Temple Tour: ಮುಸ್ಲಿಂ ದೊರೆಯ ಮಗಳಿಗೆ ಕಣ್ಣು ಕೊಟ್ಟ ಉಗ್ರನರಸಿಂಹ ಸ್ವಾಮಿಯ ಮಹಿಮೆ ನೋಡಿ
ಗುಮ್ಮಟ ನಗರಿಯ ಗ್ರಾಮದೇವತೆಯಾಗಿ ನೆಲೆ ನಿಂತು ಭಕ್ತರನ್ನು ಸಲಹುತ್ತಿರುವ ಉಗ್ರನರಸಿಂಹ ಸ್ವಾಮಿಯನ್ನ ಸ್ಥಳೀಯರು ದತ್ತಾತ್ರೇಯ ಸ್ವಾಮೀಜಿ ಅಂತಲೂ ಭಕ್ತಿಯಿಂದ ಕರೆಯುತ್ತಾರೆ.
ವಿಜಯಪುರಕ್ಕೆ ನೀವೇನಾದರೂ ಹೋದರೆ ಉಗ್ರನರಸಿಂಹ ಸ್ವಾಮಿಯ ಆಲಯಕ್ಕೆ ಹೋಗಿ. ನರಸಿಂಹ ಸ್ವಾಮಿಯ ದೇವಾಲಯಕ್ಕೊಂದು ಪ್ರದಕ್ಷಿಣೆ ಹಾಕಿ ಬನ್ನಿ. ಉಗ್ರನರಸಿಂಹ ಸ್ವಾಮಿ ನೆಲೆ ನಿಂತಿರುವ ಸ್ಥಳ ಪುರಾಣ ಸಾವಿರಾರು ವರ್ಷಗಳಷ್ಟು ಹಳೆಯದು. ಮುಸ್ಲಿಂ ದೊರೆ ಆದಿಲ್ ಷಾ ಕೂಡ ಉಗ್ರನರಸಿಂಹನ ಕೃಪೆಗೆ ಪಾತ್ರರಾಗಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿದ್ದಾನೆ. ಈ ದೇವಾಲಯ ಶತಶತಮಾನಗಳ ಇತಿಹಾಸವನ್ನು ಹೊಂದಿದೆ. ಗುಮ್ಮಟ ನಗರಿಯ ಗ್ರಾಮದೇವತೆಯಾಗಿ ನೆಲೆ ನಿಂತು ಭಕ್ತರನ್ನು ಸಲಹುತ್ತಿರುವ ಉಗ್ರನರಸಿಂಹ ಸ್ವಾಮಿಯನ್ನ ಸ್ಥಳೀಯರು ದತ್ತಾತ್ರೇಯ ಸ್ವಾಮೀಜಿ ಅಂತಲೂ ಭಕ್ತಿಯಿಂದ ಕರೆಯುತ್ತಾರೆ. ಆದಿಲ್ ಷಾ ಬಳಿಕ ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು ಕೂಡ ನರಸಿಂಹ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರಮಿಸಿದರಂತೆ. ಇನ್ನು ಆದಿಲ್ ಷಾ ಮಗಳಿಗೆ ಉಗ್ರನರಸಿಂಹ ಸ್ವಾಮಿ ಕಣ್ಣು ಕೊಟ್ಟ ಕಥೆಯನ್ನು ವಿಡಿಯೋದಲ್ಲಿದೆ ನೋಡಿ.
Published on: Sep 21, 2021 06:38 AM
Latest Videos