ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

₹ 45 ಲಕ್ಷಕ್ಕಿಂತಲೂ ಕಡಿಮೆ ಮೌಲ್ಯದ ಮನೆ ನೋಂದಣಿ ವೇಳೆ ಮುದ್ರಾಂಶ ಶುಲ್ಕವನ್ನು ಶೇ 5ರ ಬದಲಿಗೆ ಶೇ 3ಕ್ಕೆ ಇಳಿಸುವ ವಿಚಾರವನ್ನು ವಿಧೇಯಕದ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಪ್ರಸ್ತಾಪಿಸಿದರು.

ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 20, 2021 | 7:15 PM

ಬೆಂಗಳೂರು: ಮುದ್ರಾಂಕ ಶುಲ್ಕ ಕಡಿತಕ್ಕೆ ಅವಕಾಶ ನೀಡುವ ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ₹ 45 ಲಕ್ಷಕ್ಕಿಂತಲೂ ಕಡಿಮೆ ಮೌಲ್ಯದ ಮನೆ ನೋಂದಣಿ ವೇಳೆ ಮುದ್ರಾಂಶ ಶುಲ್ಕವನ್ನು ಶೇ 5ರ ಬದಲಿಗೆ ಶೇ 3ಕ್ಕೆ ಇಳಿಸುವ ವಿಚಾರವನ್ನು ವಿಧೇಯಕದ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಪ್ರಸ್ತಾಪಿಸಿದರು. ಕಳೆದ ಬಜೆಟ್ ಭಾಷಣದಲ್ಲಿಯೇ ಈ ವಿಚಾರವನ್ನು ಹಣಕಾಸು ಸಚಿವರೂ ಆಗಿದ್ದ ಬಿ.ಎಸ್.ಯಡಿಯೂರಪ್ಪ ನಮೂದಿಸಿದ್ದರು.

ಈ ವೇಳೆ ನಿವೇಶನ ಖರೀದಿಗೂ ಮುದ್ರಾಂಕ ಶುಲ್ಕ ವಿನಾಯ್ತಿ ನೀಡುವಂತೆ ಸದಸ್ಯರು ಸಲಹೆ ಮಾಡಿದರು. ವಿಧೇಯಕದ ಬಗ್ಗೆ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ‘ಬಿಲ್ಡರ್​ಗಳಿಗೆ ಸಹಾಯ ಮಾಡಲೆಂದು ವಿಧೇಯಕ ಮಂಡಿಸಿದ್ದೀರಿ, ನಿಜಕ್ಕೂ ಬಡವರಿಗೆ ಸಹಾಯ ಮಾಡುವ ಉದ್ದೇಶ ನಿಮ್ಮದಾಗಿದ್ದರೆ ನಿವೇಶನಗಳಿಗೂ ರಿಯಾಯಿತಿ ನೀಡಿ’ ಎಂದರು.

ಗೃಹ ನಿರ್ಮಾಣ ಚಟುವಟಿಕೆಗೆ ಬಳಕೆಯಾಗುವ ಎಲ್ಲ ಆಸ್ತಿಗಳ ಮುದ್ರಾಂಕ ಶುಲ್ಕಕ್ಕೆ ವಿನಾಯ್ತಿ ಕೊಡಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ‘ಬಡವರಿಗೆ ಸಹಾಯ ಮಾಡುವುದೇ ಉದ್ದೇಶವಾಗಿದ್ದರೆ ಮುದ್ರಾಂಕ ಮೌಲ್ಯವನ್ನು ಶೇ 3ರ ಬದಲು ಶೇ 1ಕ್ಕೆ ಇಳಿಸಿ’ ಎಂದು ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಆಗ್ರಹಿಸಿದರು. ಕಾವೇರಿದ ಚರ್ಚೆಯ ಬಳಿಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕಕ್ಕೆ ಸದನದ ಅಂಗೀಕಾರ ದೊರೆಯಿತು.

ಧಾರ್ಮಿಕ ಕೇಂದ್ರಗಳ ತೆರವಿಗೆ ಹೊಸ ನಿಯಮಾವಳಿ: ವಿಧೇಯಕ ಮಂಡನೆ ದೇಗುಲಗಳ ತೆರವು ವಿಚಾರವಾಗಿ ಇತ್ತೀಚೆಗೆ ಬಹಳಷ್ಟು ವಾದ- ವಿವಾದ ಸೃಷ್ಟಿಯಾಗಿದ್ದವು. ಈ ಬಗ್ಗೆ ವಿಧೇಯಕದ ಮೂಲಕ ಹೊಸ ನಿಯಮಾವಳಿ ರೂಪಿಸಲು ಇದೀಗ ಸರ್ಕಾರ ನಿರ್ಧಾರ ಕೈಗೊಂಡಿದೆ. ಅದರಂತೆ ಕೋರ್ಟ್​​ ತೀರ್ಪು ಇದ್ದರೂ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಆಯಾ ಧಾರ್ಮಿಕ ಸ್ಥಳ ಇದ್ದರೆ ಅಂತಹ ಧಾರ್ಮಿಕ ಸಂಸ್ಥೆಗಳನ್ನ ತೆರವು ಮಾಡುವಂತಿಲ್ಲ ಎಂದು ಹೊಸ ನಿಯಮಾವಳಿ ರೂಪಿಸಲು ಸರ್ಕಾರ ತೀರ್ಮಾನಿಸಿದೆ.

ಸರ್ಕಾರದ ನಿಯಮಗಳಿಂದ ಹೊರಗಿದ್ದರೆ ಮಾತ್ರ ಅಂತಹ ಧಾರ್ಮಿಕ ಸ್ಥಳ ತೆರವು ಮಾಡಬಹುದು. ಅಂತಹ ಧಾರ್ಮಿಕ‌ ಸಂಸ್ಥೆಗಳ ಕಟ್ಟಡಗಳು ಮಾತ್ರ ತೆರವು ಮಾಡಬಹುದು. ವಿಧೇಯಕ ಅಂಗೀಕಾರಗೊಂಡ ಬಳಿಕ ಈ ನಿಯಮಾವಳಿ ಜಾರಿ ಆಗಲಿದೆ. ಶೀಘ್ರದಲ್ಲೇ ಸರ್ಕಾರ ನಿಯಮಾವಳಿ ರೂಪಿಸುವ ಸಾಧ್ಯತೆ ಇದೆ.

ವಿಧೇಯಕದ ಮೂಲಕ ಹೊಸ ನಿಯಾಮವಳಿ ರೂಪಿಸಲು ಸರ್ಕಾರ ನಿರ್ಧಾರ ಮಾಡಿದೆ. ನ್ಯಾಯಾಲಯದ ತೀರ್ಪು ಇದ್ದರೂ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಇದ್ದರೆ ಆ ಧಾರ್ಮಿಕ ಸಂಸ್ಥೆಗಳನ್ನ ತೆರವು ಮಾಡುವಂತಿಲ್ಲ. ಸರ್ಕಾರದ ನಿಯಮಾವಳಿಯಿಂದ ಹೊರಗೆ ಇದ್ದರೆ ಆ ಧಾರ್ಮಿಕ‌ ಸಂಸ್ಥೆಗಳ ಕಟ್ಟಡಗಳು ಮಾತ್ರ ತೆರವು ಮಾಡಬಹುದು. ಈ ವಿಧೇಯಕ ಅಂಗೀಕಾರಗೊಂಡ ಬಳಿಕ ಶೀಘ್ರದಲ್ಲೇ ನಿಯಮಾವಳಿ ರೂಪಿಸುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳನ್ನ ಹೊಸದಾಗಿಯೂ ನಿರ್ಮಿಸಲು ಅವಕಾಶ ಇರುವುದಿಲ್ಲ. ಸರ್ಕಾರಕ್ಕೆ ಸೇರಿದ ಜಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಂದೆ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಾರ್ವಜನಿಕ ದೇಗುಲ ತೆರವು ತಡೆಯಲು ಪ್ರತ್ಯೇಕ ವಿಧೇಯಕ ಮಂಡನೆಗೆ ಸಂಪುಟ ಸಭೆ ನಿರ್ಧಾರ

ಇದನ್ನೂ ಓದಿ: ಶಾಸಕರ ಗಮನಕ್ಕೆ ತಾರದೆ ಸಂಸದರು ಸಭೆ ಕರೆಯಬಹುದೇ? ಕಾರ್ಯವ್ಯಾಪ್ತಿ ಸ್ಪಷ್ಟಪಡಿಸಲು ಎಚ್​ಡಿಕೆ ಪ್ರಸ್ತಾಪ

(Karnataka Stamp Amendment Bill Passed in Karnataka Assembly R Ashok Proposes)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ