ಮೂರು ಪ್ಲಾಟ್‌ಗಳಿಗೆ ಅರ್ಜಿ ಸಲ್ಲಿಸಿತ್ತು. ಅದೇ ವರ್ಷದಲ್ಲಿ ಕಂಪೆನಿಗೆ ಹಂಚಿಕೆ ಪತ್ರವನ್ನು ನೀಡಲಾಯಿತು. ಕಟ್ಟಡಗಳು 2005ರಲ್ಲಿ ಎದ್ದುನಿಂತವು. ಮಾರಾಟದ ದಾಖಲೆಗಳ ಪ್ರಕಾರ, L&T ನಂತರ 2011 ರಲ್ಲಿ ENN ENNಗೆ ಪ್ಲಾಟ್‌ಗಳನ್ನು ಮಾರಿತು. ENN ENN ಪಡೆದ ಸಾಲಗಳಿಗೆ SCB ಬ್ಯಾಂಕ್ ಆಸ್ತಿಯ ಮೇಲೆ ಹಕ್ಕನ್ನು ಹೊಂದಿತ್ತು. ಈ ಆಸ್ತಿಯಲ್ಲಿ ಬಾಡಿಗೆದಾರರು ಎಚ್‌ಎಸ್‌ಬಿಸಿ ಎಲೆಕ್ಟ್ರಾನಿಕ್ ಡಾಟಾ ಪ್ರೊಸೆಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಗಿದ್ದು, ಇದು ಇತ್ತೀಚೆಗೆ 2021ರ ಸೆಪ್ಟೆಂಬರ್​ನಲ್ಲಿ ಲೀಸ್ ನವೀಕರಿಸಿದೆ.

ಎಚ್‌ಎಸ್‌ಬಿಸಿ ಎಲೆಕ್ಟ್ರಾನಿಕ್ ಡೇಟಾ ಪ್ರೊಸೆಸಿಂಗ್ ಕಟ್ಟಡದಲ್ಲಿ ಎರಡು ಲೀಸ್​ಗಳನ್ನು ಜಾರಿಗೊಳಿಸಿದೆ. 1,81,500 ಚದರ ಅಡಿಯ ಮೊದಲನೆಯದು ಆಗಸ್ಟ್ 21 ರಿಂದ ಡಿಸೆಂಬರ್ 23ರವರೆಗೆ 29 ತಿಂಗಳ ಅವಧಿಗೆ ಪ್ರತಿ ಚದರ ಅಡಿಗೆ ರೂ. 64.5ರಂತೆ ತಿಂಗಳಿಗೆ ರೂ 1.16 ಕೋಟಿ ಬಾಡಿಗೆಗೆ ನಿಗದಿಯಾಗಿದೆ. ಕಂಪೆನಿಯು 6.97 ಕೋಟಿ ರೂ. ಠೇವಣಿ ಇಟ್ಟಿದೆ. ಎರಡನೇ ಲೀಸ್ 2,52,000 ಚದರ ಅಡಿ ವಿಸ್ತೀರ್ಣದಲ್ಲಿ ಪ್ರತಿ ಚದರ ಅಡಿಗೆ 43.7 ರೂಪಾಯಿಯಂತೆ ರೂ. 1.1 ಕೋಟಿ ಬಾಡಿಗೆಯಲ್ಲಿದೆ. ಕಂಪೆನಿಯು 6.57 ಕೋಟಿ ರೂಪಾಯಿ ಠೇವಣಿ ಪಾವತಿಸಿದೆ.

ಹೈದರಾಬಾದ್ ಕಚೇರಿ ವಹಿವಾಟಿನಲ್ಲಿ ಗಮನಾರ್ಹ ಬೆಳವಣಿಗೆ ನೈಟ್ ಫ್ರಾಂಕ್ ಇಂಡಿಯಾದ ಈಚಿನ ವರದಿ, ಇಂಡಿಯಾ ರಿಯಲ್ ಎಸ್ಟೇಟ್ ಅಪ್‌ಡೇಟ್ – Q3, 2021 ಎಂಬ ಶೀರ್ಷಿಕೆಯಡಿ ಬಂದಿದೆ. ಅದರಲ್ಲಿ ಹೇಳಿರುವಂತೆ, ಇತ್ತೀಚಿನ ತ್ರೈಮಾಸಿಕ ವರದಿಯು ಹೈದರಾಬಾದ್ ಕಚೇರಿ ವ್ಯಾಪ್ತಿಯಲ್ಲಿ 0.19 ಮಿಲಿಯನ್ ಚದರ ಮೀ (ಮಿಲಿಯನ್ ಚದರ ಅಡಿ) ನೊಂದಿಗೆ ಎರಡನೇ ಅತಿ ಹೆಚ್ಚು ವಹಿವಾಟುಗಳನ್ನು ನೋಂದಾಯಿಸಿದೆ ಎಂದು ಹೇಳಿದೆ, ಈ ಅವಧಿಯಲ್ಲಿ ಹೊಸ ಪೂರ್ಣಗೊಳಿಸುವಿಕೆ 0.20 ಮಿಲಿಯನ್ ಚದರ ಮೀ (2.2 ಮಿಲಿಯನ್ ಚದರ ಅಡಿ) ಆಗಿದೆ. 2021ರ ಮೊದಲ ಒಂಬತ್ತು ತಿಂಗಳ ಸಂಚಿತ ಕಚೇರಿ ವಹಿವಾಟುಗಳು 0.33 ಮಿಲಿಯನ್ ಚದರ ಮೀ. (3.7 ಮಿಲಿಯನ್ ಚದರ ಅಡಿ) ದಾಖಲಾಗಿದೆ. ಐಟಿ ಮತ್ತು ಉತ್ಪಾದನಾ ವಲಯದ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಕಚೇರಿ ವಹಿವಾಟಿನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಬಲವಾದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕ ಸ್ನೇಹಿ ಸರ್ಕಾರದ ನೀತಿಗಳು ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ